ಕನ್ನಡ ಸಾಹಿತ್ಯ ಪರಿಷತ್‌ ಉಡುಪಿ ತಾಲೂಕು ಘಟಕದ ‘ಉಡುಪಿ ಚಾವಡಿ’ ಅಭಿಯಾನ ಪ್ರಾರಂಭ

KannadaprabhaNewsNetwork |  
Published : Feb 02, 2025, 11:48 PM IST
2ಚಾವಡಿ | Kannada Prabha

ಸಾರಾಂಶ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ವತಿಯಿಂದ ಮ್ಯಾಕ್ಸ್ ಮೀಡಿಯಾ ಸಹಕಾರದಲ್ಲಿ ನಡೆಯುವ ನೂತನ ಅಭಿಯಾನ ‘ಉಡುಪಿ ಚಾವಡಿ’ ಕಾರ್ಯಕ್ರಮಕ್ಕೆ ಖ್ಯಾತ ಚಲನಚಿತ್ರ ನಟ, ರಂಗ ನಿರ್ದೇಶಕ ಮಂಡ್ಯ ರಮೇಶ್ ಜ.31ರಂದು ಭಿತ್ತಿಪತ್ರ ಅನಾವರಣಗೊಳಿಸುವ ಮೂಲಕ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ವತಿಯಿಂದ ಮ್ಯಾಕ್ಸ್ ಮೀಡಿಯಾ ಸಹಕಾರದಲ್ಲಿ ನಡೆಯುವ ನೂತನ ಅಭಿಯಾನ ‘ಉಡುಪಿ ಚಾವಡಿ’ ಕಾರ್ಯಕ್ರಮಕ್ಕೆ ಖ್ಯಾತ ಚಲನಚಿತ್ರ ನಟ, ರಂಗ ನಿರ್ದೇಶಕ ಮಂಡ್ಯ ರಮೇಶ್ ಜ.31ರಂದು ಭಿತ್ತಿಪತ್ರ ಅನಾವರಣಗೊಳಿಸುವ ಮೂಲಕ ಚಾಲನೆ ನೀಡಿದರು.ಈ ಸಂದರ್ಭ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ತನ್ನ ಹತ್ತು ಹಲವಾರು ವಿಶೇಷ ಕಾರ್ಯಕ್ರಮಗಳ ಮೂಲಕ ರಾಜ್ಯದ ಗಮನ ಸೆಳೆದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ ಕನಸಿನ ಕೂಸಾದ ಈ ಕನ್ನಡ ಸಾಹಿತ್ಯ ಪರಿಷತ್, ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಕನ್ನಡ ನಾಡು ನುಡಿ ಸಾಂಸ್ಕೃತಿಕವಾಗಿ ವಿಶೇಷವಾದ ಕಾಯಕವನ್ನು ಮಾಡುತ್ತಿದೆ ಎಂದರು.ಉಡುಪಿಗೆ ಬರುವ ಮಹಾನ್ ವ್ಯಕ್ತಿಗಳ ಮಾತುಗಳು ಈ ಮೂಲಕ ದಾಖಲೀಕರಣಗೊಳ್ಳಲಿರುವುದು ಅಭಿನಂದನೀಯ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ಅಧ್ಯಕ್ಷ ರವಿರಾಜ್ ಎಚ್.ಪಿ. ಮಾತನಾಡಿ, ಉಡುಪಿ ಒಂದು ಸಾಂಸ್ಕೃತಿಕ ನಗರ. ಉಡುಪಿಗೆ ಬರುವ ವಿಶೇಷ ಅತಿಥಿಗಳನ್ನು ಮತ್ತು ಉಡುಪಿಯಲ್ಲಿರುವ ಸಾಧನೆ ಮಾಡಿದ ಸಾಧಕರನ್ನು ಜನರಿಗೆ ಪರಿಚಯಿಸುವ ನೂತನ ಅಭಿಯಾನ ಉಡುಪಿ ಚಾವಡಿ ಎಂದರು.ವೇದಿಕೆಯಲ್ಲಿ ಅಭಿಯಾನದ ಸಂಯೋಜಕಿ ಪೂರ್ಣಿಮಾ ಜನಾರ್ದನ್, ಮ್ಯಾಕ್ಸ್ ಮೀಡಿಯಾದ ವಿನಾಯಕ್, ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು, ಸಂಘಟನಾ ಕಾರ್ಯದರ್ಶಿಗಳಾದ ರಾಘವೇಂದ್ರ ಪ್ರಭು ಕರ್ವಾಲು, ಸತೀಶ್ ಕೊಡವೂರು, ಸಿದ್ದಲಿಂಗಯ್ಯ ಸ್ವಾಮಿ ಚಿಕ್ಕಮಠ ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!