-ಸುರಪುರದಲ್ಲಿ ವೀರಶೈವ ಮಹಾಸಭೆ ತಾಲೂಕು ಘಟಕದಿಂದ ಬಿದರಿಗೆ ಸನ್ಮಾನ
------ಕನ್ನಡಪ್ರಭ ವಾರ್ತೆ ಸುರಪುರ
ಶತಮಾನದ ಇತಿಹಾಸವಿರುವ ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಹಾನಗಲ್‌ದ ಗುರುಕುಮಾರ ಶಿವಯೋಗಿಗಳು ಸ್ಥಾಪಿಸಿದ್ದು, ಸಮಾಜದ ಏಳಿಗೆ ಮತ್ತು ಬೆಳವಣಿಗೆಗೆ ಸರ್ವರು ಶ್ರಮಿಸಬೇಕು ಎಂದು ಅಭಾವೀಶೈ ಮಹಾಸಭೆಯ ರಾಜ್ಯಾಧ್ಯಕ್ಷ, ನಿವೃತ್ತ ಐಪಿಎಸ್ ಅಧಿಕಾರಿ ಡಾ. ಶಂಕರ ಬಿದರಿ ಹೇಳಿದರು.ನಗರದ ವೀರಶೈವ ಮಹಾಸಭೆಯ ಕಾರ್ಯಾಲಯದಲ್ಲಿ ಮಹಾಸಭೆ ತಾಲೂಕು ಘಟಕದಿಂದ ಆಯೋಜಿಸಿದ್ದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ವೀರಶೈವ ಸಮಾಜದ ಹೆಚ್ಚು ಯುವಕರನ್ನು ಸಮಾಜಮುಖಿಯಾಗಿ ಸಂಘಟಿಸುವ ಮೂಲಕ ಮಹಾಸಭೆಯ ಸದಸ್ಯತ್ವ ನೀಡಿ ಕ್ರಿಯಾಶೀಲಗೊಳಿಸಬೇಕು ಎಂದರು.
ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಕ್ರಿಯಾಶೀಲವಾಗಿ ಸಂಘಟಿಸಿ ಯುವಕರಲ್ಲಿ ಸಮಾಜದ ಬಗ್ಗೆ ಜಾಗೃತಿ ಮೂಡಿಸಬೇಕು. ಮುಂಬರುವ ದಿನಗಳಲ್ಲಿ ಮಹಾಸಭೆಯ ಮೂಲಕ ಪ್ರತಿ ಜಿಲ್ಲಾ ಮತ್ತು ತಾಲೂಕುಗಳಲ್ಲೂ ವೀರಶೈವ ಲಿಂಗಾಯತ ಭವನ ಸ್ಥಾಪನೆ, ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡುವುದು, ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳ ಪ್ರಾರಂಭ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಮಹಾಸಭೆಯ ಸುರಪುರ ತಾಲೂಕು ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ, ತಾಲೂಕಿನ ಮಹಾಸಭೆಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ತಾಲೂಕು ವೀರಶೈವ ಸಮಿತಿ ಅಧ್ಯಕ್ಷ ಡಾ. ಸುರೇಶ ಸಜ್ಜನ್ ಸುರಪುರ ತಾಲೂಕು ವೀರಶೈವ ಲಿಂಗಾಯತ ಸಮಿತಿಯ ಚಟುವಟಿಕೆಗಳ ಕುರಿತು, ಬಸವೇಶ್ವರ ಪತ್ತಿನ ಸಹಕಾರಿ ಸಂಘ, ವೀರಶೈವ ಕಲ್ಯಾಣ ಮಂಟಪ ಸೇರಿದಂತೆ ಇತರೆ ಮಾಹಿತಿ ನೀಡಿದರು.
ಬಸವರಾಜ ಜಮದ್ರಖಾನಿ, ಮಲ್ಲಣ್ಣ ಸಾಹುಕಾರ ಮುಧೋಳ, ಸುಗೂರೇಶ ವಾರದ, ಸಂಗಣ್ಣ ಏಕ್ಕೆಳ್ಳಿ, ವೀರೆಶ ನಿಷ್ಠಿ ದೇಶಮುಖ, ಮಂಜುನಾಥ ಜಾಲಹಳ್ಳಿ, ಶಿವಶರಣಪ್ಪ ಹೆಡಗಿನಾಳ, ಅಮರಯ್ಯ ಸ್ವಾಮಿ ಕಡ್ಲೆಪ್ಪ ಮಠ, ಜಗದೀಶ ಪಾಟೀಲ ಸೂಗುರು, ಚನ್ನಪ್ಪಗೌಡ ದೇವಾಪೂರ, ಪ್ರಕಾಶ ಹೆಮ್ಮಡಗಿ, ಶರಣಯ್ಯ ಶ್ರೀಗಿರಿಮಠ, ಸಿದ್ಧನಗೌಡ ಹೆಬ್ಬಾಳ, ಮಲ್ಲು ಬಾದ್ಯಾಪೂರ, ಸಿದ್ಧಲಿಂಗರೆಡ್ಡಿ, ಸಿದ್ಧನಗೌಡ ಪಾಟೀಲ್ ದೇವಾಪುರ ಇದ್ದರು.---
ಫೋಟೊ: ಸುರಪುರ ನಗರದ ವೀರಶೈವ ಮಹಾಸಭೆಯ ಕಾರ್ಯಾಲಯದಲ್ಲಿ ಮಹಾಸಭೆ ತಾಲೂಕ ಘಟಕದಿಂದ ಡಾ. ಶಂಕರ ಬಿದರಿ ಅವರನ್ನು ಸನ್ಮಾನಿಸಲಾಯಿತು.2ವೈಡಿಆರ್10