ಶಿಗ್ಗಾಂವಿ: ಪಾಶ್ಚಿಮಾತ್ಯ ಪ್ರಭಾವದಿಂದಾಗಿ ಇಂದು ಸನಾತನ ಧರ್ಮ, ಸಂಸ್ಕಾರ, ಸಂಸ್ಕೃತಿಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ಪ್ರತಿಯೊಬ್ಬರು ಜಾಗೃತರಾಗಬೇಕಿದ್ದು ಈ ಮೂಲಕ ನಮ್ಮ ಧರ್ಮವನ್ನು ಸಂರಕ್ಷಣೆ ಮಾಡಬೇಕು ಎಂದು ದೈವಜ್ಞ ಬ್ರಾಹ್ಮಣ ಸಮಾಜದ ಮಠಾಧೀಶ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮಿ ಕರೆ ನೀಡಿದರು.ಪಟ್ಟಣದ ಶಂಕರಗೌಡ್ರ ಕಲ್ಯಾಣ ಮಂಟಪದಲ್ಲಿ ನಡೆದ ದೈವಜ್ಞ ದರ್ಶನ ಧರ್ಮ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಸಮಾಜಕ್ಕಾಗಿ ಸಮಯ ದಾನ, ಅರ್ಪಣಾ ಮನೋಭಾವ ಬೆಳೆಸಿ ಕೊಳ್ಳಿರಿ, ಸಮಾಜದಿಂದ ನಿಮ್ಮ ಮಕ್ಕಳಿಗೆ ಸಂಸ್ಕಾರ ನೀಡುವ ಮೂಲಕ ಧರ್ಮ ಬೆಳೆಸುವ ಕಾರ್ಯ ಮಾಡಿ. ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಕಲಿಸಿ ಉನ್ನತ ಹುದ್ದೆಯನ್ನು ಪಡೆಯಲು ಪ್ರೇರೇಪಿಸಿ, ಸಮಾಜ ಕಟ್ಟುವ ಕೆಲಸಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು. ಸಮ್ಮುಖವಹಿಸಿದ್ದ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿ ಮಾತನಾಡಿ, ಹಿರಿಯ ಶ್ರೀಗಳ ಮಾರ್ಗ ದರ್ಶನ, ಸಮಾಜದ ಸಹಕಾರದಿಂದ ಎಲ್ಲರನ್ನು ಒಗ್ಗೂಡಿಸಿ ಪರಮಾತ್ಮ ಸೇವೆ ಮಾಡಲು ಮುಂದಾಗೋಣ ಎಂದರು. ದೈವಜ್ಞ ಸಮಾಜದ ಅಧ್ಯಕ್ಷ ಸುಧಾಕರ ದೈವಜ್ಞ, ಪ್ರಾಸ್ತಾವಿಕವಾಗಿ ಮಾತನಾಡಿ, ಮುಂದಿನ ದಿನಗಳಲ್ಲಿ ಗಣಪತಿ ದೇವಸ್ಥಾನ ಕಟ್ಟುವ ಸಂಕಲ್ಪ ಮಾಡೋಣ ಅದಕ್ಕೆ ಉಭಯ ಶ್ರೀಗಳ ಆಶೀರ್ವಾದ ಬೇಕು ಎಂದರು.
ಪಟ್ಟಣದ ಶಂಕರಗೌಡ್ರ ಕಲ್ಯಾಣ ಮಂಟಪದಲ್ಲಿ ನಡೆದ ದೈವಜ್ಞ ದರ್ಶನ ಧರ್ಮ ಜಾಗೃತಿ ಕಾರ್ಯಕ್ರಮವನ್ನು ದೈವಜ್ಞ ಬ್ರಾಹ್ಮಣ ಸಮಾಜದ ಮಠಾಧೀಶ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮಿ ಉದ್ಘಾಟಿಸಿ ಮಾತನಾಡಿದರು.೧೮ಎಸ್‌ಜಿವಿ೧-೧ ಪಟ್ಟಣದ ಶಂಕರಗೌಡ್ರ ಕಲ್ಯಾಣ ಮಂಟಪದಲ್ಲಿ ನಡೆದ ದೈವಜ್ಞ ದರ್ಶನ ಧರ್ಮ ಜಾಗೃತಿ ಕಾರ್ಯಕ್ರಮ ಸಮಾಜದ ಮಕ್ಕಳಿಂದ ಭರತ ನಾಟ್ಯ ನೇರವೇರಿತು.