ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ನಿರ್ದೇಶಕರು ಸರ್ಕಾರಿ ನೌಕರರ ಹಿತ ಕಾಪಾಡಲು ಶ್ರಮಿಸುವ ಜೊತೆಗೆ ನೌಕರರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಉತ್ತಮ ಕಾರ್ಯನಿರ್ವಹಿಸಿ ಅವರ ಏಳಿಗೆಗೆ ಶ್ರಮಿಸಬೇಕೆಂದು ಶಾಸಕ ಶರಣು ಸಲಗರ ಸಲಹೆ ನೀಡಿದರು.ನಗರದ ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಸರ್ಕಾರಿ ನೌಕರರ ಸಂಘದ 2024ರಿಂದ 29ರವರೆಗೆ ತಾಲೂಕು ನಿರ್ದೇಶಕರ ಚುನಾವಣೆಯಲ್ಲಿ ವಿಜೇತರಾದ ನಿರ್ದೇಶಕರನ್ನು ಸನ್ಮಾನಿಸಿ ಮಾತನಾಡಿದ ಅವರು, ತಾಲೂಕು ನಿರ್ದೇಶಕರ ಚುನಾವಣೆಯಲ್ಲಿ ಸರ್ಕಾರಿ ನೌಕರರು ನಿಮ್ಮನ್ನು ಮತ ನೀಡುವ ಮೂಲಕ 33 ಜನರನ್ನು ಆಯ್ಕೆ ಮಾಡಿದ್ದಾರೆ. ತಾವೆಲ್ಲರೂ ಸೇರಿ ಉತ್ತಮ ಕೆಲಸ ಮಾಡುತ್ತೀರಿ ಎಂಬ ಆಶಾ ಭಾವನೆ ನನ್ನಲ್ಲಿದೆ ಎಂದರು.
ಸರ್ಕಾರಿ ನೌಕರರು ಬುದ್ಧಿಜೀವಿಗಳು ನೀವು ತಾಲೂಕಿನ ನೌಕರರ ಹಿತ ಕಾಪಾಡುವರು. ನೌಕರರ ಹಿತ ಕಾಪಾಡಲು ನೀವು ಒಳ್ಳೆಯ ಕೆಲಸ ಮಾಡಿ ಎಂದು ಸಲಹೆ ನೀಡಿದರು. ಈ ವೇಳೆ ಚನ್ನವೀರ ಜಮಾದಾರ, ಜಗನ್ನಾಥ ಪತಂಗೆ, ಚಂದ್ರಕಾಂತ ಬಿರಾದಾರ, ಮಹೇಶ ಮುಳೆ, ರಮೇಶ ರಾಜೋಳೆ ಸೇರಿದಂತೆ ಮತ್ತಿತರಿದ್ದರು.ಈ ವೇಳೆಯಲ್ಲಿ ಸರ್ಕಾರಿ ನೌಕರರ ಸಂಘದ 2024ರಿಂದ 29ರ ವರೆಗೆ ತಾಲೂಕು ನಿರ್ದೇಶಕರ ಚುನಾವಣೆಯಲ್ಲಿ ವಿಜೇತ ನಿರ್ದೇಶಕರಾದ ವಿಜಯಕುಮಾರ, ಡಾ. ಆನಂದ ಪಾಟೀಲ, ಕಾಶಿನಾಥ ಚಂಡಕಾಪೂರೆ, ಸುಧಾಕರ, ರಾಜಕುಮಾರ ಹಂಚಾಟೆ, ರೂಪಾದೇವಿ, ಅಂಬಣ್ಣ, ಸತೀಷ, ಎಂ.ಡಿ.ಶಕೀಲ ಅಹ್ಮದ, ಓಂಕಾರ, ಪ್ರಕಾಶ ವಾಡೇಕರ, ಶಿವಕುಮಾರ ಜಡಗೆ, ನಾಗರಾಜ, ಮಹಾಲೇಶ, ದಿಲೀಪಕುಮಾರ, ಸಂತೋಷಕುಮಾರ ಯಾಚೆ, ರೀಟಾ, ಪವಿತ್ರಕುಮಾರ, ಗಂಗಾಧರ, ಸುನೀಲಕುಮಾರ, ಬಸವರಾಜ, ಸಂತೋಷಕುಮಾರ ಚವ್ಹಾಣ, ಆನಂದ ಎ.ಕೆ, ಗೌತಮ ಸಿಂಧೆ, ರಾಕಾ, ರಾಜು ಬಾಬುರಾವ, ಪ್ರಶಾಂತ ಹಡಗಲಿ, ರಮೇಶ ಹಾದಿಮನಿ, ರಾಜಕುಮಾರ, ಡಾ. ಬಾಲಕೃಷ್ಣ ರಾಠೋಡ ಅವರನ್ನು ಶಾಸಕ ಶರಣು ಸಲಗರ ಅವರು ಗೌರವಿಸಿದರು.
ಸ್ಪಂದಿಸುವೆ, ರಾಜಕೀಯ ಬೆರೆಸದಿರಿ: ಶಾಸಕನೌಕರರ ಹಿತ ಕಾಪಾಡುವ ನಿರ್ದೇಶಕರಿಗೆ ನನ್ನಿಂದ ನಿಮಗೆ ಉತ್ತಮ ರೀತಿಯಲ್ಲಿ ಸ್ಪಂದನೆ ನೀಡುವೆ. ಒಳ್ಳೆಯವರನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿ ಬಸವಕಲ್ಯಾಣದ ಕೀರ್ತಿ ಇನ್ನಷ್ಟು ಹೆಚ್ಚಿಸಬೇಕು. ನಿಮಗೆ ಯಾರಾದರು ತೊಂದರೆ ಕೊಡುತ್ತಿದ್ದರೆ ನಿಮ್ಮ ರಕ್ಷಣೆಗೆ ನಾನು ನಿಲ್ಲುವೆ ಇದರಲ್ಲಿ ರಾಜಕೀಯ ಬೆರೆಸಬೇಡಿ ಎಂದು ಶಾಸಕ ಶರಣು ಸಲಗರ ಕಿವಿಮಾತು ಹೇಳಿದರು.