ಹಾನಗಲ್ಲ: ಮನುಷ್ಯ ಮನುಷ್ಯನಾಗಿ ಬಾಳುವ ಪರಿ ಕಂಡುಕೊಳ್ಳಬೇಕೆ ವಿನಾ ಭೇದಗಳನ್ನು ಹುಟ್ಟುಹಾಕಿ ಲಾಭಕ್ಕಾಗಿ ಬದುಕುವ ಕಳಂಕಿತ ಯೋಚನೆಗಳು ಬೇಡ ಎಂದು ನ್ಯಾಯವಾದಿ ವಿನಾಯಕ ಕುರುಬರ ತಿಳಿಸಿದರು.ಹಾನಗಲ್ಲಿನ ಲೋಯಲಾ ವಿಕಾಸ ಕೇಂದ್ರದಲ್ಲಿ ಆಯೋಜಿಸಿದ್ದ ಕಾನೂನು ನಿಬಂಧನೆಗಳ ಹಾಗೂ ಡಿಜಿಟಲ್ ಶಿಕ್ಷಣದ ಕುರಿತ ತರಬೇತಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಮಹಿಳೆಯರಿಗೆ ಎಲ್ಲ ರಂಗಗಳಲ್ಲಿ ಅತ್ಯತ್ತಮ ಅವಕಾಶಗಳಿವೆ. ಅವಕಾಶಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಪುರುಷರಿಗೆ ಎಷ್ಟು ಹಕ್ಕಿದೆ ಅಷ್ಟೆ ಮಹಿಳೆಯರಿಗೂ ಹಕ್ಕಿದೆ. ಸಂವಿಧಾನದ ಪೀಠಿಕೆಯಲ್ಲಿ ಸಮಾನತೆ ಎಲ್ಲರಿಗೂ ಒಂದೇ ಎಂದು ಹೇಳುತ್ತಿದೆ. ಮಹಿಳೆಯರು ಸಮಾಜವನ್ನು ಕಟ್ಟಬೇಕು. ಗಂಡು- ಹೆಣ್ಣು ಭಾಷೆಯಲ್ಲಿ ತಾರತಮ್ಯ ಇರಬಾರದು ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಲೋಯಲಾ ವಿಕಾಸ ಕೇಂದ್ರ ಮೇಲ್ವಿಚಾರಕಿ ಸಿಂಧು, ಮಹಿಳೆಯರಿಗೆ ಸಾಮಾನ್ಯ ಜ್ಛಾನದ ಅರಿವಿರಬೇಕು. ಹೆಚ್ಚು ಹೆಚ್ಚು ಇಂತಹ ಮಾಹಿತಿಗಳನ್ನು ಪಡೆದುಕೊಳ್ಳುವುದರಿಂದ ಸಾಮಾನ್ಯ ಜ್ಞಾನ ಹೆಚ್ಚುತ್ತದೆ. ಲೊಯೋಲ ಸಂಸ್ಥೆಯಲ್ಲಿ ಜನರಿಗೆ ಅವಶ್ಯ ಇರುವ ತರಬೇತಿಗಳನ್ನು ಆಯೋಜಿಸಲಾಗುತ್ತಿದೆ ಎಂದರು.ಮಹೇಶ ದಾಮೋದರ ಮಾತನಾಡಿ, ಸಾಮಾಜಿಕ ನೆಟವರ್ಕಿಂಗ್ ಎಂದರೆ ಜನರು ಆನ್‌ಲೈನ್‌ನಲ್ಲಿ ಇತರರೊಂದಿಗೆ ಸಂಪರ್ಕ ಸಾಧಿಸುವ ಹಂಚಿಕೊಳ್ಳುವ ಮತ್ತು ಸಂವಹನ ಮಾಡುವ ವೇದಿಕೆಯಾಗಿದೆ. ಐಡಿಎನ್ ಎಂಬ ಪರಿಕಲ್ಪನೆಯ ನೆರವಿನಿಂದ ಈಗ ಪರಿಸ್ಥಿತಿ ಬದಲಾಗಿದ್ದು, ಜಾಲತಾಣಗಳ ವಿಳಾಸಗಳನ್ನು ನಮ್ಮ ಇ ಮೇಲ್ ವಿಳಾಸಗಳನ್ನು ಕನ್ನಡ ಅಕ್ಷರಗಳಲ್ಲೆ ರೂಪಿಸಿಕೊಳ್ಳಬಹುದು ಎಂದರು.