ಹಾನಗಲ್ಲ: ಗುರುಕುಲ ಪದ್ಧತಿಯ ಶಿಕ್ಷಣದ ವೈಜ್ಞಾನಿಕ ಅಂಶಗಳನ್ನೂ ಅಳವಡಿಸಿಕೊಂಡು ಬದಲಾದ ಕಾಲಕ್ಕೆ ಅಗತ್ಯವಾದ ಜ್ಞಾನವನ್ನು ಮಕ್ಕಳಿಗೆ ನೀಡುವುದು ತೀರ ಅವಶ್ಯವಾಗಿದ್ದು, ಇದರಲ್ಲಿ ಶಾಲಾ ಸುಧಾರಣಾ ಸಮಿತಿ ಪಾತ್ರವೂ ಬಹುಮುಖ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಅನಿತಾ ಡಿಸೋಜಾ, ಶಾಲಾಭಿವೃದ್ಧಿಯಲ್ಲಿ ಸಮುದಾಯದ ಪಾತ್ರ ಬಹುಮುಖ್ಯ. ನಮ್ಮ ಶಾಲೆಗಳು ನಮ್ಮ ಮಕ್ಕಳ ಭವಿಷ್ಯ ರೂಪಿಸುತ್ತವೆ ಎಂಬ ವಿಶ್ವಾಸವಿರಲಿ. ಅಲ್ಲದೆ ಅದಕ್ಕಾಗಿ ಬೇಕಾಗುವ ಬೆಂಬಲ ಹಾಗೂ ಪ್ರೋತ್ಸಾಹ ಸಾರ್ವಜನಿಕರಿಂದ ಸಿಗಬೇಕು. ಶಾಲಾಭಿವೃದ್ಧಿ ಸಮಿತಿ ತಮಗೆ ಸಿಕ್ಕಿರುವ 3 ವರ್ಷಗಳ ಸೇವಾವಕಾಶವನ್ನು ಶಾಲೆಗಳ ಅಭಿವೃದ್ಧಿಗೆ ಸದುಪಯೋಗ ಮಾಡಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಕೆಡಿಪಿ ಸದಸ್ಯ ಮಾರ್ಕಂಡೆಪ್ಪ ಮಣ್ಣಮ್ಮನವರ, ಸುಧಾ ಹವಳಣ್ಣವರ, ಜನವೇದಿಕೆ ಮುಖಂಡರಾದ ಮುನಿರಹ್ಮದ ಗೊಂದಿ, ಪಾಲಾಕ್ಷಯ್ಯ ಹಿರೇಮಠ, ರಾಮಚಂದ್ರ ಶಿಡ್ಲಾಪುರ ಬಸವರಾಜ ಕೊತಂಬ್ರಿ, ಮಂಜಪ್ಪ ಸಾದರ, ಪಕ್ಕೀರಪ್ಪ ಬಾಳೂರ, ಮಾರ್ತಾಂಡಪ್ಪ ತಳವಾರ, ಸೋಮಲಪ್ಪ ಕೊಪ್ಪದ ಪವಿತ್ರಾ ತಳಗೇರಿ, ಮಂಜುನಾಥ ಕುದರಿ, ಕಲೀಂ ಮಾಸನಕಟ್ಟಿ, ರಾಘವೇಂದ್ರ ಗಾಯಕ್ವಾಡ, ಶಿಕ್ಷಕರಾದ ಪಿ.ಎಂ. ಕುಲಕರ್ಣಿ, ರಾಜಶೇಖರ ಹಳ್ಳಿಬೈಲ, ಎ.ಎಸ್. ತೋಟದ, ಚಂದ್ರಪ್ಪ ಪೂಜಾರ ಮೊದಲಾದವರಿದ್ದರು.ಮಹಿಳೆಯರು ಆರೋಗ್ಯ ಕಾಳಜಿ ವಹಿಸಲಿರಾಣಿಬೆನ್ನೂರು: ಮಹಿಳೆಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಆರೋಹಣ ಸಂಸ್ಥೆಯ ಡಾ. ರತ್ನಪ್ರಭಾ ತಿಳಿಸಿದರು.ನಗರದ ದೊಡ್ಡಪೇಟೆ ಸರ್ಕಾರಿ ಪ್ರಾಥಮಿಕ ಶಾಲೆ ನಂ. 15ರಲ್ಲಿ ಆರೋಹಣ ಸಂಸ್ಥೆ ವತಿಯಿಂದ 20 ವರ್ಷದ ಮೇಲ್ಪಟ್ಟ ಮಹಿಳೆಯರಿಯಾಗಿ ಹಮ್ಮಿಕೊಂಡಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್ ಪ್ರಕರಣಗಳು ಕಂಡುಬರುತ್ತಿವೆ. ಈ ನಿಟ್ಟಿನಲ್ಲಿ ರೋಗ ಬರುವ ಕಾರಣ, ಲಕ್ಷಣಗಳು ಹಾಗೂ ಅದರ ತಡೆಗಟ್ಟುವಿಕೆ ಕುರಿತು ಸಮಗ್ರ ಮಾಹಿತಿ ನೀಡಿದರು.