ಹಾನಗಲ್ಲ: ಬಾಲ್ಯವಿವಾಹ ತಡೆಗಟ್ಟುವುದು, ಅಪ್ರಾಪ್ತಯರಿಗೆ ಸೂಕ್ತ ಮಾರ್ಗದರ್ಶನ ಜಾಗೃತಿ ಮೂಡಿಸುವಲ್ಲಿ ಸಮಾಜದ ವಿವಿಧ ಸಾಮಾಜಿಕ ಸಂಘಟನೆಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವ ಅಗತ್ಯವಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಮು ಬಯಲುಸೀಮೆ ತಿಳಿಸಿದರು.ಗುರುವಾರ ಇಲ್ಲಿನ ರೋಶನಿ ಸಮಾಜ ಸೇವಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಜನವೇದಿಕೆ ಮುಖಂಡರು ಮತ್ತು ಹಳ್ಳಿಗಳ ಅಭಿವೃದ್ಧಿ ಸಮಿತಿಯಿ ಸದಸ್ಯರಿಗೆ ಶಿಶು ಅಭಿವೃದ್ಧಿ ಇಲಾಖೆಯಿಂದ ದೊರೆಯುವ ವಿವಿಧ ಸೌಲಭ್ಯ ಹಾಗೂ ಸಾಮಾಜಿಕ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಶಿಶು ಅಭಿವೃದ್ಧಿ ಇಲಾಖೆ ಮಹಿಳೆಯರು ಮತ್ತು ಮಕ್ಕಳ ಹಿತಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ಐಸಿಡಿಎಸ್ ಕಾರ್ಯಕ್ರಮ ಸಮಗ್ರ ಶಿಶು ಅಭಿವೃದ್ಧಿಯ ಯೋಜನೆಯಾಗಿದೆ. ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ನೀಡುವುದು, ಮಕ್ಕಳ ಸಹಾಯವಾಣಿಯ ಮೂಲಕ ರಕ್ಷಣೆ ನೀಡುವುದು, ಮಹಿಳೆಯರ ಸಹಾಯವಾಣಿ ಮೂಲಕ ಸಹಾಯಕ್ಕೆ ನಿಲ್ಲುವುದು, ಶಿಶುಪಾಲನಾ ಕೇಂದ್ರ, ಕೂಸಿನ ಮನೆ, ಬಾಲ್ಯವಿವಾಹ ತಡೆಗಟ್ಟುವುದು, ಮಹಿಳೆ ಮತ್ತು ಮಕ್ಕಳ ಮಾರಾಟ ಜಾಲವನ್ನು ತಡೆಗಟ್ಟುವುದು, ಅಹಿತಕರ ಘಟನೆಗಳ ಬಗ್ಗೆ ನಿಗಾ ವಹಿಸುವುದು ಅತ್ಯಂತ ಪರಿಣಾಮಕಾರಿ ಕಾರ್ಯಕ್ರಮಗಳಾಗಿವೆ. ಇದಕ್ಕೆ ಸಮಾಜದ ಸಮಾಜ ಸೇವಾ ಸಂಸ್ಥೆಗಳ ಸಹಕಾರವೂ ಅತ್ಯಗತ್ಯ ಎಂದರು.ರೋಶನಿ ಸಮಾಜಸೇವಾ ಸಂಸ್ಥೆಯ ನಿರ್ದೇಶಕಿ ಅನಿತಾ ಡಿಸೋಜಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆ ಮತ್ತು ಮಕ್ಕಳ ಸಮಸ್ಯೆಗಳ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಕಾಲ ಕಾಲಕ್ಕೆ ಮಾಹಿತಿ ನೀಡಿದರೆ ಮಾತ್ರ ಪರಿಹಾರ ಸಾಧ್ಯ. ತಾಲೂಕಿನಲ್ಲಿ 335 ಅಂಗನವಾಡಿ ಕೇಂದ್ರಗಳಿದ್ದು, ಜನವೇದಿಕೆ ಮುಖಂಡರು ಮತ್ತು ಹಳ್ಳಿ ಅಭಿವೃದ್ಧಿ ಸಮಿತಿ ಸದಸ್ಯರು ನಿಮ್ಮ ಗ್ರಾಮದ ಅಂಗನವಾಡಿ ಕೇಂದ್ರಗಳನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಗುರುತಿಸಿ, ಇಲಾಖೆಯ ಮೇಲಧಿಕಾರಿಗಳಿಗೆ ಮನವಿ ಮೂಲಕ ಅಧಿಕಾರಿಗಳ ಗಮನಕ್ಕೆ ತರುವಂತೆ ಕೋರಿದರು.ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದ ಮಹಿಳಾ ಮತ್ತು ಮಕ್ಕಳ ಇಲಾಖೆ ಮೇಲ್ವಿಚಾರಕಿ ಬಿ. ರಾಜೇಶ್ವರಿ, ನಮ್ಮ ತಾಲೂಕನ್ನು ಅಪೌಷ್ಟಿಕತೆ ಮುಕ್ತವಾಗಿಸಲು ಎಲ್ಲರೂ ಸೇರಿ ಪರಿಶ್ರಮಿಸೋಣ ಎಂದರು.ವಿವಿಧ ಗ್ರಾಮಗಳ ಜನವೇದಿಕೆ ಮುಖಂಡರಾದ ಮಾರುತಿ ಬಂಡಿವಡ್ಡರ, ಪಾಲಕ್ಷಯ್ಯ ಹಿರೇಮಠ, ರಾಮಚಂದ್ರ ಶಿಡ್ಲಾಪುರ, ಮಲ್ಲೇಶ ಲಮಾಣಿ, ಮಲ್ಲೇಶಪ್ಪ ಕೊಣನಕೇರಿ, ಮುನೀರಅಹ್ಮದ ಗೊಂದಿ, ಗೀತಾಂಜಲಿ ತಳವಾರ, ಕಲೀಮ್ ಮಾಸನಕಟ್ಟಿ, ನಿಂಗಪ್ಪ ಲಮಾಣಿ, ರಾಮಣ್ಣ ಬುಡ್ಡನವರ, ಸುಧಾ ಹವಳಣ್ಣನವರ, ನಾಗರಾಜ ಕೊಡಿಹಳ್ಳಿ, ವಿನೋದಾ ಹ್ಯಾತನವರ, ರೇಣುಕಾಕಲ್ಲೇರ, ಫಾತಿಮಾ ತಿಳುವಲ್ಲಿ, ಫಾತಿಮಾ ಬಾಳೂರ, ಅಮಿನಾ ಬಿ. ವಡಗೇರಿ, ನಿರ್ಮಲಾ ವೆಂಕಟಾಪೂರಮಠ, ಪರಶುರಾಮ ಅಂಬಿಗೇರ, ಪರಮೇಶ ಹರಿಜನ, ಪ್ರೇಮಾ ಪೂಜಾರ, ಕೃಷ್ಣಪ್ಪ ಹೊಸಮನಿ, ಪರಮೇಶಚೌಟಿ ಇತರರು ಇದ್ದರು.ಮಂಜುನಾಥ ಗೌಳಿ ಸಂವಿಧಾನ ಪ್ರಸ್ತಾವನೆ ಮಂಡಿಸಿದರು. ಎಸ್.ವಿ. ಪಾಟೀಲ ಸ್ವಾಗತಿಸಿದರು. ಕೆ.ಎಫ್. ನಾಯಕ್ಕರ ನಿರೂಪಿಸಿದರು. ಗೌರಮ್ಮ ವೈ.ಕೆ. ವಂದಿಸಿದರು.