ವಕೆರೆಯ ಮಣ್ಣು ನೀಡದಿದ್ದರೆ ಕಾರ್ಮಿಕರ ಬದುಕು ಆತಂಕ

KannadaprabhaNewsNetwork |  
Published : Feb 22, 2026, 01:15 AM IST
ಫೋಟೋ ಇದೆ : 21 ಕೆಜಿಎಲ್ 1: ಕಾರ್ಖಾನೆಯಲ್ಲಿ ಪತ್ರಿಕೆ ಘೋಷಣೆ ನಡೆಸಿದ ವಿನ್ನರ್ ಬರ್ಗರ್ ಅಧಿಕಾರಿಗಳು | Kannada Prabha

ಸಾರಾಂಶ

ಕುಣಿಗಲ್ ಮತ್ತು ಮಾಗಡಿ ಭಾಗದಲ್ಲಿರುವ ಕೆರೆಗಳ ಹೂಳು ಮಣ್ಣಿನ ಮೇಲೆ ಅವಲಂಬಿತ ಆಗಿರುವ ಈ ಕಾರ್ಖಾನೆಗೆ ಮಣ್ಣು ನೀಡದಿದ್ದರೆ ರೈತರ ಮಕ್ಕಳು ಬೀದಿಪಾಲಾಗುತ್ತಾರೆ ಎಂದು ಕಾರ್ಖಾನೆಯ ಮಾನವ ಸಂಪನ್ಮೂಲ ಅಧಿಕಾರಿ ಆತಂಕ ವ್ಯಕ್ತಪಡಿಸಿದ್ದಾರೆ.

ಕನ್ನಡ ಪ್ರಭ ವಾರ್ತೆ ಕುಣಿಗಲ್ ಕುಣಿಗಲ್ ಮತ್ತು ಮಾಗಡಿ ಭಾಗದಲ್ಲಿರುವ ಕೆರೆಗಳ ಹೂಳು ಮಣ್ಣಿನ ಮೇಲೆ ಅವಲಂಬಿತ ಆಗಿರುವ ಈ ಕಾರ್ಖಾನೆಗೆ ಮಣ್ಣು ನೀಡದಿದ್ದರೆ ರೈತರ ಮಕ್ಕಳು ಬೀದಿಪಾಲಾಗುತ್ತಾರೆ ಎಂದು ಕಾರ್ಖಾನೆಯ ಮಾನವ ಸಂಪನ್ಮೂಲ ಅಧಿಕಾರಿ ಆತಂಕ ವ್ಯಕ್ತಪಡಿಸಿದ್ದಾರೆ ತಾಲೂಕಿನ ಕೈಗಾರಿಕಾ ಪ್ರದೇಶ ಅಂಚೆಪಾಳ್ಯದಲ್ಲಿರುವ ವಿನ್ನರ್ ಬರ್ಗರ್ ಕಂಪನಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾನವ ಸಂಪನ್ಮೂಲ ಅಧಿಕಾರಿ ಹೇಮಂತ್ ತಿಳಿಸಿದ್ದಾರೆ.

ಏಷ್ಯಾ ಖಂಡದಲ್ಲಿ ಉತ್ತಮವಾದ ಹೆಸರು ಮಾಡಿರುವ ವಿನ್ನರ್ ಬರ್ಗರ್ ಸಂಸ್ಥೆ 2006 ರಲ್ಲಿ ಪ್ರಾರಂಭವಾಗಿದ್ದು , ಕೆರೆಯ ಹೂಳು ಮಣ್ಣನ್ನು ಸಂಗ್ರಹಿಸಿ ಪರಿಸರಸ್ನೇಹಿ ಇಟ್ಟಿಗೆಗಳನ್ನು ತಯಾರಿಸುತಿದ್ದೇವೆ. ನೈಸರ್ಗಿಕವಾಗಿ ಮನೆ ನಿರ್ಮಾಣ ಮಾಡುವ ಯೋಜನೆಯನ್ನು ನಾವು ಇಲ್ಲಿ ಪ್ರಾರಂಭಿಸಿದ್ದು , ಈಗಾಗಲೇ ಸುತ್ತಮುತ್ತಲಿನ ಹಲವಾರು ಶಾಲೆಗಳಿಗೆ ಇಟ್ಟಿಗೆಯನ್ನು ಹಾಗೂ ನೂರಾರು ಕಾರ್ಮಿಕ ಕುಟುಂಬಗಳು ಜೀವನ ನಡೆಸುತ್ತಿವೆ. ಎಡೆಯೂರಿನ ದಾಸೋಹ ಸಮಿತಿಯ ಹಲವಾರು ಕಾರ್ಮಿಕರಿಗೆ ಉಚಿತವಾಗಿ ಮನೆ ನಿರ್ಮಾಣ ಮಾಡಿಕೊಟ್ಟಿದ್ದೇವೆ. ಸಾರ್ವಜನಿಕ ಸಹಭಾಗಿತ್ವದಲ್ಲಿ ನಮ್ಮ ಕಂಪನಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಕೆಲವು ರೈತರಿಗೆ ಇರುವ ತಪ್ಪು ಮಾಹಿತಿ ಯಿಂದ ಮಣ್ಣನ್ನು ಬೇಡ ಎಂದು ನಿರಾಕರಿಸುತ್ತಿದ್ದಾರೆ. ಇದರ ಬದಲು ಸಮರ್ಪಕವಾಗಿ ಮಣ್ಣು ತೆಗೆಯಲು ಅವಕಾಶ ನೀಡುವುದರಿಂದ ಮಣ್ಣಿನಲ್ಲಿ ಹಲವಾರು ಉತ್ಪನ್ನಗಳನ್ನು ಮಾಡುವುದಕ್ಕೆ ಸಹಕಾರಿಯಾಗುತ್ತದೆ. ಹಾಗೂ ಕೆರೆಯಲ್ಲಿ ಹೆಚ್ಚು ನೀರು ಸಂಗ್ರಹಣೆ ಆಗಲು ಅವಕಾಶ ಆಗುತ್ತದೆ ಇದನ್ನು ಅರಿತು ರೈತರು ಸಹಕಾರ ನೀಡಬೇಕೆಂದರು. ಈ ಸಂದರ್ಭದಲ್ಲಿ ಕಂಪನಿಯ ಅಧಿಕಾರಿಗಳಾದ ಹೇಮಂತ್ , ಸಂತೋಷ್ , ವಸಂತ್ ರೈ ಸೇರಿದಂತೆ ಸಿಬ್ಬಂದಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್ ನಾಯಕತ್ವ ಬಿಕ್ಕಟ್ಟು ಕ್ಲೈಮ್ಯಾಕ್ಸ್‌ನತ್ತ : ಜಾರಕಿಹೊಳಿ
ಸರ್ಕಾರಿ ಕಾಮಗಾರಿಗೆ ಅನುಮತಿಸಲು ಲಂಚ ಸ್ವೀಕಾರ- ಶಾಸಕ ಲೋಕಾ ಬಲೆಗೆ!