-ಬಂದ್ ಬೆಂಬಲಿಸಿ ಶಾಲಾ-ಕಾಲೇಜು ಬಂದ್ ಮಾಡಲು ಸಂಘ ನಿರ್ಧಾರ
-ಈ ಕಾರ್ಖಾನೆ ತಲೆ ಎತ್ತಿದರೇ ನಾವು ಇರಲು ಸಾಧ್ಯವಿಲ್ಲ – ಹಲವರ ಆಕ್ರೋಶ
-ರಾಷ್ಟ್ರೀಯ ಹಸಿರು ಪೀಠದಲ್ಲಿ ದಾವೆಕನ್ನಡಪ್ರಭ ವಾರ್ತೆ ಕೊಪ್ಪಳ
ಶನಿವಾರ ನಗರದ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ನಡೆದ ಕೊಪ್ಪಳ ಪರಿಸರ ಹಿತರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಒಕ್ಕೊರಳಿನಿಂದ ಈ ಕುರಿತು ನಿರ್ಧರಿಸಲಾಯಿತು ಮತ್ತು ನಿರಂತರವಾಗಿ ಹೋರಾಟ ಮಾಡುವುದಕ್ಕೂ ಸಹ ತೀರ್ಮಾನಿಸಲಾಯಿತು.
ಫೆ. 24ರಂದು ಕೊಪ್ಪಳ ಬಂದ್‌ನ್ನು ಸ್ವಯ ಪ್ರೇರಣೆಯಿಂದ ಮಾಡಲು ಸೇರಿದ್ದ ಎಲ್ಲರೂ ಸಹ ಒಕ್ಕೊರಳಿನಿಂದ ಹೇಳಿದರು. ಇದೊಂದು ದೇಶವೇ ಗಮನ ಸೆಳೆಯುವಂತಹ ಹೋರಾಟವಾಗಬೇಕು ಎಂದು ತೀರ್ಮಾನಿಸಲಾಯಿತು.
ಹಾಗೆ, ವರ್ತಕರು ತಮ್ಮ ಅಂಗಡಿಗಳನ್ನು ಬಂದ್ ಮಾಡಿ, ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ಹೇಳಿದರೆ ಎಲ್ಲ ಸಂಘಟನೆಗಳ ಮುಖಂಡರು ಬಂದ್ ಯಶಸ್ವಿ ಮಾಡುವ ಮೂಲಕ ಮುಂದಿನ ಹೋರಾಟ ರೂಪಿಸೋಣ ಎಂದರು.
ರಾಷ್ಟ್ರೀಯ ಹಸಿರುಪೀಠದ ಮೊರೆ:
ಅಂದಾನಪ್ಪ ಅಂಗಡಿ, ಶರಣಪ್ಪ ಸಜ್ಜನ, ವೀರೇಶ ಮಹಾಂತಯ್ಯನಮಠ, ಕೆ.ಎಂ. ಸಯ್ಯದ್, ಡಾ. ಬಸವರಾಜ ಕ್ಯಾವಟರ್, ಚಾಮರಾಜ ಸವಡಿ, ರವೀಂದ್ರ ವಿ.ಕೆ., ಹನುಮಂತರಾವ್ ಕೆಂಪಳ್ಳಿ, ಸಂಧ್ಯಾ ಮಾದಿನೂರು, ಪೀರಾಹುಸೇನ ಹೊಸಳ್ಳಿ, ಎಸ್.ಕೆ. ವಕ್ಕಳದ, ಚಂದ್ರು ಕವಲೂರು, ಜ್ಯೋತಿ ಗೊಂಡಬಾಳ, ಮಹಾಲಕ್ಷ್ಮಿ ಕಂದಾರಿ, ಕೀರ್ತಿ ಪಾಟೀಲ್, ಮಂಜುನಾಥ ಹಳ್ಳಿಕೇರಿ, ಮಾರ್ಕಂಡಯ್ಯ ಹಿರೇಮಠ, ಸೇರಿದಂತೆ ಅನೇಕರು ಮಾತನಾಡಿ ಬೆಂಬಲಿಸಿದರು. ಸಂಜಯ ಕೋತ್ಬಾಳ, ಸಿದ್ದಣ್ಣ ನಾಲ್ವಡ, ಅಪ್ಪಣ್ಣ ಪದಕಿ, ಕಿಶೋರಿ ಬೂದನೂರು, ಸೋಮನಗೌಡ ಪಾಟೀಲ್, ಪ್ರಹ್ಲಾದ ಅಗಳಿ, ಗಿರೀಶ ಕಣವಿ, ಬಸವರಾಜ ಬಳ್ಳೊಳ್ಳಿ, ವಿಪಿನ್ ತಾಲೇಡ್, ಈಶಪ್ಪ ಮಾದಿನೂರು, ರಾಜು ಬಾಕಳೆ, ಮಂಜುನಾಥ ಅಂಗಡಿ, ಸುಧಾ ಶೆಟ್ಟರ್, ನಿವೇದಿತಾ ಸಂಕ್ಲಾಪುರ, ಅನುಸೂಯಾ ಮಟ್ಟಿ, ಡಾ. ಶ್ರೀನಿವಾಸ ಹ್ಯಾಟಿ, ಮಮತಾ ಶೆಟ್ಟರ್, ರಮೇಶ ತುಪ್ಪದ, ಹುಲಗಪ್ಪ ಕಟ್ಟಿಮನಿ ಸೇರಿದಂತೆ ಅನೇಕರು ಇದ್ದರು. ರಕ್ಷಣಾ ವೇದಿಕೆ ಮುಖಂಡರು, ಕನ್ನಡಪರ ಸಂಘಟನೆಗಳ ಮುಖಂಡರು, ವ್ಯಾಪರಸ್ಥರ ಸಂಘಟನೆಗಳು, ಫೋಟೋ ಗ್ರಾಫರ್ ಸಂಘ, ಮಹಿಳಾ ಸಂಘಟನೆಗಳ, ದಲಿತ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.ಸೋಮನಗೌಡ ವಗರನಾಳ ಪ್ರಾರ್ಥಿಸಿದರು. ಶಿವಕುಮಾರ ಕುಕನೂರು ಸ್ವಾಗತಿಸಿ, ಸೋಮರಡ್ಡಿ ಅಳವಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ ದೇಶಪಾಂಡೆ ನಿರೂಪಿಸಿದರು.
ಮನಕಲುಕಿದ ವೀಡಿಯೋಕಾರ್ಖಾನೆಗಳಿಂದಾದ ಗೋಳನ್ನೊಮ್ಮೆ ನೋಡಿ ಎನ್ನುವ ವೀಡಿಯೋ ನೆರೆದಿದ್ದವರ ಮನಕಲುಕಿತು. ಈಗಾಗಲೇ ಇರುವ ಕಾರ್ಖಾನೆಗಳಿಂದ ಕೊಪ್ಪಳ ತಾಲೂಕಿನ ಹಿರೇಬಗನಾಳ, ಹಾಲವರ್ತಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಅನುಭವಿಸುತ್ತಿರುವ ಯಾತನೆಯನ್ನು ವಿಟಿಯಲ್ಲಿ ನೋಡಿ ಗಾಬರಿಯಾದರು.