ಕನ್ನಡಪ್ರಭ ವಾರ್ತೆ ಇಳಕಲ್ಲ
ನಿರೀಕ್ಷಣಾ ಮಂದಿರ(ಐಬಿ) ಆವರಣದಲ್ಲಿ ಲೋಕೊಪಯೋಗಿ ಇಲಾಖೆಯ ನಿರೀಕ್ಷಣಾ ಮಂದಿರ(ಐಬಿ) ದುರಸ್ತಿ-ನಿರ್ವಹಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಲೋಕೋಪಯೋಗಿ ಇಲಾಖೆ ಬಾಗಲಕೋಟೆ ಮತಕ್ಷೇತ್ರದ ಇಲಕಲ್ಲ ತಾಲೂಕು ನಿರೀಕ್ಷಣ ಮಂದಿರ ದುರಸ್ತಿ ಅಥವಾ ನಿರ್ವಹಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರತಿ ಮತಕ್ಷೇತ್ರಕ್ಕೂ ಅನುದಾನ ನೀಡಿದ್ದಾರೆ. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ನಮ್ಮ ಮನವಿಗೆ ಸ್ಪಂದಿಸಿ ಹುನಗುಂದ ಪ್ರವಾಸಿ ಮಂದಿರಕ್ಕೆ ₹1 ಕೋಟಿ, ಇಳಕಲ್ಲ ಪ್ರವಾಸಿ ಮಂದಿರಕ್ಕೆ ₹1 ಕೋಟಿ ಅನುದಾನ ನೀಡಿದ್ದಾರೆ. ಸಚಿವರ, ಮುಖ್ಯಮಂತ್ರಿಗಳ ಸಹಕಾರದಿಂದ ಇಳಕಲ್ಲ ಹುನುಗುಂದ ಅವಳಿ ನಗರದಲ್ಲಿ ಅನೇಕ ಕಾಮಗಾರಿಗಳು ಈಗಾಗಲೇ ಪ್ರಾರಂಭವಾಗಿವೆ ಎಂದು ತಿಳಿಸಿದರು. ಇಳಕಲ್ಲ ನಗರಕ್ಕೆ ಅತಿ ಶೀಘ್ರದಲ್ಲಿಯೇ ಇನ್ನೊಂದು ವಿಶೇಷ ಪ್ರವಾಸ ಮಂದಿರವನ್ನು ಸಮೀಪದ ಗುಗ್ಗುಲಮರಿ ಗುಡ್ಡದ ಹತ್ತಿರ ಸುಮಾರು ₹೫ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಈಗಾಗಲೇ ಅನುದಾನ ಕೂಡ ನೀಡಲಾಗಿದೆ ಎಂದು ಶಾಸಕ ಕಾಶಪ್ಪನವರ ಹೇಳಿದರು. ನಗರಸಭೆಯ ಅಧ್ಯಕ್ಷರು, ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇದ್ದರು.