ಗ್ರಂಥಾಲಯ ಸಂಘದ ಚಟುವಟಿಕೆ ವಿಸ್ತರಣೆಯಲ್ಲಿ ಒಗ್ಗೂಡಿ ಕಾರ್ಯನಿರ್ವಹಿಸಿ

KannadaprabhaNewsNetwork |  
Published : Jul 02, 2026, 04:15 AM IST
ಬೆಳಗಾವಿ | Kannada Prabha

ಸಾರಾಂಶ

ಗ್ರಂಥಾಲಯ ಸಂಘದ ಚಟುವಟಿಕೆಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದು ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ರಾಜ್ಯಾಧ್ಯಕ್ಷ ಡಾ.ಎಸ್.ಎಲ್.ಕಾಡದೇವರಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಗ್ರಂಥಾಲಯ ಸಂಘದ ಚಟುವಟಿಕೆಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದು ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ರಾಜ್ಯಾಧ್ಯಕ್ಷ ಡಾ.ಎಸ್.ಎಲ್.ಕಾಡದೇವರಮಠ ಹೇಳಿದರು.

ನಗರದ ಜಿಲ್ಲಾ ಗ್ರಂಥಾಲಯ ಆವರಣದಲ್ಲಿ ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘ (ರಿ) ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ನಡೆದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಓದುವ ಹವ್ಯಾಸ ಹಾಗೂ ಆಸಕ್ತಿಗಳನ್ನು ಹೆಚ್ಚಿಸುವಂತ ಕಾರ್ಯ ಯೋಜನೆಗಳನ್ನು ಹಾಕಿಕೊಂಡು ಓದಿಸುವ ಪ್ರವೃತ್ತಿ ಹೆಚ್ಚಾಗಬೇಕು ಎಂದು ಸಲಹೆ ನೀಡಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.ಬೆಂಗಳೂರಿನ ಎಲ್ಐಎಸ್ ಅಕಾಡೆಮಿಯ ಅಧ್ಯಕ್ಷ ಪ್ರೊ.ಪಿ.ವಿ.ಕೊಣ್ಣೂರ ಮಾತನಾಡಿ, ಗ್ರಂಥಾಲಯ ಚಳುವಳಿಯ ಮಹತ್ವ ಮತ್ತು ಗ್ರಂಥಾಲಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರ ಜವಾಬ್ದಾರಿಯ ಬಗ್ಗೆ ವಿವರಿಸಿದರು.ಕಲಾ ಉಪಾಧ್ಯಕ್ಷ ಹಾಗೂ ಬೆಂಗಳೂರಿನ ಐಆರ್‌ಸಿ ಟಿಸಿಎಸ್‌ನ ಪ್ರಾದೇಶಿಕ ಮುಖ್ಯಸ್ಥ ಡಾ.ನಾಗಪ್ಪ ಬಕ್ಕಣ್ಣನವರ ನೂತನ ಪದಾಧಿಕಾರಿಗಳಿಗೆ ಸಂಘದ ನಿಯಮಾವಳಿ ಮತ್ತು ಉದ್ದೇಶಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸುವುದಾಗಿ ಪ್ರಮಾಣ ವಚನ ಬೋಧಿಸಿದರು.ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ಬೆಳಗಾವಿ ಜಿಲ್ಲಾ ಘಟಕದ ಸಲಹೆಗಾರ ಡಾ.ಕಿರಣ್ ಪಿ.ಸವನೂರ ಹಾಗೂ ಬೆಳಗಾವಿ ಜಿಲ್ಲಾ ಗ್ರಂಥಾಲಯ ಅಧಿಕಾರಿ ರಾಮಯ್ಯ ಉಪಸ್ಥಿತರಿದ್ದರು.ಡಾ.ರಾಜು ಗಡದ ಮತ್ತು ಡಾ.ಅಶ್ವಿನಿ ಲಟ್ಟೆ ಕಾರ್ಯಕ್ರಮ ನಿರೂಪಿಸಿದರು. ಡಾ.ಕಿರಣ ಮಾಳವಡೆ ವಂದಿಸಿದರು. ಜಿಲ್ಲೆಯಾದ್ಯಂತ ಗ್ರಂಥಾಲಯ ವೃತ್ತಿಪರರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಮುಕ್ತ ಚರ್ಚೆ, ಅಮೂಲ್ಯ ಸಲಹೆ ನೀಡಿದ ಗ್ರಂಥಾಲಯ ವೃತ್ತಿಪರರು

