ದುಡಿಮೆ, ಶ್ರಮವೇ ಜೀವನಕ್ಕೆ ಆಧಾರ

KannadaprabhaNewsNetwork |  
Published : Nov 28, 2026, 03:00 AM IST
ಬೀಳಗಿ | Kannada Prabha

ಸಾರಾಂಶ

ಜಾತಿ ಪದ್ದತಿ ಮೂಡನಂಬಿಕೆ, ಕೆಲವು ಅನಿಷ್ಟಗಳು ಸಮಾಜಗಳಿಂದ ತೊಲಗಬೇಕು, ನಿರಂತರ ದುಡಿಮೆ, ಶ್ರಮ ಮಾತ್ರ ನಿಜವಾದ ಜೀವನಕ್ಕೆ ಆಧಾರಸ್ತಂಭ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಜೆ.ಟಿ.ಪಾಟೀಲ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಜಾತಿ ಪದ್ದತಿ ಮೂಡನಂಬಿಕೆ, ಕೆಲವು ಅನಿಷ್ಟಗಳು ಸಮಾಜಗಳಿಂದ ತೊಲಗಬೇಕು, ನಿರಂತರ ದುಡಿಮೆ, ಶ್ರಮ ಮಾತ್ರ ನಿಜವಾದ ಜೀವನಕ್ಕೆ ಆಧಾರಸ್ತಂಭ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಜೆ.ಟಿ.ಪಾಟೀಲ್ ತಿಳಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ತಾಲೂಕಾಡಳಿತ, ತಾಲೂಕು ಪಂಚಾಯತ್, ಪಟ್ಟಣ ಪಂಚಾಯತಿ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಭಕ್ತ ಕನಕದಾಸ ಜಯಂತಿ ಉತ್ಸವದಲ್ಲಿ ಅವರು ಮಾತನಾಡಿ, ಮಾನವ ಕುಲದ ಏಳಿಗೆಗಾಗಿ ಶ್ರಮಿಸಿದ ದಾಸರು ನೆನಪು ಇಂದಿಗೂ ಇದೆ. ಅವರ ಮಾರ್ಗದರ್ಶನ, ಕೆಲಸಗಳಿಂದ, ಕನಕದಾಸರು ಇಂದು ಜನರ ಮನಸ್ಸಿನಲ್ಲಿ ಇದ್ದ ದುಷ್ಟ ವಿಚಾರಗಳ ವಿರುದ್ಧ ತಮ್ಮ ಸಾಹಿತ್ಯದಿಂದ ಬದಲಾವಣೆ ಕಾರ್ಯ ಮಾಡಿದ್ದಾರೆ. ವಚನ ಸಾಹಿತ್ಯ ಹಾಗೂ ಡಾ.ಅಂಬೇಡ್ಕರ್ ಅವರು ಬರೆದ ಸಂವಿಧಾನ ಉತ್ತಮ ಸಮಾಜ ನಿರ್ಮಾಣ ಮಾಡುವ ಅಸ್ತ್ರಗಳು, ಇಂತಹ ಸಂವಿಧಾನವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ದಾಸರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಮಕ್ಕಳಿಗೆ ಉತ್ತಮ ಸಂಸ್ಕಾರವಿರುವ ಶಿಕ್ಷಣ ನೀಡುವಂತೆ ಹೇಳಿದರು.

ಹುಲಜಂತಿಯ ಮಾಳಿಂಗರಾಯ ಮಹಾರಾಜರು ಮಾತನಾಡಿ, ದಾಸರ, ಮಹಾತ್ಮರ ಜೀವನ ಚರಿತ್ರೆಯನ್ನು ಕೇಳಿದರೆ ಬದುಕು ಬದಲಾಗದು. ಅವರು ಹೇಳಿದ ಮಾರ್ಗದರ್ಶನವನ್ನ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನದಲ್ಲಿ ಬದಲಾವಣೆ ಆಗಲು ಸಾಧ್ಯ. ಗಾಳಿ, ನೀರು, ಬಿಸಿಲು ಸಿಕ್ಕಿದ್ದು ಧರ್ಮದಿಂದ ಉಪಕಾರಿ ಜೀವನ ಮಾಡಬೇಕು. ಶಿಕ್ಷಣ ಎನ್ನುವುದು ಹುಲಿ ಹಾಲು ಕುಡಿದ ವ್ಯಕ್ತಿಯಂತೆ ಮಕ್ಕಳಿಗೆ ಸಂಸ್ಕಾರ ನೀಡಿ, ಹೆತ್ತ ತಂದೆ ತಾಯಿಗಳನ್ನು ಗೌರವಿಸಿ ಎಂದು ತಿಳಿಸಿದರು.ಪಟ್ಟಣದ ಬೀರೇಶ್ವರ ದೇವಸ್ಥಾನದಿಂದ ವಾದ್ಯಮೇಳಗಳೊಂದಿಗೆ ಮಹಿಳೆಯ ಕುಂಭಮೇಳ, ಆರುತಿಗಳೊಂದಿಗೆ ಪಟ್ಟಣದ ಮುಖ್ಯ ಮಾರುಕಟ್ಟೆ ರಸ್ತೆಯ ಮೂಲಕ ತಹಸೀಲ್ದಾರ್ ಕಚೇರಿವರೆಗೆ ಕನಕದಾಸರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಸಮಾರಂಭದಲ್ಲಿ ಪಂಚ್ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಅನವೀರಯ್ಯ ಪ್ಯಾಟಿಮಠ, ತಹಸೀಲ್ದಾರ್ ವಿನೋದ್ ಹತ್ತಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಪಂ ಇಓ ಶ್ರೀನಿವಾಸ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಆದಾಪೂರ, ಪಪಂ ಮುಖ್ಯಾಧಿಕಾರಿ ದೇವೇಂದ್ರ ಧನಫಾಲ್, ಸಿಪಿಐ ಹಣಮಂತ ಸಣಮನಿ ಸೇರಿದಂತೆ ಹಾಲುಮತ ಸಮಾಜದ ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಅಸ್ವಸ್ಥ ಯುವತಿ ಮೇಲೆ ಅತ್ಯಾಚಾರ: ಆರೋಪಿ ಸೆರೆ
ಮೋಡಿ ಲಿಪಿ ದಾಖಲೆ ಭಾಷಾಂತರ, ಸಂರಕ್ಷಣೆಗೆ ಒಪ್ಪಂದ