ಧರ್ಮದ ಏಳಿಗೆ, ಜಾಗೃತಿಗೆ ಒಟ್ಟಾಗಿ ದುಡಿಯಿರಿ: ಮಾಜಿ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ

KannadaprabhaNewsNetwork | Published : Feb 21, 2024 2:08 AM

ಸಾರಾಂಶ

ಧರ್ಮದ ಏಳಿಗೆ ಹಾಗೂ ಜಾಗೃತಿಗೆ ಸಮಾಜದವರು ಒಟ್ಟಾಗಿ ದುಡಿಯಬೇಕು.

ಕನ್ನಡಪ್ರಭ ವಾರ್ತೆ ಸವಣೂರು

ಧರ್ಮದ ಏಳಿಗೆ ಹಾಗೂ ಜಾಗೃತಿಗೆ ಸಮಾಜದವರು ಒಟ್ಟಾಗಿ ದುಡಿಯಬೇಕು. ಆ ನಿಟ್ಟಿನಲ್ಲಿ ಶಿಕ್ಷಣದಿಂದ ವಂಚಿತರಾಗದೇ ರಾಜಕೀಯವಾಗಿ ಮುಂದೆ ಬಂದು ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದು ತುರುವೇಕೆರೆ ಮಾಜಿ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ ನುಡಿದರು.

ತಾಲೂಕಿನ ಹೂವಿನ ಶಿಗ್ಲಿ ಗ್ರಾಮದ ನೂತನ ಬನಶಂಕರಿ ದೇವಸ್ಥಾನ ಲೋಕಾರ್ಪಣೆ ಹಾಗೂ ಬನಶಂಕರಿ ದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಸಾನಿಧ್ಯ ವಹಿಸಿದ್ದ ಹೂವಿನಶಿಗ್ಲಿಯ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ದೇವಾಂಗ ಸಮಾಜದ ಏಳಿಗೆ ಒಗ್ಗಟ್ಟಿನಿಂದ ಸಾಧ್ಯ. ಎಲ್ಲರೂ ಆರ್ಥಿಕ, ಸಾಮಾಜಿಕವಾಗಿ ಮೇಲುಗೈ ಸಾಧಿಸಬೇಕು. ಶೈಕ್ಷಣಿಕವಾಗಿ ಉದ್ಧಾರವಾಗಬೇಕಾದರೆ ಮಕ್ಕಳಿಗೆ ಶಿಕ್ಷಣ ನೀಡಿ, ಒಳ್ಳೆಯ ಸಂಸ್ಕಾರ ನೀಡಬೇಕು ಎಂದರು.

ಅಕ್ಕಿಆಲೂರು ಶ್ರೀ ವಿರಕ್ತ ಮಠದ ಶಿವಬಸವ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ಜಪದಕಟ್ಟೆ ಮಠ ಮೈಸೂರಿನ ಬನ್ನಿಕೊಪ್ಪದ ಜಪದಕಟ್ಟೆ ಮಠದ ಸುಜ್ಞಾನ ದೇವ ಶಿವಾಚಾರ್ಯರು ಹಾಗೂ ಗುಡ್ಡದಾನ್ವೇರಿಯ ಶಿವಯೋಗಿಸ್ವರ ಮಹಾಸ್ವಾಮಿಗಳು ಭಾಗವಹಿಸಿದ್ದರು.

ಕರ್ನಾಟಕ ದೇವಾಂಗ ಸಮಾಜದ ಅಧ್ಯಕ್ಷ ರವೀಂದ್ರ ಕಲಬುರ್ಗಿ, ಕರ್ನಾಟಕ ಶೋಷಿತ ಒಕ್ಕೂಟದ ಕಾರ್ಯದರ್ಶಿ ವೆಂಕಟರಾಮಯ್ಯ ಆರ್. ಎಣ್ಣೆಗೆರೆ, ಹಾವೇರಿ ದೇವಾಂಗ ಸಮಾಜದ ಅಧ್ಯಕ್ಷ ಸಂಕಪ್ಪ ಮಾರ್ನಾಳ್, ದಶರಥರಾಜು ಕೊಳ್ಳಿ, ರಮೇಶಗೌಡ ಗುಡಿಸಾಗರ್, ಮಹಾಬಲೇಶ್ವರ ಬೇವಿನಮರದ, ಲಕ್ಷ್ಮೇಶ್ವರ ಸುಭಾಷ್ ಹುಲುಗೂರ್, ಸಿಗಲಿ ಜುಂಜಪ್ಪ ಅಗಡಿ, ಸಿಗ್ಲಿ ಬಾಲಚಂದ್ರಪ್ಪ ಹಾಲ್ಕೆರೆ, ಪಿಡಿಒ ರಮೇಶ್ ಹುಲಸೋಗಿ ಹಾಗೂ ಸಿ.ಎಸ್. ಮಂಜಲಾಪುರ ಇತರರಿದ್ದರು.

ಇದೇ ವೇಳೆ ಬನಶಂಕರಿ ದೇವಿ ಮೂರ್ತಿ ತಯಾರಕ ಚಂದ್ರು ಪತ್ತಾರ ಅವರನ್ನು ಸತ್ಕರಿಸಲಾಯಿತು. ಹಿರಿಯ ಸಾಹಿತಿ ಮಹದೇವ್ ಬಿಷ್ಟಣ್ಣವರ ಹಾಗೂ ಶಿಕ್ಷಕ ಕೆ.ಎಸ್. ಇಟಗಿ ಮಠ ಸ್ವಾಗತಿಸಿ, ನಿರೂಪಿಸಿದರು.

ಸಮಾರಂಭದಲ್ಲಿ ನಿವೃತ್ತ ಶಿಕ್ಷಕ ನಾಗೇಂದ್ರ ಕೊಳ್ಳಿ, ಗ್ರಾಪಂ ಸದಸ್ಯರಾದ ಲಕ್ಷ್ಮಣ ಸಿಗಡಿ, ಮಾಹಾಲಿಂಗಪ್ಪ ಶಿಗ್ಲಿ, ಪ್ರಧಾನ ಗುರು ಸಿ.ಡಿ. ಕುದರಿ ಮತ್ತು ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಇತರರಿದ್ದರು. ನಂತರ ಮಹಾಪ್ರಸಾದ ವಿನಿಯೋಗವಾಯಿತು.

Share this article