ಹೊನ್ನಾವರ:
ತಾಲೂಕಿನ ಗೇರುಸೊಪ್ಪದಿಂದ ಸುಮಾರು ಎರಡು ಕಿಮೀ ದೂರದಲ್ಲಿರುವ ಡ್ಯಾಂ ಬಳಿಯಲ್ಲಿ ಮಿನಿ ಬಸ್ಸೊಂದು ಧರೆಗೆ ಗುದ್ದಿ ಅಪಘಾತ ಸಂಭವಿಸಿದ್ದು, ಚಿಕ್ಕಮಗಳೂರಿನಿಂದ ಗೋವಾಗೆ ತೆರಳುತ್ತಿದ್ದ ಮಿನಿ ಬಸ್ ಅಪಘಾತಕ್ಕೆ ತುತ್ತಾಗಿದೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 9 ಜನರಿಗೂ ಗಂಭೀರ ಗಾಯಗಳಾಗಿದ್ದು, ಪಟ್ಟಣದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ.
ಇನ್ನೊಂದು ಪ್ರಕರಣದಲ್ಲಿ ಬಾಳೆಗದ್ದೆಯಲ್ಲಿ ಮದುವೆ ಟೆಂಪೋವೊಂದು ಚಾಲಕನಿಲ್ಲದೆ ಚಲಿಸಿ ಅಪಘಾತಕ್ಕೆ ತುತ್ತಾಗಿದೆ. ಚಾಲಕನಿಲ್ಲದೆ ಚಲಿಸಿದ ಟೆಂಪೋ ಅಲ್ಲಿಯೇ ನಿಂತಿದ್ದ ಬೈಕ್ ಮೇಲೆ ಹರಿದು ಬೈಕ್ ಜಖಂಗೊಂಡಿದೆ. ಟೆಂಪೊದೊಳಗೆ ನಾಲ್ಕು ಜನರಿಗೆ ಚಿಕ್ಕಪುಟ್ಟ ಗಾಯಗಳಾಗಿದೆ.ಉತ್ತರ ಕನ್ನಡದಲ್ಲಿ ಒಸಿ ಪ್ರಕರಣವೇ ಅಧಿಕ
ಕಾರವಾರ: ಜಿಲ್ಲೆಯಲ್ಲಿ ಕಳೆದ ಎರಡು ವರ್ಷದಲ್ಲಿ ಒಸಿ(ಮಟ್ಕಾ) ಪ್ರಕರಣವೇ ಹೆಚ್ಚು ದಾಖಲಾಗಿದೆ. ಮಿತಿ ಮೀರಿದ ಬಡ್ಡಿ ವಿಧಿಸಿರುವ ಪ್ರಕರಣ ಅತ್ಯಂತ ಕಡಿಮೆ ದಾಖಲಾಗಿದೆ.
ಗೋಹತ್ಯೆ ನಿಷೇಧ ಕಾಯಿದೆಯಡಿ ೬೪ ಪ್ರಕರಣ ದಾಖಲಾಗಿದ್ದು, ೪೧೨ ಜಾನುವಾರು ರಕ್ಷಣೆ ಮಾಡಲಾಗಿದೆ. ೨೧೧೫ ಕೆಜಿ ಗೋಮಾಂಸ ವಶಕ್ಕೆ ಪಡೆಯಲಾಗಿದೆ. ಒಸಿ(ಮಟ್ಕಾ) ಸಂಬಂಧಿಸಿ ೬೩೩ ಪ್ರಕರಣ ದಾಖಲಿಸಲಾಗಿದ್ದು, ೭೨೧ ಜನರನ್ನು ಬಂಧಿಸಲಾಗಿದೆ.₹೯.೯೮ ಲಕ್ಷ ಜಪ್ತಿ ಮಾಡಲಾಗಿದೆ. ಅಬಕಾರಿ ಕಾಯಿದೆಯಡಿ ೩೮೦ ಪ್ರಕರಣ ದಾಖಲಿಸಿದ್ದು, ೪೦೮ ಜನರನ್ನು ವಶಕ್ಕೆ ಪಡೆಯಲಾಗಿದೆ. ₹೫೨.೫೭ ಲಕ್ಷ ಮೌಲ್ಯದ ೧೫೦೭೯ ಲೀ. ಮದ್ಯ ಜಪ್ತಿ ಮಾಡಲಾಗಿದೆ. ಅಕ್ರಮ ಮರಳು ಸಾಗಾಟಕ್ಕೆ ಸಂಬಂಧಿಸಿದಂತೆ ೧೬೬ ಪ್ರಕರಣ ದಾಖಲಾಗಿದ್ದು, ೧೮೭ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.₹೭೦ ಲಕ್ಷ ಮೌಲ್ಯದ ಮರಳನ್ನು ವಶಕ್ಕೆ ಪಡೆಯಲಾಗಿದೆ. ಮಿತಿ ಮೀರಿದ ಬಡ್ಡಿ ವಿಧಿಸುವಿಕೆ ಕಾಯಿದೆಯಡಿ ೫ ಪ್ರಕರಣ ದಾಖಲಾಗಿದ್ದು, ೭ ಜನರನ್ನು ವಶಕ್ಕೆ ಪಡೆಯಲಾಗಿದೆ.