ಮಂಜುಳಾ ನಾಗೋಜಿ ಸ್ವಾಗತಿಸಿದರು. ಸಾವಿತ್ರಿ ಕನ್ನನಯಕ್ಕನವರ ನಿರೂಪಿಸಿದರು. ಜಯಮ್ಮ ಎಸ್.ಬಿ. ಸಂವಿಧಾನ ಪ್ರಸ್ತಾವನೆ ಮಾಡಿದರು. ರೇಣುಕಾ ಕೊರವರ ವಂದಿಸಿದರು. ಮಹಿಳೆಯರನ್ನು ಪೂಜ್ಯ ಭಾವನೆಯಿಂದ ಕಾಣಿ
ಹಾವೇರಿ: ನಗರದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಹುಕ್ಕೇರಿಮಠದ ಅಕ್ಕನ ಬಳಗ ವತಿಯಿಂದ ವಿಶ್ವ ಮಹಿಳಾ ದಿನವನ್ನು ಆಚರಿಸಲಾಯಿತು.ಸಮಾರಂಭವನ್ನು ಉದ್ಘಾಟಿಸಿದ ಮುಂಡರಗಿಯ ಶಕುಂತಲಾ ಹಂಪಿಮಠ ಮಾತನಾಡಿ, ಮಹಿಳೆಯರನ್ನು ಪೂಜ್ಯ ಭಾವನೆಯಿಂದ ಕಾಣಬೇಕು. ಅವರಿಗೆ ಕೇಡು ಬಯಸಿದರೆ, ಇಡೀ ಸಮಾಜಕ್ಕೆ ಕೇಡು ಬಯಸಿದಂತೆ. ರಾಮಾಯಣ ಮಹಾಭಾರತಗಳು ಈ ಮಾತಿಗೆ ಸಾರ್ವಕಾಲಿಕ ಸಾಕ್ಷಿಯಾಗಿವೆ ಎಂದರು.ಅಕ್ಕನ ಬಳಗದ ಗೌರವ ಅಧ್ಯಕ್ಷೆ ಲಲಿತಮ್ಮ ಹೊರಡಿ ಮಾತನಾಡಿ, ಹುಕ್ಕೇರಿಮಠದ ಪೂಜ್ಯರ ಆಶೀರ್ವಾದ ಮತ್ತು ಅಕ್ಕಮಹಾದೇವಿ ಶರಣೆಯ ಚೇತನದಿಂದ 86 ವರ್ಷಗಳ ಕಾಲ ಬಳಗ ನಿರಂತರವಾಗಿ ಮಹಿಳಾ ಚಿಂತನೆಯನ್ನು ಮಾಡುತ್ತ ಬಂದಿದೆ ಎಂದರು.ಸನ್ಮಾನಿತರ ಪರವಾಗಿ ರಾಜೇಶ್ವರಿ ಬಿಷ್ಟನಗೌಡ್ರ ಮಾತನಾಡಿ, ಸಮಾಜದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ಮಹಿಳೆಗೆ ಛಲ ಮತ್ತು ಆತ್ಮಬಲ ಬೇಕು ಎಂದರು.ಬಳಗಕ್ಕೆ ನಿರಂತರವಾಗಿ ಸೇವೆ ಸಲ್ಲಿಸಿದ ಹಿರಿಯ ಚೇತನಗಳಾದ ಕಸ್ತೂರಮ್ಮಾ ಆಟವಾಳಗಿ, ಅಕ್ಕಮಹಾದೇವಿ ಬೆನ್ನೂರ, ರಾಜೇಶ್ವರಿ ಬಿಷ್ಟನಗೌಡ್ರ ಹಾಗೂ ಸುರೇಖಾ ಮಳಗಿ ಅವರನ್ನು ಸನ್ಮಾನಿಸಲಾಯಿತು.ಅಕ್ಕನಬಳಗದ ರೇಖಾ ಮಾಗನೂರ, ಹೇಮಾ ಮುದ್ದಿ, ಕಸ್ತೂರಮ್ಮ ಮಹಾರಾಜಪೇಠ, ಸ್ಮೀತಾ ಕುರುಬಗೊಂಡ, ಶಿವಲೀಲಾ ಶಿರಸಪ್ಪನವರ, ಕಮಲಾ ಬುಕ್ಕಶೆಟ್ಟಿ, ಅರುಣಾ ಐರಣಿ, ಸುಮಾ ಗಡಾದ, ಮಂಜುಳಾ ಕಡ್ಡಿ ಇತರರು ಇದ್ದರು.