ರಾಮನಗರ: ರಾಜಕಾರಣ ಬದಲಾವಣೆಯಾದಂತೆ ಮನುಷ್ಯರ ಮನಸ್ಥಿತಿಯೂ ಬದಲಾವಣೆ ಆಗುತ್ತದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.
ಜಮೀರ್ ಹೇಳಿಕೆಯಿಂದ ಮತಗಳು ಬದಲಾವಣೆಯಾಗಿವೆ ಎಂಬ ಯೋಗೇಶ್ವರ್ ಹೇಳಿಕೆಗೆ ಉತ್ತರಿಸಿದ ಅವರು, ರಾಜಕಾರಣದಲ್ಲಿ ಇದೆಲ್ಲವು ಸಾಮಾನ್ಯ. ಕುಮಾರಸ್ವಾಮಿ ಕೂಡ ಶಿವಕುಮಾರ್ ಬಗ್ಗೆ ಕೀಳು ಮಾತುಗಳನ್ನಾಡಿದ್ದಾರೆ. ಜಮೀರ್ ಕೂಡ ಕುಮಾರಸ್ವಾಮಿ ಬಗ್ಗೆ ಕೆಲ ಮಾತುಗಳನ್ನು ಬಳಸಿದ್ದಾರೆ. ಈ ವಿಷಯದಲ್ಲಿ ಮಾತನಾಡಲು ನಾವು ಚಿಕ್ಕವರು. ಇದಕ್ಕೆ ಉತ್ತರ ನೀಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಚನ್ನಪಟ್ಟಣ ಉಪಚುನಾವಣೆಯಲ್ಲಿ ಅವರವರ ಪಕ್ಷಕ್ಕೆ ನಿಷ್ಠೆಯಿಂದ ಎಲ್ಲರು ಕೆಲಸ ಮಾಡಿದ್ದಾರೆ. ನಮ್ಮ ಸಮುದಾಯದ ವಾರ್ಡ್‌ನಲ್ಲಿ ಕಾರ್ಯಕರ್ತನಾಗಿ ಪ್ರಮಾಣಿಕವಾಗಿ ಕೆಲಸ ಮಾಡಿದ್ದೇನೆ. ಒಳ್ಳೆಯ ಫಲಿತಾಂಶ ಬರುವ ರೀತಿ ನಾನು ಕೆಲಸ ಮಾಡಿದ್ದೇನೆ ಎಂದು ಹೇಳಿದರು.ಈ ಹಿಂದೆ ಕೂಡ ಬಿಜೆಪಿ ಆಪರೇಷನ್ ಕಮಲ ಮಾಡಿ ಸರ್ಕಾರ ಬೀಳಿಸಿದರು. ಬಿಜೆಪಿ ಸರ್ಕಾರ ರಚಿಸಿ ಆಡಳಿತ ನಡೆಸಿದರು. ಈಗ ಕಾಂಗ್ರೆಸ್ ಸರ್ಕಾರದಲ್ಲಿ 136 ಶಾಸಕರಿದ್ದಾರೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಉತ್ತಮ ಸರ್ಕಾರ ನಡೆಸುತ್ತಿದ್ದಾರೆ. ಎಲ್ಲಾ ವರ್ಗದ ಜನರು ಸರ್ಕಾರದ ಕಾರ್ಯ ವೈಖರಿಯನ್ನು ಮೆಚ್ಚುತ್ತಿದ್ದಾರೆ. ಐದು ವರ್ಷ ಸರ್ಕಾರ ಇರಲಿದೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.