ಎ.ರಂಗಾಪುರ ಗ್ರಾಮದಲ್ಲಿ ವಿಧವೆ ಮಹಿಳೆಯರಿಗೆ ಸಬಲೀಕರಣ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಮಹಿಳೆಯರು ತಮ್ಮ ಹಕ್ಕನ್ನು ಪಡೆದು ಕುಟುಂಬದಲ್ಲಿ ಆರ್ಥಿಕ ಸಬಲೀಕರಣಗೊಳ್ಳಬೇಕು ಎಂದು ಎಸ್.ಸಿ.ಐ.ಪ್ರಗತಿ ಸಂಸ್ಥೆ ಅಧ್ಯಕ್ಷೆ ಆಶಾ ಬೋಸ್ಲೆ ಹೇಳಿದ್ದಾರೆ.
ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸಂಸ್ಥೆಯಿಂದ ಸಮೀಪದ ಎ.ರಂಗಾಪುರ ಗ್ರಾಮದಲ್ಲಿ ನಡೆದ ವಿಧವೆಯರ ಸಬಲೀಕರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಎಲ್ಲಾ ಸ್ಥಾನಮಾನಗಳಲ್ಲೂ ಮಹಿಳೆಯರಿಗೆ ಸ್ಥಾನಮಾನ ಇದೆ. ಈ ದಿನ ಗ್ರಾಮ ಪಂಚಾಯಿತಿಯಲ್ಲೂ ಸಹ 50 ಪರ್ಸೆಂಟ್ ಮೀಸಲಾತಿ ಇದೆ ಎಂದು ಹೇಳಿದರು.ಖಜಾಂಚಿ ಯಶೋಧ ಆಂಜನೇಯ ಮಾತನಾಡಿ ಅರ್ಥಿಕ ಸಬಲೀಕರಣವಾಗಬೇಕು. ಜೊತೆಗೆ ಸ್ವ ಸಹಾಯ ಸಂಘಗಳನ್ನು ಮಾಡಿಕೊಂಡು ಉಳಿತಾಯ ಅದರ ಜೊತೆಗೆ ಸಾಲ ಸೌಲಭ್ಯಗಳು ಸರ್ಕಾರದಿಂದ ಬಿಡುಗಡೆಯಾದ ಯೋಜನೆಗಳನ್ನು ಪಡೆದು ಮಹಿಳೆಯರು ಅದರಲ್ಲೂ ವಿಧವೆ ಮಹಿಳೆಯರು ಸಬಲೀಕರಣದತ್ತ ಹೆಜ್ಜೆ ಹಾಕಬೇಕು. ಭದ್ರತಾ ಯೋಜನೆ ಜೊತೆಗೆ ಸ್ವ- ಉದ್ಯೋಗಗಳನ್ನು ಸಹ ತಾವುಗಳು ಮಾಡಬಹುದು. ಹಪ್ಪಳ ಉಪ್ಪಿನಕಾಯಿ, ರೊಟ್ಟಿ ಹೀಗೆ ಹಲವಾರು ಮನೆಯಲ್ಲಿ ಮಾಡುವಂತಹ ಕೆಲಸ ಕಾರ್ಯಗಳನ್ನ ಬಿಡುವಿನ ಸಮಯದಲ್ಲಿ ತಾವುಗಳು ಮಾಡಬಹುದು ಎಂದು ಹೇಳಿದರು. ಸಾಕ್ಷರತಾ ಅಧಿಕಾರಿ ಎನ್ ಎಸ್ ಜಯಣ್ಣ ಮಾತನಾಡಿ ಮಹಿಳೆಯರು ಅದರಲ್ಲೂ ವಿಧವಾ ಮಹಿಳೆಯರು ಮನೆಯೊಳಗೆ ಕೂರಬಾರದು, ಇತರ ಸಂಘಟನೆಯಲ್ಲಿ ಸೇರಿಕೊಂಡು ಹಲವಾರು ವಿಷಯ ತಿಳಿದುಕೊಂಡು ನಿಮಗೂ ಸಹ ಎಲ್ಲರಂತೆ ಬಾಳುವ ಹಕ್ಕು ಮತ್ತು ಸಮಾನತೆ ಇದೆ ಎಂದು ಹೇಳಿದರು. ಸಮಾಜ ಸೇವಕರಾದ ನಾಗವೇಣಿ ಮಾತನಾಡಿ ಸ್ವಸಹಾಯ ಸಂಘಗಳನ್ನು ಕಟ್ಟಿಕೊಳ್ಳಬೇಕು ಎಂದ ಅವರು ಇದಕ್ಕೆ ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ಕೊಟ್ಟರು.
ಎಸ್.ಸಿ.ಐ. ಪ್ರಗತಿ ಸಂಸ್ಥೆಯಿಂದ ಹೊಸ ಸೀರೆಯನ್ನು ವಿಧವೆ ಮಹಿಳೆಯರಿಗೆ ವಿತರಿಸಲಾಯಿತು.ಹಂಗರ್ ಪ್ರಾಜೆಕ್ಟ್ ಸಂಸ್ಥೆ ಸಂಯೋಜಕ ಶ್ರೀನಿವಾಸ್, ಗ್ರಾಮ ಪಂಚಾಯಿತಿ ಸದಸ್ಯರಾದ ಸುಂಕಮ್ಮ, ಸಮಾಜ ಸೇವಕರಾದ ಶ್ರುತಿ, ವೀಣಾ ಸುರೇಶ್, ರಾಜೇಶ್ವರಿ ಸೀತಾರಾಮ್ ಹೇಮಾ ಉಮೇಶ್, ಮಮತಾ ಮಲ್ಲಿಕಾರ್ಜುನ್, ಶೋಭಾ, ಶಾಂತ, ರಾಜೇಶ್ವರಿ ಅಣ್ಣಯ್ಯ ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರುಜಮ್ಮು ಕಾಶ್ಮೀರದ ಪೆಹಲ್ಗಾಮದಲ್ಲಿ ಮೃತ 26 ಜನರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
27ಕೆಟಿಆರ್.ಕೆ.4ಃತರೀಕೆರೆ ಸಮೀಪದ ಎ.ರಂಗಾಪುರ ಗ್ರಾಮದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸಂಸ್ಥೆಯಿಂದ ವಿಧವೆಯರ ಸಬಲೀಕರಣ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಎಸ್.ಸಿ.ಐ.ಪ್ರಗತಿ ಸಂಸ್ಥೆ ಅಧ್ಯಕ್ಷೆ ಆಶಾ ಬೋಸ್ಲೆ ಮತ್ತಿತರರು ಇದ್ದರು.