ಈ ಸಂದರ್ಭದಲ್ಲಿ ಸದಸ್ಯರು ಸಂಘದ ಮುಂದಿನ ಕಾರ್ಯಯೋಜನೆ, ಸದಸ್ಯತ್ವ ವೃದ್ಧಿ, ಗ್ರಂಥಾಲಯ ವೃತ್ತಿಪರರ ಕೌಶಲ್ಯಾಭಿವೃದ್ಧಿ, ಸರ್ಕಾರ ಮಟ್ಟದ ನೇಮಕಾತಿ, ತರಬೇತಿ ಕಾರ್ಯಾಗಾರಗಳು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನಗಳ ಆಯೋಜನೆ, ಡಿಜಿಟಲ್ ಗ್ರಂಥಾಲಯ ಸೇವೆಗಳ ವಿಸ್ತರಣೆ ಹಾಗೂ ಜಿಲ್ಲೆಯ ಎಲ್ಲ ಗ್ರಂಥಾಲಯಗಳ ನಡುವೆ ಸಮನ್ವಯ ಮತ್ತು ಸಹಕಾರ ಬಲಪಡಿಸುವ ಕುರಿತು ನಡೆದ ಚರ್ಚೆಗೆ ಪದಾಧಿಕಾರಿಗಳು ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದರು.ಅಧಿಕಾರ ಸ್ವೀಕರಿಸಿದ ಪದಾಧಿಕಾರಿಗಳು

ಸಮಾರಂಭದಲ್ಲಿ ಬೆಳಗಾವಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಡಾ.ಭರತ್ ಬಿ.ಅಲಸಂಡಿ, ಉಪಾಧ್ಯಕ್ಷರಾದ ರವಿ ಡಿ.ಶಿವಣಾಯ್ಕರ ಮತ್ತು ಡಾ.ರಮೇಶ ಬಿ.ಕುರಿ, ಪ್ರಧಾನ ಕಾರ್ಯದರ್ಶಿ ಡಾ.ಕಿರಣ ಮಾಳವಡೆ, ಸಂಘಟನಾ ಕಾರ್ಯದರ್ಶಿ ಪ್ರಕಾಶ ಇಚಲಕರಂಜಿ ಹಾಗೂ ಖಜಾಂಚಿ ಡಾ.ಸುಮನ್ ಮುದ್ದಾಪುರ ಅಧಿಕಾರ ಸ್ವೀಕರಿಸಿದರು. ಇದರೊಂದಿಗೆ ರಾಮಯ್ಯ, ಡಾ.ವೇಣುಗೋಪಾಲ ಹಜ್ಜಿ, ಡಾ.ಅಶ್ವಿನಿ ಲಟ್ಟೆ, ನಳಿನಿ ಅಂಬಲಿ, ಡಾ.ತಾಯಪ್ಪ ಅದಿನ್, ರಮೇಶ ಶಿರೋಟೆ, ಸುಪ್ರೀತ್ ಸಾಕತ್, ಡಾ.ರಾಜು ಗದಗ ಮತ್ತು ಮಹೇಶ ದೊಡ್ಡಲಕ್ಕಣ್ಣವರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಧಿಕಾರ ಸ್ವೀಕರಿಸಿದರು.ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘ ನೋಂದಣಿಯಾದ ರಾಜ್ಯಮಟ್ಟದ ಸಂಘಟನೆಯಾಗಿದ್ದು, ಗ್ರಂಥಾಲಯಗಳು, ಗ್ರಂಥಪಾಲಕರ ಮತ್ತು ಗ್ರಂಥಾಲಯ ಮಾಹಿತಿ ವಿಜ್ಞಾನದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ.

-ಡಾ.ಎಸ್.ಎಲ್.ಕಾಡದೇವರಮಠ, ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘ ಬೆಂಗಳೂರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜು.6ಕ್ಕೆ ಬೆಳಗಾವಿಗೆ ಡಾ.ಭಾಗವತರ ಆಗಮನ
ತಾಯಿಯ ಹೆಸರಿನಲ್ಲಿ ಸಸಿ ನೆಟ್ಟು ಮಗುವಿನಂತೆ ಪೋಷಿಸಿ