ಮಾಡಿದ ಕೆಲಸಕ್ಕೆ ಕೂಲಿ ಸಿಗದೆ ಕಾರ್ಮಿಕರು ಕಂಗಾಲು

KannadaprabhaNewsNetwork |  
Published : Nov 15, 2025, 01:45 AM IST
ಆರ್.ವಿ ಲೈಫ್ ಸ್ಟೈಲ್ ಗಾರ್ಮೆಂಟ್ಸ್‌ನಲ್ಲಿ ಮಹಿಳಾ ಕಾರ್ಮಿಕರಿಗೆ ವೇತನ ನೀಡದೆ ವಂಚನೆ | Kannada Prabha

ಸಾರಾಂಶ

ಮಾಡಿದ ಕೆಲಸಕ್ಕೆ ಕೂಲಿ ಕೇಳಲು ಹೋದರೆ ಮಹಿಳೆಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಆರ್‌.ವಿ.ಲೈಫ್‌ ಗಾರ್ಮೆಂಟ್‌ ಯುನಿಟ್‌ -2ನಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಮಾಡಿದ ಕೆಲಸಕ್ಕೆ ಕೂಲಿ ಕೇಳಲು ಹೋದರೆ ಮಹಿಳೆಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಆರ್‌.ವಿ.ಲೈಫ್‌ ಗಾರ್ಮೆಂಟ್‌ ಯುನಿಟ್‌ -2ನಲ್ಲಿ ನಡೆದಿದೆ.ಕೊರಟಗೆರೆ ಪಟ್ಟಣದ ಹೊರವಲಯ ಸಿದ್ದೇಶ್ವರ ಕಲ್ಯಾಣ ಮಂಟಪದ ಹಿಂಭಾಗದಲ್ಲಿರುವ ಆರ್.ವಿ ಲೈಫ್ ಸ್ಟೈಲ್ ಯುನಿಟ್-೨ ಪಟ್ಟಣದಲ್ಲಿ ಕಳೆದ ಒಂದು ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದು, 100 ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅಚ್ಚರಿಯ ವಿಷಯವೆಂದರೆ ಸ್ಥಳೀಯಮಟ್ಟದಲ್ಲಿ ಯಾವುದೇ ಹಂತದಲ್ಲಿಯೂ ಅನುಮತಿ ಪಡೆಯದೆ ತುಮಕೂರಿನ ಅನುಮತಿ ಮೇಲೆಯೇ ಇಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಾರ್ಮಿಕರಿಗೆ ಇಎಸ್‌ಐ, ಪಿಎಫ್, ಮಾಸಿಕ ವೇತನವನ್ನು ಬಿಲ್ ಮೂಲಕ ನೀಡದೆ ವಂಚಿಸುತ್ತಿರುವುದು ಒಂದೇಡೆಯಾದರೆ ಸಂಬಳ ಬರೆದೆ ಇರುವುದರಿಂದ ಕೆಲಸ ಬಿಟ್ಟವರಿಗೆ ಬಾಕಿ ಹಣ ನೀಡದೆ ವಂಚನೆ ಮಾಡಲಾಗುತ್ತಿದೆ.

ಇನ್ನೂ ಗಾರ್ಮೆಂಟ್ಸ್‌ನಲ್ಲಿ ಮಹಿಳಾ ಕಾರ್ಮಿಕರಿಗೆ ವೇತನಕ್ಕೆ ಚೆಕ್ ನೀಡಲಾಗಿತ್ತು. ಬ್ಯಾಂಕ್‌ನಲ್ಲಿ ಚೆಕ್ ಹಾಕಿದಾಗ ಚೆಕ್ ಬೌನ್ಸ್ ಆಗಿದೆ. ಇದನ್ನ ಪ್ರಶ್ನೆ ಮಾಡಲು ಬಂದ ಮಹಿಳೆಯರಿಗೆ ತಮ್ಮ ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸಿ ನಿಂದಿಸಿ ನೀನ್ಯಾರು ಗೊತ್ತೇ ಇಲ್ಲಾ, ನಮ್ಮಲ್ಲಿ ನೀವು ಕೆಲಸನೇ ಮಾಡಿಲ್ಲಾ, ಏನು ಮಾಡೋಕೆ ಆಗುತ್ತೆ ನಿನ್ನ ಕೈಯಲ್ಲಿ ನೀನೋಬ್ಬಳು ಸಾಧಾರಣ ಹೆಣ್ಣು ಎಂದು ಆ ಫ್ಯಾಕ್ಟರಿಯ ಮಹಿಳಾ ಮಾಲಕಿಯೇ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

ಕೋಟ್‌....

ಗಾರ್ಮೆಂಟ್ಸ್‌ನಲ್ಲಿ ೬ ತಿಂಗಳ ಹಿಂದೆ ಕೆಲಸ ಮಾಡಿ ಕುಟುಂಬದಲ್ಲಿನ ಸಮಸ್ಯೆಯಿಂದ ಕೆಲಸ ಬಿಟ್ಟಿದ್ದೆ, ರಿಸೈನ್ ಮಾಡಿದ ಸಂದರ್ಭದಲ್ಲಿ ವೇತನವನ್ನು ಚೆಕ್ ಮುಖಾಂತರ ನೀಡಿದ್ದರು. ಚೆಕ್ ಬ್ಯಾಂಕ್‌ನಲ್ಲಿ ಬೌನ್ಸ್ ಆಗಿದೆ.- ಜ್ಯೋತಿ, ಗಾರ್ಮೆಂಟ್ಸ್ ಮಹಿಳೆ.

