ಕನಕಪುರ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಶೀಘ್ರ ಮುಖ್ಯಮಂತ್ರಿ ಸ್ಥಾನ ದೊರೆಯಲಿ ಎಂದು ನಗರಸಭೆ ಮಾಜಿ ಅಧ್ಯಕ್ಷೆ ಲಕ್ಷ್ಮಿದೇವಮ್ಮ ನೇತೃತ್ವದಲ್ಲಿ ಕಾಂಗ್ರೆಸ್ ಮಹಿಳಾ ಮುಖಂಡರು, ಕಾರ್ಯಕರ್ತರು ಮತ್ತು ನಗರಸಭೆ ಮಾಜಿ ಸದಸ್ಯರು ಕೆಂಕೇರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಪೂಜೆಯ ನೇತೃತ್ವ ವಹಿಸಿದ್ದ ಲಕ್ಷ್ಮೀದೇವಮ್ಮ ಮಾತನಾಡಿ, ಶಿವಕುಮಾರ್ ಅವರು ತಮ್ಮ ಶ್ರಮದಿಂದ ರಾಜಕೀಯ ಹೋರಾಟಗಳ ಮೂಲಕ ಜಿಪಂನಿಂದ ಮುಖ್ಯಮಂತ್ರಿ ಸ್ಥಾನದವರೆಗೆ ಶ್ರಮಪಟ್ಟು ಮುಂದೆ ಬಂದಿರುವ ಅವರನ್ನು ಮುಖ್ಯಮಂತ್ರಿ ಆಗಿ ನೋಡುವುದು ನಮ್ಮ ತಾಲೂಕಿನ ಜನತೆಯ ಕನಸಾಗಿದೆ. ಶಿವಕುಮಾರ್ ಅವರು ಮನಸ್ಸು ಮಾಡಿದ್ದರೆ 2023ರಲ್ಲಿಯೆ ಪಟ್ಟುಹಿಡಿದು ಮುಖ್ಯಮಂತ್ರಿ ಆಗಬಹುದಿತ್ತು. ಆದರೆ ಪಕ್ಷಕ್ಕೆ ನಿಷ್ಠರಾಗಿ, ಹೈಕಮಾಂಡ್ ಮೇಲೆ ನಂಬಿಕೆ ಮತ್ತು ವಿಶ್ವಾಸದಿಂದ ಮುಖ್ಯಮಂತ್ರಿ ಸ್ಥಾನವನ್ನು ತ್ಯಾಗ ಮಾಡಿ ಸಮಯಕ್ಕಾಗಿ ಕಾಯುತ್ತಿದ್ದಾರೆ. ಪಕ್ಷದ ವರಿಷ್ಠರು ಇನ್ನು ಸತಾಯಿಸದೆ ಡಿ.ಕೆ.ಶಿವಕುಮಾರ್ ಅವರನ್ನು ಶೀಘ್ರವೇ ಮುಖ್ಯಮಂತ್ರಿ ಮಾಡಿ, ಅವರ ಕನಸು ನನಸು ಮಾಡಬೇಕು, ಇದು ನಮ್ಮೆಲ್ಲರ ಕೋರಿಕೆ ಎಂದು ತಿಳಿಸಿದರು.
ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಭಕ್ತರಲ್ಲರಿಗೂ ಪ್ರಸಾದ ವಿತರಿಸಿದರು. ಮಹಿಳಾ ಮುಖಂಡರಾದ ರೋಹಿಣಿ ಪ್ರಿಯ, ಮಹದೇವಮ್ಮ, ರೂಪ, ಸರಳ, ನಾಗರತ್ನಮ್ಮ, ಸುಧಾ, ಶೋಭಾ, ಬಿ.ಕೆ.ಪ್ರಭ, ರತ್ನಮ್ಮ, ಸಾತನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜು, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಹರೀಶ್, ಜಗದೀಶ್, ಕಿರಣ್ ಮೊದಲಾದವರು ಉಪಚಿತರಿದ್ದರು.ಕೆ ಕೆ ಪಿ ಸುದ್ದಿ 03:
ಕನಕಪುರ ತಾಲೂಕಿನ ಹಲಸಿನಮರದೊಡ್ಡಿಯಲ್ಲಿರುವ ಕೆಂಕೇರಮ್ಮದೇವಿ ದೇಗುಲದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕೆಂದು ಪ್ರಾರ್ಥಿಸಿ ನಗರಸಭೆ ಮಾಜಿ ಅಧ್ಯಕ್ಷೆ ಲಕ್ಷ್ಮಿದೇವಮ್ಮ ನೇತೃತ್ವದಲ್ಲಿ ಕಾಂಗ್ರೆಸ್ ಮಹಿಳಾ ಮುಖಂಡರು, ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.