ಕನ್ನಡಪ್ರಭ ವಾರ್ತೆ ಹುಕ್ಕೇರಿ
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘಕ್ಕೆ ಭೇಟಿ ನೀಡಿ ಸಿಬ್ಬಂದಿಗೆ ಕಾಯಂ ನೇಮಕಾತಿ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು. ವಿದ್ಯುತ್ ಸಂಘದಲ್ಲಿ ಕಳೆದ ಹತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿಗೆ ಹಂತ ಹಂತವಾಗಿ ನೇಮಕಾತಿ ಪತ್ರ ನೀಡಲಾಗುವುದು. ಸಿಬ್ಬಂದಿ ಹಾಗೂ ಕುಟುಂಬದವರಿಗೆ ಸೇವಾ ಭದ್ರತೆ (ವಿಮೆ), ಬೋನಸ್ ಅನ್ನು ಆಡಳಿತ ಮಂಡಳಿಯವರು ಸೌಲಭ್ಯ ಒದಗಿಸಬೇಕು. ಸಂಘಕ್ಕೆ ಗ್ರಾಪಂಗಳಲ್ಲಿ ಬಾಕಿ ಇರುವ ₹12 ಕೋಟಿಯಲ್ಲಿ ₹4 ಕೋಟಿ ವಸೂಲಾಗಿದೆ. ಸರ್ಕಾರದಿಂದ ಗಂಗಾ ಕಲ್ಯಾಣ ಹಾಗೂ ಅತಿವೃಷ್ಟಿಗಳಿಂದ ಬಾಕಿ ಹಣ ಉಳಿದ ಬಿಲ್‌ಗಳನ್ನು ಹಂತ ಹಂತವಾಗಿ ಭರಣಾ ಮಾಡುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ಖಾಸಗಿ ವಿದ್ಯುತ್ ಉತ್ಪದನಾ ಕಂಪನಿಯವರಿಂದ ಕಡಿಮೆ ದರದಲ್ಲಿ ವಿದ್ಯುತ್ ಖರೀದಿಸಿ ವಿತರಿಸಿದರೆ ಸಂಘಕ್ಕೆ ಇನ್ನು ಹೆಚ್ಚಿನ ಲಾಭವಾಗಲಿದೆ. ತೋಟಪಟ್ಟಿ ನಿರಂತರ ಯೋಜನೆಯನ್ನು ₹2 ಕೋಟಿ ವೆಚ್ಚದಲ್ಲಿ ಎಲಿಮುನ್ನೋಳಿ ಗ್ರಾಮದಲ್ಲಿ ಪ್ರಾಯೋಗಿಕವಾಗಿ ಪ್ರಾರಂಭ ಮಾಡಲಾಗಿದೆ. 5 ಕಡೆ ವಿದ್ಯುತ್ ಉಪಕೇಂದ್ರಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಸಹಕಾರಿ ಮಹರ್ಷಿ ದಿ.ಅಪ್ಪಣಗೌಡ ಪಾಟೀಲ ಅವರು ಸ್ಥಾಪಿಸಿದ ಸಂಘಕ್ಕೆ ಅವರ ಹೆಸರು ಇಡುವುದು ಸೂಕ್ತ ಎಂದು ಹೇಳಿದರು.ಬರುವ ಮೂರು ತಿಂಗಳಿನಲ್ಲಿ ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿದೆ. ಸಚಿವ, ಶಾಸಕ, ಮುಖಂಡರ ಶಿಪಾರಸ್ಸು ಇಲ್ಲದೆ ರೈತರ ಕೆಲಸಗಳು ಆಗಬೇಕು. ಆ ರೀತಿ ಆಡಳಿತ ಮಂಡಳಿಯವರು ಗ್ರಾಹಕರೊಂದಿಗೆ ಸ್ಪಂದಿಸಿ ಜನಮನ್ನಣೆ ಪಡೆಯಬೇಕು. ವಿರೋಧಿ ಬಣ ಈಗಾಗಲೆ ಚುನಾವಣೆಯ ತಾಲೀಮು ನಡೆಸಿದ್ದು, ತಾವೂ ಕೂಡ ಅದನ್ನು ಗಮನದಲ್ಲಿಟ್ಟುಕೊಂಡು 50 ಸಾವಿರ ಮತದಾರರ ಮನಸ್ಸು ಗೆಲ್ಲಲು ಪ್ರಯತ್ನಿಸಿ ಎಂದು ತಿಳಿಸಿದರು.
ಇದಕ್ಕೂ ಮೊದಲು ಹುಕ್ಕೇರಿ ಪುರಸಭೆಗೆ ತೆರಳಿ ಸಾರ್ವಜನಿಕರ ಸಾರ್ವಜನಿಕರ ಕುಂದುಕೊರತೆ ಆಲಿಸಿ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚಿಸಿದರು.