15675 ಕೋಟಿ ವೆಚ್ಚದ ಕಾಮಗಾರಿ ಚಾಲನೆ, ಲೋಕಾರ್ಪಣೆ

KannadaprabhaNewsNetwork |  
Published : Jul 18, 2025, 12:50 AM IST
ಫೋಟೋ 17ಪಿವಿಡಿ117ಪಿವಿಜಿ2ಪಾವಗಡ,ಸಿಎಂ ಕಾರ್ಯಕ್ರಮದ ಹಿನ್ನಲೆಯಲ್ಲಿ ತಾಲೂಕು ಕಾಂಗ್ರೆಸ್‌ ನಿಂದ ಹಮ್ಮಿಕೊಂಡಿದ್ದ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾಜಿ ಸಚಿವ ವೆಂಕಟರಮಣಪ್ಪ ಹಾಗೂ ಶಾಸಕ ಎಚ್‌.ವಿ.ವೆಂಕಟೇಶ್ ಮಾತನಾಡಿದರು.  | Kannada Prabha

ಸಾರಾಂಶ

ಸಂಘ ಸಂಸ್ಥೆಯ ಹೋರಾಟ ಹಾಗೂ ಮಾಜಿ ಸಚಿವ ವೆಂಕಟರಮಣಪ್ಪ ಪಟ್ಟು ಹಿಡಿದ ಪರಿಣಾಮ 2350ಕೋಟಿ ರು. ವೆಚ್ಚದಲ್ಲಿ ತುಂಗಭದ್ರಾ ಕುಡಿಯುವ ನೀರು ಯೋಜನೆ ಅನುಷ್ಠಾನವಾಗಿದ್ದು ಇದಕ್ಕೆ ಕಾರಣೀಭೂತರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಕಲ ಬಿರುದಾವಳಿಗಳು ಸಹ ಸಲ್ಲಬೇಕಿದೆ ಎಂದು ಶಾಸಕಎಚ್‌.ವಿ.ವೆಂಕಟೇಶ್‌ ಹೇಳಿದರು.

ಕನ್ನಡಪ್ರಭವಾರ್ತೆ ಪಾವಗಡ

ಸಂಘ ಸಂಸ್ಥೆಯ ಹೋರಾಟ ಹಾಗೂ ಮಾಜಿ ಸಚಿವ ವೆಂಕಟರಮಣಪ್ಪ ಪಟ್ಟು ಹಿಡಿದ ಪರಿಣಾಮ 2350ಕೋಟಿ ರು. ವೆಚ್ಚದಲ್ಲಿ ತುಂಗಭದ್ರಾ ಕುಡಿಯುವ ನೀರು ಯೋಜನೆ ಅನುಷ್ಠಾನವಾಗಿದ್ದು ಇದಕ್ಕೆ ಕಾರಣೀಭೂತರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಕಲ ಬಿರುದಾವಳಿಗಳು ಸಹ ಸಲ್ಲಬೇಕಿದೆ ಎಂದು ಶಾಸಕಎಚ್‌.ವಿ.ವೆಂಕಟೇಶ್‌ ಹೇಳಿದರು.

ನದಿ ಮೂಲದ ಕುಡಿಯುವ ನೀರು ಸರಬರಾಜ್‌ ಉದ್ಘಾಟನೆ ಸಲುವಾಗಿ ಇದೇ ಜು.21ಕ್ಕೆ ಸಿಎಂ ಸಿದ್ದರಾಮಯ್ಯ ಪಾವಗಡಕ್ಕೆ ಅಗಮಿಸುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ಕಾಂಗ್ರೆಸ್‌ ಸಮಿತಿಯಿಂದ ಪಟ್ಟಣದ ಎಸ್‌ಎಸ್‌ಕೆ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಪೂರ್ವ ಭಾವಿ ಸಭೆಯ ಉದ್ಘಾಟನೆ ನೆರೆವೇರಿಸಿ ಮಾತನಾಡಿದರು. ಇಲ್ಲಿನ ರೈತ ಹಾಗೂ ಇತರೆ ಜನಪರ ಸಂಘಟನೆಗಳ ಹೋರಾಟ ಮತ್ತು ಮಾಜಿ ಸಚಿವರಾದ ವೆಂಕಟರಮಣಪ್ಪ ಅವರ ಒತ್ತಡದ ಕಾರಣ, ಸಿಎಂ ಸಿದ್ದರಾಮಯ್ಯ ಪಾವಗಡದ ಸೇರಿದಂತೆ ಬಯಲು ಸೀಮೆ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸಲು 2350ಕೋಟಿ ವೆಚ್ಚದಲ್ಲಿ ತುಂಗಭದ್ರಾ ಯೋಜನೆ ಅನುಷ್ಠಾನಗೊಳಿಸಿದ್ದರು. ಈ ಅವರೇ ಚಾಲನೆ ನೀಡುತ್ತಿರುವುದು ಸಂತೋಷದಾಯಕ ವಿಷಯವಾಗಿದೆ ಎಂದರು. ಇದರ ಜತೆ 22ಕೋಟಿ ವೆಚ್ಚದ ವಸತಿ ಶಾಲೆ ಪ್ರಾರಂಭೋತ್ಸವ , ನಾಗಲಮಡಿಕೆಯ ಶ್ರೀ ಸುಬ್ರಮಣ್ಯಸ್ವಾಮಿ ದೇವಸ್ಥಾನ ದುರಸ್ತಿಗೆ ಶಂಕುಸ್ಥಾಪನೆ, ಬೈಪಾಸು ರಸ್ತೆ ಕಾಮಗಾರಿಗೆ ಚಾಲನೆ, 100ಕೋಟಿ ವೆಚ್ಚದ ಸರ್ಕಾರಿ ಬಸ್‌ ನಿಲ್ದಾಣ ಸೇರಿದಂತೆ ಒಟ್ಟು 15, 675 ಕೋಟಿ ರು. ವೆಚ್ಚದ ಕಾಮಗಾರಿಗಳಿಗೆ ಶುಂಕುಸ್ಥಾಪನೆ ನೆರೆವೇರಿಸಲಿದ್ದಾರೆ ಎಂದರು.

