ಕನ್ನಡಪ್ರಭ ವಾರ್ತೆ ಬೀದರ್
ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ನಗರದ ಐಎಂಎ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ 50 ಮಹಿಳಾ ಸಾಧಕಿಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಡಾ. ದೇವಕಿ ಅಶೋಕ ನಾಗೂರೆ, ಡಾ. ರೇಣುಕಾ ಬಿರಾದಾರ, ಡಾ. ನೀತಾ ರೇಜಂತಲ್, ಆಯುಷಿ ವಿ, ಶ್ರುತಿ ಶುಕ್ಲಾ, ಸುಧಾ ಜಿ, ಸಪ್ನಾ ಪಾಟೀಲ್, ಸೀಮಾ ಸಿಂಗ್, ಸೃಸ್ಟಿ ಅಲೆಗ್ಝಾಂಡರ್, ಮಹಾದೇವಿ, ಶಿವಾನಿ ಸ್ವಾಮಿ, ಸಾಕ್ಷಿ ಡಾಯಿಜೊಡೆ, ಮಾಲಾಶ್ರೀ, ದಿವ್ಯ ಮಠ, ಮೀನಾಕ್ಷಿ ನಿಟ್ಟೂರೆ, ಶ್ವೇತಾ, ಸುಜಾತಾ ಕುಮಾರಿ, ಸುವರ್ಣಾ ಜಗದೇವಪ್ಪ, ವಿಮಲಾಬಾಯಿ, ರೇಖಾ ಕಾಮಣ್ಣ, ಸಪ್ನಾ ಜಾನ್ಸನ್, ಸುವರ್ಣಾ ಮಲಶೆಟ್ಟಿ, ಮಂಗಲಾ ಗುಂಡಮ್ಮ ಮತ್ತಿತರರಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಸಾಧಕಿಯರನ್ನು ಪ್ರೋತ್ಸಾಹಿಸಲು ಹಾಗೂ ಮಹಿಳೆಯರನ್ನು ಸಾಧನೆಗೆ ಪ್ರೇರೇಪಿಸಲು ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದು ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ಅಧ್ಯಕ್ಷ ಡಾ. ಕಪಿಲ್ ಪಾಟೀಲ್ ಹೇಳಿದರು.ವೈದ್ಯಕೀಯ, ಸಮಾಜ ಸೇವೆ, ಕ್ರೀಡೆ, ಸಂಗೀತ, ಬ್ಯಾಂಕ್, ಅಂಚೆ, ಯೋಗ, ಕೃಷಿ, ಪೌರ ಕಾರ್ಮಿಕ, ಎನ್‌ಸಿಸಿ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್, ಸಾರಿಗೆ, ಕಾರಾಗೃಹ, ಪೊಲೀಸ್ ಇಲಾಖೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರಿಗೆ ಪ್ರಶಸ್ತಿ ನೀಡಲಾಗಿದೆ ಎಂದು ತಿಳಿಸಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ ಸುನಂದಾ ಬಹೆನ್‌ಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಡಾ. ಶ್ವೇತಾ ಕುಣಕೇರಿ ಉಪನ್ಯಾಸ ನೀಡಿದರು. ಡಾ. ಅಂಕಿತಾ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಸಹಕಾರ ಸಂಘಗಳ ಉಪ ನಿಬಂಧಕಿ ಮಂಜುಳಾ ಎಸ್, ಪ್ರತಿಮಾ ಗೋವಿಂದ ರೆಡ್ಡಿ, ರಾಜೇಶ್ವರಿ ಸಿಎಲ್, ಸ್ಮಿತಾ ಎಸ್. ಸಾಬಡೆ, ಡಾ. ಶಾರದಾ ಗುದಗೆ, ರುಚಿಕಾ ಶಾ, ಅನಿತಾ ಚಿಂತಾಮಣಿ, ಡಾ. ವಿದ್ಯಾ ಅಂಗಡಿ, ನೀಲಾಂಬಿಕೆ ಪಾಖಾಲ್, ಕ್ಲಬ್ ಕಾರ್ಯದರ್ಶಿ ಶಿವಕುಮಾರ ಪಾಖಾಲ್, ಖಜಾಂಚಿ ಜಯೇಶ್ ಪಟೇಲ್, ಸೂರ್ಯಕಾಂತ ರಾಮಶೆಟ್ಟಿ, ಡಾ. ರಿತೇಶ ಸುಲೆಗಾಂವ್, ಡಾ. ನಿತೇಶ ಬಿರಾದಾರ, ನಿತಿನ್ ಕರ್ಪೂರ ಮತ್ತಿತರರು ಇದ್ದರು.