ಜನಹಿತವನ್ನು ಅರ್ಥಮಾಡಿಕೊಂಡು ಕಾರ್ಯ ನಿರ್ವಹಿಸಿ

KannadaprabhaNewsNetwork |  
Published : Jan 11, 2026, 02:15 AM IST
ತಾಲೂಕಿನ ಮಿಡಿಗೇಶಿ ಹೋಬಳಿಯ ಲಕ್ಷ್ಮೀದೇವಿಪುರ ಗ್ರಾಮದ ದೇವಸ್ಥಾನದ ಸನ್ನಿಧಿಯಲ್ಲಿ  ಕುಂಚಗಿರಿ ಬಳಗದಿಂದ ಹೊಸ ವರ್ಷದ ಕ್ಯಾಲೆಂಡರ್ ಹಾಗೂ ಸದಸ್ಯತ್ವ ನೊಂದಣಿ ಕಾರ್ಯಕ್ರಮವನ್ನು ಶ್ರೀಶ್ರೀ ಹನುಮಂತನಾಥಸ್ವಾಮಿಜಿ ಉದ್ಘಾಟಿಸಿ ಮಾತನಾಡಿದರು.  | Kannada Prabha

ಸಾರಾಂಶ

ಸಂಘ ಸಂಸ್ಥೆಯ ಪದಾಧಿಕಾರಿಗಳು ಕೇವಲ ವಿಜಿಟಿಂಗ್ ಕಾರ್ಡ್‌ಗಳ ಬಳಕೆಗೆ ಸೀಮಿತವಾಗದೇ ತಮ್ಮ ಸ್ಥಾನವನ್ನು ಅರಿತು ಸೇವಾ ಮನೋಭಾವ ರೂಡಿಸಿಕೊಂಡು ಜನರ ಹಿತಕ್ಕಾಗಿ ಕಾರ್ಯ ನಿರ್ವಹಿಸಿ ಎಂದು ಕೊರಟಗೆರೆ ತಾಲೂಕಿನ ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಶ್ರೀ ಹನುಮಂತನಾಥ ಸ್ವಾಮೀಜಿ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಸಂಘ ಸಂಸ್ಥೆಯ ಪದಾಧಿಕಾರಿಗಳು ಕೇವಲ ವಿಜಿಟಿಂಗ್ ಕಾರ್ಡ್‌ಗಳ ಬಳಕೆಗೆ ಸೀಮಿತವಾಗದೇ ತಮ್ಮ ಸ್ಥಾನವನ್ನು ಅರಿತು ಸೇವಾ ಮನೋಭಾವ ರೂಡಿಸಿಕೊಂಡು ಜನರ ಹಿತಕ್ಕಾಗಿ ಕಾರ್ಯ ನಿರ್ವಹಿಸಿ ಎಂದು ಕೊರಟಗೆರೆ ತಾಲೂಕಿನ ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಶ್ರೀ ಹನುಮಂತನಾಥ ಸ್ವಾಮೀಜಿ ಕರೆ ನೀಡಿದರು.

ತಾಲೂಕಿನ ಮಿಡಿಗೇಶಿ ಹೋಬಳಿಯ ಲಕ್ಷ್ಮೀದೇವಿಪುರ ಗ್ರಾಮದ ದೇವಸ್ಥಾನದ ಸನ್ನಿಧಿಯಲ್ಲಿ ಕುಂಚಗಿರಿ ಬಳಗದಿಂದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಹಾಗೂ ಸದಸ್ಯತ್ವ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕುಂಚಿಟಿಗ ಸಮುದಾಯ ಎಲ್ಲ ಸಮುದಾಯಗಳನ್ನು ಗೌರವದಿಂದ ಕಾಣುತ್ತದೆ. ಮುಂದಿನ ದಿನಗಳಲ್ಲಿ ಯುವಪೀಳಿಗೆಗೆ ಹೆಚ್ಚು ಆದ್ಯತೆ ನೀಡಬೇಕು. ಮಠದಿಂದ ಬಡ ಮತ್ತು ಅನಾಥ ಮಕ್ಕಳ ಶಿಕ್ಷಣಕ್ಕೆ ಅಧಿಕ ಒತ್ತು ನೀಡುತ್ತಿದ್ದು, ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ಉಚಿತವಾಗಿ ನೀಡಲಾಗುವುದು. ಮನುಷ್ಯ ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳದೆ ದಾನ ,ಧರ್ಮ ಮಾಡುವ ನಿಟ್ಟಿನಲ್ಲಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಬಡತನ,ಸಿರಿತನ ಶಾಶ್ವತವಲ್ಲ ಎಂದರು.

ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಎಲ್ಲ ಸಮುದಾಯದವರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವ ಮೂಲಕ ತಮ್ಮ ಸಮಾಜದ ಹಿತ ಮತ್ತು ಕ್ಷೇಮ ಕಾಪಾಡಬೇಕು. ಟ್ರಸ್ಟ್ ಪದಾಧಿಕಾರಿಗಳು ಪೂಜಾ ಕಂಕೈರ್ಯಗಳಿಗೆ ಹಾಗೂ ದೇಗುಲದ ಸ್ವಚ್ಚತೆಗೆ ಆದ್ಯತೆ ನೀಡುವುದು ಸಂತಸ ತಂದಿದೆ. ಸಮುದಾಯದ ಅಸ್ಥಿತ್ವದ ಜೊತೆಗೆ ಸ್ವಾಭಿಮಾನದ ಬುದುಕು ಕಟ್ಟಿಕೊಳ್ಳಬೇಕಿದೆ. ನಾವುಗಳು ಸ್ವಯಂ ಕೃಷಿ ಉದ್ಯೋಗ ಪಡೆಯುವ ಮೂಲಕ ಆರ್ಥಿಕವಾಗಿ ಸದೃಡರಾಗಬೇಕಿದೆ. ಹೆಣ್ಣುಮಕ್ಕಳು ಹೆಚ್ಚು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು.ಪ ದಾಧಿಕಾರಿಗಳ ಹಿರಿಯರ ಸಲಹೆ ಸೂಚನೆ ಪಡೆದು ಟ್ರಸ್ಟ್ ಮುಂದುವರಿಸಿಕೊಂಡು ಹೋಗಬೇಕು ಎಂದರು.

ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸೇವಾ ಟ್ರಸ್ಟ್ ಅಧ್ಯಕ್ಷ ವೀರೇಂದ್ರ, ತಾ.ಕುಂಚಿಟಿಗ ಸಂಘದ ಅಧ್ಯಕ್ಷ ರಾಜಶೇಖರ್, ನೆರೆಯ ಆಂದ್ರ ಕುಂಚಿಟಿಗ ಅಭಿವೃದ್ಧಿ ನಿಗಮ ಮಂಡಲಿಯ ಅಧ್ಯಕ್ಷ ಲಕ್ಷ್ಮೀನಾರಾಯಣ್, ಮುಕುಂದಪ್ಪ, ದಾಸೇಗೌಡ. ಬಸ್‌ ಮಾಲೀಕ ರಂಗಸ್ವಾಮಿ, ರಾಜು, ನಾಗರಾಜು, ರಮೇಶ್, ಪ್ರೊ.ಶಿವಕುಮಾರ್, ಪದಾಧಿಕಾರಿಗಳಾದ ರವಿಶಂಕರ್, ಕಾಂತಲಕ್ಷ್ಮೀ, ಶಿವರಾಮ್‌, ಕೆ.ರಂಗನಾಥ್, ಕಿರಣ್‌ ಕುಮಾರ್, ಸುರೇಂದ್ರ, ವಿಜಯ್ ಕುಮಾರ್, ತಿಪ್ಪೇಸ್ವಾಮಿ, ಕೃಷ್ಣಮೂರ್ತಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಠಾರೋತ್ಸವ: ಚೆಲುವನಾರಾಯಣಸ್ವಾಮಿಗೆ ಪುಷ್ಪಾಲಂಕಾರ ಸೇವೆ
ಹಿಪ್ಪು ನೇರಳೆ ಮತ್ತು ರೇಷ್ಮೆ ಲಾಭದಾಯಕ ಬೆಳೆಗಳು