ಮಹಿಳೆ ಸಮಾಜದ ಮುಖ್ಯವಾಹಿನಿಗೆ ಬರಬೇಕು

KannadaprabhaNewsNetwork |  
Published : Mar 12, 2024, 02:06 AM IST
೧೧ಕೆಜಿಎಫ್೧ಕೆಜಿಎಫ್ ಸಂಭ್ರಮ್ ನರ್ಸಿಂಗ್ ಕಾಲೇಜಿನಲ್ಲಿ ಮಹಿಳಾ ದಿನಾಚರಣೆಯ ಕಾರ್‍ಯಕ್ರಮ ನಡೆಯಿತು.. ೩ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಶರಾದ ಗಣಪತಿ ಗುರುಸಿದ್ದ ಬಾದಾಮಿ, ರಾಜ್ಯ ವಿಜ್ಞಾನ ಪರಿಷತ್ತು ಕಾರ್ಯದರ್ಶಿಳಾದ ಮಂಜುಳಾ ಭೀಮ್‌ರಾವ್ ಇದ್ದರು. | Kannada Prabha

ಸಾರಾಂಶ

ವಿಶ್ವದಲ್ಲಿ ಅನೇಕ ಮಹಿಳೆಯರು ನಿರಂತರವಾಗಿ ವೈಯುಕ್ತಿಕ ಮತ್ತು ವೃತ್ತಿಪರವಾಗಿ ಅಭಿವೃದ್ದಿಗೆ ಹಲವು ಕೊಡುಗೆಗಳನ್ನು ನೀಡುತ್ತಿದ್ದಾರೆ, ಎಲ್ಲಾ ಮಹಿಳೆಯರು ತಮ್ಮ ಕಠಿಣ ಪರಿಶ್ರಮದ ಮೂಲಕ ಮೆಚ್ಚುಗೆ ಪಡೆಯುತ್ತಿದ್ದಾರೆ

ಕನ್ನಡಪ್ರಭ ವಾರ್ತೆ ಕೆಜಿಎಫ್ಮಹಿಳೆಯರ ರಕ್ಷಣೆಗಾಗಿ ಸರ್ಕಾರ ಅನೇಕ ಕಾನೂನುಗಳನ್ನು ತಂದಿದೆ, ಮಹಿಳೆಯರು ಕಾನೂನುಗಳ ರಕ್ಷಣೆ ಪಡೆದುಕೊಂಡು ಸಮಾಜದಲ್ಲಿ ಸಮಾನವಾಗಿ ತನ್ನ ಬದುಕನ್ನು ರೂಪಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಲು ದೇಶದಲ್ಲಿ ಕಾನೂನಿನ ರಕ್ಷಣೆ ಇದ್ದು, ಮಹಿಳೆಯರು ನಿರ್ಭಯವಾಗಿ ದೇಶದಲ್ಲಿ ಬದಕಲು ಸಾಧ್ಯವಿರುವುದಾಗಿ ೩ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಶರಾದ ಗಣಪತಿ ಗುರುಸಿದ್ದ ಬಾದಾಮಿ ತಿಳಿಸಿದರು.

ನಗರದ ಸಂಭ್ರಮ್ ನರ್ಸಿಂಗ್ ಕಾಲೇಜಿನಲ್ಲಿ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ, ವಿಶ್ವದಲ್ಲಿ ಅನೇಕ ಮಹಿಳೆಯರು ನಿರಂತರವಾಗಿ ವೈಯುಕ್ತಿಕ ಮತ್ತು ವೃತ್ತಿಪರವಾಗಿ ಅಭಿವೃದ್ದಿಗೆ ಹಲವು ಕೊಡುಗೆಗಳನ್ನು ನೀಡುತ್ತಿದ್ದಾರೆ, ಎಲ್ಲಾ ಮಹಿಳೆಯರು ತಮ್ಮ ಕಠಿಣ ಪರಿಶ್ರಮದ ಮೂಲಕ ಮೆಚ್ಚುಗೆ ಪಡೆಯುತ್ತಿದ್ದಾರೆ ಎಂದರು.