ಮಾಜಿ ಸಚಿವ ವೆಂಕಟರಮಣಪ್ಪ ಮಾತನಾಡಿ, ತಾಲೂಕಿನ ಜನತೆ ಅಶೀರ್ವಾದದ ಪರಿಣಾಮ ನಾಲ್ಕು ಬಾರಿ ಶಾಸಕರಾಗಿ ಎರಡು ಬಾರಿ ಸಚಿವರಾಗಲು ಸಾಧ್ಯವಾಯಿತು. ಎಸ್‌.ಎಂ.ಕೃಷ್ಣ ಅವರ ಸಿಎಂ ಕಾಲದಲ್ಲಿ 14ಕೋಟಿ ವೆಟ್ಟದಲ್ಲಿ ನಾಗಲಮಡಿಕೆ ಡ್ಯಾಂ ನಿರ್ಮಾಣ ಕೈಗೊಳ್ಳಲಾಯಿತು. ಇಲ್ಲಿನ ಸಮಸ್ಯೆ ಯಾವ ಸಿಎಂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಸಂಘ ಸಂಸ್ಥೆಯ ಹೋರಾಟದ ನಡುವೆ ಸರ್ಕಾರದ ಗಮನ ಸೆಳೆದ ಕಾರಣ ಸಿಎಂ ಸಿದ್ದರಾಮಯ್ಯ ತುಂಗಭದ್ರಾ ಯೋಜನೆ ಅನುಷ್ಠಾನಗೊಳಿಸಿದರು. ಇದರ ಕೀರ್ತಿ ಸಿಎಂಗೆ ಸಲ್ಲಬೇಕು ತಾಲೂಕಿನ ಜನತೆಯ ಋಣ ತೀರಿಸಲು ಸದಾ ಬದ್ಧರಿರುವುದಾಗಿ ಹೇಳಿದರು.

ತಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸುದೇಶ್‌ ಬಾಬು,ಮುಖಂಡರಾದ ತಾಳೇ ಮರದಹಳ್ಳಿ ನರಸಿಂಹಯ್ಯ, ಮಹಮ್ಮದ್‌ ಫಜುಲುಲ್ಲಾ ಸಾಬ್‌,ವಕೀಲ ವೆಂಕಟರಾಮರೆಡ್ಡಿ,ಕೆ.ಎಸ್‌.ಪಾಪಣ್ಣ, ವೇಣುಗೋಪಾಲ್ ಎಪಿಎಂಸಿ ಮಾಜಿ ಅಧ್ಯಕ್ಷ ಡಿ.ಮಂಜುನಾಥ್,ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ,ಶೇಷಗಿರಿ,ಪುರಸಭಾ ಮಾಜಿ ಅಧ್ಯಕ್ಷ,ಗುರ್ರಪ್ಪ,ಶಂಕರ್ ರೆಡ್ಡಿ ರಾಜೇಶ್ ತೆಂಗನಕಾಯಿ,ರವಿ,ಫಜುಲುಲ್ಲಾ ಸಾಬ್ ,ರಂಗೇಗೌಡ,ಅನ್ನದಾನಪುರ ಲಕ್ಷ್ಮಿ ನಾರಾಯಣಪ್ಪ,ಸಮಾಜ ಸೇವಕ ಬತ್ತಿನೇನಿ ನಾಗೇಂದ್ರ ರಾವ್,ಆರ್.ಎ.ಹನುಮಂತರಾಯಪ್ಪ,ಅನ್ವರ್ ಸಾಬ್ ಸುಜಿತ್ ,ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾರಾಣಿ,ಸುಮಾ ಅನಿಲ್, ರಾಮಚಂದ್ರ ರೆಡ್ಡಿ,ಆನಂದ್‌ ಶಂಷುದ್ದೀನ್‌,ಷಾಬಾಬು,ರಿಜ್ವಾನ್‌ ಹಾಗೂ ಇತರೆ ಅನೇಕ ಮಂದಿ ಗಣ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರ ಬಡತನ ನಿರ್ಮೂಲನೆಗೆ ಸಂಜೀವಿನಿ ಸಹಕಾರಿ
ರೈತರು ಸರ್ಕಾರದ ಸೌಕರ್ಯ ಪಡೆಯಲು ಎಫ್‌ಐಡಿ ಮಾಡಿಸಲಿ: ಚೇತನಾ ಪಾಟೀಲ