ಕನ್ನಡಪ್ರಭ ವಾರ್ತೆ ವಿಜಯಪುರ
ವಿಜ್ಞಾನ ತಂತ್ರಜ್ಞಾನ, ಛಾಯಾಚಿತ್ರ, ಡಿಸೈನಿಂಗ್ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ಕೆಲಸ ಮಾಡಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಉಮಾಶ್ರೀ ಕೋಳಿ ಹೇಳಿದರು.ನಗರದ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದ ಕಚೇರಿಯಲ್ಲಿ ಮಹಿಳಾ ದಿನ ಕಾರ್ಯಕ್ರಮದಲ್ಲಿ ಛಾಯಾಗ್ರಹಣದ ಕ್ಷೇತ್ರದಲ್ಲಿನ ಮಹಿಳಾ ಸಾಧಕಿಯರಿಗೆ ಗೌರವ ಸನ್ಮಾನ ಹಾಗೂ ಬೆಂಗಳೂರಿನಲ್ಲಿ ನಡೆಯುವ ಡಿಜಿ ಇಮೇಜ್ ವಸ್ತು ಪ್ರದರ್ಶನದ ಭಿತ್ತಿಪತ್ರ ಅನಾವರಣಗೊಳಿಸಿ ಮಾತನಾಡಿದರು. ಮದುವೆ ಮನೆ ಸಹಿತ ವನ್ಯ ಜೀವಿ, ಹವ್ಯಾಸಿ ಛಾಯಾಗ್ರಹಣ, ಡಿಸೈನಿಂಗ್, ವಿಡಿಯೊ ಎಡಿಟಿಂಗ್ ಮಾಡುವ ಎಷ್ಟೋ ಮಹಿಳೆಯರು ನಮ್ಮ ನಾಡಿನಲ್ಲಿದ್ದಾರೆ. ಅವರಿಗೆ ಸರಿಯಾದ ಅವಕಾಶ ಸಿಕ್ಕರೆ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ನಾಡಿಗೆ ಕೀರ್ತಿ ತರುತ್ತಾರೆ ಎಂದರು.ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ರಾಜ್ಯಾಧ್ಯಕ್ಷ ಎಚ್.ಎಸ್.ನಾಗೇಶ ಮಾತನಾಡಿ, ಉತ್ತರ ಕರ್ನಾಟಕದ ಭಾಗದಲ್ಲಿ ಹೆಚ್ಚು ಛಾಯಾಗ್ರಾಹಕರು ಛಾಯಾಗ್ರಹಣ ಮಾಡಿ ಜೀವನ ರೂಪಿಸಿಕೊಂಡ ಸಾವಿರಾರು ಜನರಿದ್ದಾರೆ. ವಿಜಪುರದಲ್ಲಿ ಅಂತಾರಾಷ್ಟ್ರೀಯ ಡಿಜಿ ಇಮೇಜ್ ವಸ್ತು ಪ್ರದರ್ಶನ ಇನ್ನು ಕೆಲವೇ ದಿನಗಳಲ್ಲಿ ಏರ್ಪಡಿಸಲಾಗುವುದು. ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಕಾರ್ಯಾಗಾರ ಮಾಡುವುದಾಗಿ ತಿಳಿಸಿದರು.ಈ ವೇಳೆ ಸಂಘದ ನಿರ್ದೇಶಕ ಮಲ್ಲಿಕಾರ್ಜುನ, ಗಂಗಾ ಮಠ, ಲಕ್ಷ್ಮೀ ಲೋಟಗೆರಿ, ಗಂಗೂ ಗೋಳಸಾರ, ವಿಶಾಲಾಕ್ಷಿ ಕಾಖಂಡಕಿಮಠ, ಪೂಜಾ ಜಾಧವ, ಜಿಲ್ಲಾ ಸಂಘದ ಅಧ್ಯಕ್ಷ ರಮೇಶ ಚವ್ಹಾಣ, ಪಿಆರ್‌ಒ ನಾಗರಾಜ ಟಿ.ಸಿ, ಮಲ್ಲಿಕಾರ್ಜುನ ಕೆ.ಆರ್, ರವಿರಾಜ ಗುರು, ಪವನ ಮೇಹರವಾಡೆ, ಪ್ರಭಯ್ಯ ಲಕ್ಕುಂಡಿಮಠ, ವಿಠ್ಠಲ ಹಿರೇಮಠ, ಲಕ್ಷಣ ಯಮಕನಮರಡಿ, ಸಂಗಯ್ಯ ಮಠಪತಿ, ಪಿಂಟು ರಜಪೂತ, ಪರಶುರಾಮ ಗೂಳ್ಳುರ, ಸಿದ್ದು ಕುದರೆ, ಸಂಜಯ ರೇವೆ, ಖಾಜು, ರವಿ ಕುಂಟೋಜಿ, ಮಹೇಶ ಮಾಟೀಲ, ಮುರಾರಿ ಕರ್ವಾ, ಉಮೇಶ ಹಿರೆದೇಸಾಯಿ, ಮಹೇಶ ಕುಂಬಾರ ಇತರರು ಇದ್ದರು.