ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಪಟ್ಟಣದ ಆಸಂಗಿ ರಸ್ತೆಗೆ ಇರುವ ಹಳ್ಳಕ್ಕೆ ₹5 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಹಾಗೂ ₹3.75 ಕೋಟಿ ಅನುದಾನದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಗುಳೇದಗುಡ್ಡ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಸಂಬಂಧಪಟ್ಟ ಅಧಿಕಾರಿಗಳು, ಗುತ್ತಿಗೆದಾರರು ಬಹಳಷ್ಟು ಕಾಳಜಿ ವಹಿಸಿ ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಕಾಮಗಾರಿಗಳು ಕೂಡ ಗುಣಮಟ್ಟದಿಂದ ಕೂಡಿರಬೇಕು. ಗುಳೇದಗುಡ್ಡದಿಂದ ಆಸಂಗಿ ಕಟಗಿನಹಳ್ಳಿ, ಲಾಯದಗುಂದಿ, ನಾಗರಾಳ ಗ್ರಾಮಗಳಿಗೆ ಸಂಪರ್ಕಕೊಂಡಿಯಾಗಿ ಈ ಸೇತುವೆ ನಿರ್ಮಾಣವಾಗಲಿದೆ.ಪ್ರವಾಹದ ಸಂದರ್ಭದಲ್ಲಿ ಸೇತುವೆ ಜಲಾವೃತಗೊಳ್ಳುತ್ತಿದ್ದು, ಇದರಿಂದ ವಿವಿಧ ಗ್ರಾಮಗಳಿಂದ ಗುಳೇದಗುಡ್ಡಕ್ಕೆ ಆಗಮಿಸುವ ರೈತರು, ಸಾರ್ವಜನಿಕರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರು ಎಂದರು.
ಸರ್ಕಾರಿ ಐಟಿಐ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕೌಶಲ್ಯಾಭಿವೃದ್ಧಿ ಪಡಿಸಿಕೊಂಡರೆ ಉತ್ತಮ ಬದುಕು ರೂಪಿಸಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ಇಲ್ಲಿಯೇ ಕೈಗಾರಿಕಾ ಹಬ್ ನಿರ್ಮಾಣ ಮಾಡುವ ಕನಸು ನನ್ನದಾಗಿದೆ ಎಂದ ಅವರು, ಕಾಮಗಾರಿಗಳಿಗೆ ಅನುದಾನ ನೀಡಿದ ಅಂದಿನ ಸಚಿವರಾದ ಸತೀಶ ಜಾರಕಿಹೊಳಿ ಮತ್ತು ಡಾ.ಶರಣಗೌಡ ಪಾಟೀಲ ಅವರಿಗೆ ಕೃತಜ್ಞತೆ ಸಲ್ಲಿಸುವೆ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ಸುಭಾಸ ಹೊಸಮನಿ ಮಾತನಾಡಿದರು. ಲೆಂಕಪ್ಪ ಹಿರೆಕುರುಬರ, ವೈ.ಆರ್. ಹೆಬ್ಬಳ್ಳಿ, ಯಲ್ಲಪ್ಪ ಮನ್ನಿಕಟ್ಟಿ, ಕೆ.ಆರ್.ರಾಯಚೂರ, ರಜಾಕ ಕುದರಿ, ರಮೇಶ ಬೂದಿಹಾಳ, ಯಮನಪ್ಪ ಗೌಡ್ರ, ಎ.ಇಇ ಕಾಳಿದಾಸ ಬಾಸೂತಕರ್, ಎ.ಎಚ್.ಮಕಾನದಾರ, ಪ್ರಾಚಾರ್ಯ (ನೂಡಲ್)ವಿ.ಎಸ್. ಹಿರೇಮಠ, ಅಜೀತ ಜಮಾದಾರ ಸೇರಿದಂತೆ ಕಾಲೇಜು ಸಿಬ್ಬಂದಿ, ಕಾಂಗ್ರೆಸ್ ಕಾರ್ಯಕರ್ತರು, ಇದ್ದರು.