ಭ್ರೂಣಹತ್ಯೆಗೆ ಕಠಿಣ ಶಿಕ್ಷೆ

ಹಿರಿಯ ನ್ಯಾಯಾಧೀಶರಾದ ಮುಜಫರ್ ಎ.ಮಾಂಜರಿ ಮಾತನಾಡಿ, ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳ ರಕ್ಷಣೆಗಾಗಿ ಭ್ರೂಣ ಹತ್ಯೆ ಕಾನೂನು ಜಾರಿಯಲ್ಲಿದ್ದು, ಭ್ರೂಣ ಹತ್ಯೆ ಮಾಡುವವರ ವಿರುದ್ದ ಸರಕಾರ ಕಠಿಣ ಕಾನೂನು ರೂಪಿಸಿದೆ. ಪುರುಷ ಪ್ರಧಾನ ಸಮಾನದಲ್ಲಿ ಮಹಿಳೆಯರಿಗೆ ಸಮಾನವಾದ ಆಸ್ತಿ ಹಕ್ಕು, ಮದುವೆಯ ಹಕ್ಕು, ವಿಚ್ಚೇದನ ಪಡೆಯುವ ಹಕ್ಕುಗಳನ್ನು ನೀಡಿರುವುದಾಗಿ ತಿಳಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ವಿಜ್ಞಾನ ಪರಿಷತ್ತು ಕಾರ್ಯದರ್ಶಿ ಮಂಜುಳಾ ಭೀಮ್‌ರಾವ್ ಮಾತನಾಡಿ, ಅಂತರರಾಷ್ಟ್ರೀಯ ಮಹಿಳಾ ದಿನವು ಮಹಿಳೆಯರ ಸಾಧನೆಗಳನ್ನು ಗೌರವಿಸಲು, ಸಮಾಜಕ್ಕೆ ಅವರ ಕೊಡುಗೆಗಳನ್ನು ಸ್ಮರಿಸಲು ಮತ್ತು ಲಿಂಗ ಸಮಾನತೆ ಪ್ರತಿಪಾದಿಸಲು ಆಚರಿಸಲಾಗುತ್ತಿದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ, ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆ ಗುರುತಿಸಲು ಮತ್ತು ಸಮಾನತೆ-ಹಕ್ಕುಗಳನ್ನು ಪ್ರತಿಪಾದಿಸಲು ಮಹಿಳಾ ದಿನಾಚಣೆಯ ವಿಶೇಷವಾಗಿದೆ ಎಂದರು.ಮಹಿಳೆಯರು ಹೂಡಿಕೆ ಮಾಡಲಿ

೨೦೨೪ರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಮುಖ ವಿಷಯವೆಂದರೆ ಮಹಿಳೆಯರು ಹೊಡಿಕೆ ಮಾಡಿ, ಪ್ರಗತಿ ವೇಗಗೊಳಿಸಿ ಎಂಬುದಾಗಿದ್ದು, ಲಿಂಗ ಸಮಾನತೆಯತ್ತ ಪ್ರಗತಿ ವೇಗಗೊಳಿಸಲು ಮಹಿಳಾ ಶಿಕ್ಷಣ, ಆರೋಗ್ಯ, ಅರ್ಥಿಕ ಸಬಲೀಕರಣ ಮತ್ತು ನಾಯಕತ್ವದ ಅಭಿವೃದ್ದಿಯಲ್ಲಿ ಹೊಡಿಕೆ ಮಾಡುವ ನಿರ್ಣಾಯಕ ಪಾತ್ರವನ್ನು ಈ ಥೀಮ್ ಒತ್ತಿಹೇಳುವುದಾಗಿ ತಿಳಿಸಿದರು.ಅತ್ಯಾಚಾರಿಗೆ ಕಠಿಣ ಶಿಕ್ಷೆ ಆಗಬೇಕು

ಪ್ರಾಂಶುಪಾಲೆ ಇಂದಿರಾ ಜೋಸೆಫ್ ಮಾತನಾಡಿ, ಅಪ್ರಾಪ್ತ ಬಾಲಕಿಯರ ಮೇಲೆ ನಡೆಯುವ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಬೇಕು, ಅತ್ಯಾಚಾರವೆಸಗಿರುವ ಆರೋಪಿಗಳಿಗೆ ನ್ಯಾಯಾಲಯಗಳು ಜಾಮೀನು ನೀಡಬಾರದು, ಯಾವುದೇ ಕಾರಣಕ್ಕೂ ಅತ್ಯಾಚಾರಿಗಳು ಕಾನೂನಿನ ಕುಣಿಕೆಯಿಂದ ತಪ್ಪಿಸಕೊಳ್ಳದಂತೆ ನ್ಯಾಯಾಧೀಶರಲ್ಲಿ ಮನವಿ ಮಾಡಿದರು.ಈ ವೇಳೆ ವಕೀಲರ ಸಂಘದ ಅಧ್ಯಕ್ಷರಾದ ಎಸ್.ಎನ್.ರಾಜಗೋಪಾಲಗೌಡ, ಉಪಾಧ್ಯಕ್ಷರಾದ ಮಣವಣ್ಣನ್, ಜಂಟಿ ಕಾರ್‍ಯದರ್ಶಿ ಮಘೇಂದ್ರನ್, ರಾಧಾಮಣಿ ಇದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