ಕೋಟ್‌ 2

೪ ತಿಂಗಳು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ, ಕೆಲಸ ಬಿಟ್ಟು ೨ ತಿಂಗಳಾಗಿದೆ. ನಾಳೆ ಬನ್ನಿ, ನಾಡಿದ್ದೂ ಬನ್ನಿ ಅಂತ ಯಾವಾಗ್ಲೂ ಒಂದೇ ಉತ್ತರ ಹೇಳ್ತಾರೆ, ವಾರಕ್ಕೊಮ್ಮೆ ಕೆಲಸ ಕಾರ್ಯ ಬಿಟ್ಟು ಗಾರ್ಮೆಂಟ್ಸ್ ಹತ್ತಿರ ಬರುವಂತಾಗಿದೆ. ಪೇಮೆಂಟ್ ನಾವು ಕೊಡಲ್ಲಾ ಏನ್ ಮಾಡಿಕೊಳ್ಳುತ್ತಿರೋ ಮಾಡಿಕೊಳ್ಳಿ ಅನ್ನುತ್ತಾರೆ. ಈ ವಿಚಾರವಾಗಿ ಮನೆಯಲ್ಲಿ ಪ್ರತಿನಿತ್ಯ ಜಗಳವಾಗುತ್ತೆ, ನಮ್ಮ ಕುಟುಂಬದ ನಿರ್ವಹಣೆಯನ್ನು ಹೇಗೆ ಮಾಡ್ಬೇಕು.ಮಂಜಮ್ಮ, ಕಾರ್ಮಿಕರು.

ಪೇಮೆಂಟ್ಸ್ ಡಿಲೇ ಆದ್ದರಿಂದ ವೇತನ ನೀಡುವುದು ತಡವಾಗಿದೆ. ಗಾರ್ಮೆಂಟ್ಸ್ ಕೆಲಸ ಮಾಡುತ್ತಿರುವವರಿಗೂ ಸಂಪೂರ್ಣವಾಗಿ ವೇತನ ನೀಡಲು ಆಗುತ್ತಿಲ್ಲಾ, ರಿಸೈನ್ ಮಾಡದೆ ಕೆಲಸ ಬಿಟ್ಟ ಕಾರಣದಿಂದ ವೇತನ ನೀಡುವುದು ತಡವಾಗಿದೆಯಷ್ಟೇ, ಗಾರ್ಮೆಂಟ್ಸ್ ನಷ್ಟದಲ್ಲಿ ನಡೆಯುತ್ತಿದೆ. ಪೇಮೆಂಟ್ ಬಂದ ಕೂಡಲೇ ಬಾಕಿ ಉಳಿಸಿಕೊಂಡಿರುವ ಹಣವನ್ನು ಕ್ಲಿಯರ್ ಮಾಡುತ್ತೇವೆ. ರಮ್ಯಾ, ಗಾರ್ಮೆಂಟ್ಸ್ ಮಾಲೀಕರು.ಬಾಕ್ಸ್ ಬಳಸಿ ಸರ್: ಪತ್ರಕರ್ತನ ಐಡಿ ಕಾರ್ಡ್ ಕಸಿದು ದಬ್ಬಾಳಿಕೆ :ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿ ವೇತನ ಸಿಗದೆ ವಂಚಿತರಾದ ಗ್ರಾಮೀಣ ಭಾಗದ ಮಹಿಳೆ ಪರವಾಗಿ ಸುದ್ದಿಗೆಂದು ಹೋಗಿದ್ದ ಕೊರಟಗೆರೆ ಪತ್ರಕರ್ತರೊರ್ವರ ಐಡಿ ಕಾರ್ಡ್ ಕಸಿದು ನಿಮಗೆ ನಮ್ಮ ಗಾರ್ಮೆಂಟ್ಸ್ ವಿಡಿಯೋ ಮತ್ತು ಪೋಟೋ ತೆಗೆಯಲು ಅನುಮತಿ ಕೊಟ್ಟವರ್‍ಯಾರು? ನಮ್ಮದು ಚಾನಲ್ ಇದೆ ನಮ್ಮದು ಸೋಷಿಯಲ್ ಮೀಡಿಯಾ ಇದೆ ಅದರಲ್ಲಿ ಹಾಕಿದರೆ ನಮಗೂ ಲೈಕ್ಸ್ ಕಾಮೆಂಟ್ಸ್ ಸಾವಿರಾರು ಬರ್ತಾವೆ. ಸಂವಿಧಾನವನ್ನು ನಾವು ಓದಿದ್ದೇವೆ ನಮಗೂ ಗೊತ್ತಿದೆ ಮಾಲೀಕರು ದಬ್ಬಾಳಿಕೆ ಮಾಡುದ್ದಾರೆ.

PREV

Recommended Stories

ಪೊನ್ನಾಚಿಯಲ್ಲಿ ಚಿರತೆ ದಾಳಿ ಮೇಕೆ ಬಲಿ
ಮೇಕೆದಾಟು ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು