ಶ್ರಮಿಕ ವರ್ಗ ಆರೋಗ್ಯದ ಕಾಳಜಿ ವಹಿಸಬೇಕು: ಮಲ್ಲಿಕಾರ್ಜುನ್

KannadaprabhaNewsNetwork | Published : Apr 16, 2025 12:38 AM

ಸಾರಾಂಶ

ಶ್ರಮಿಕ ವರ್ಗ ದೇಶದ ಸಂಪತ್ತು. ಇಂತಹ ಕೂಲಿ ಕಾರ್ಮಿಕರ ಆರೋಗ್ಯದ ಬಗ್ಗೆ ತೀವ್ರ ನಿಗಾವಹಿಸಬೇಕಿದೆ. ಆರೋಗ್ಯವೇ ತಮ್ಮ ಬದುಕಿಗೆ ಸಂಪತ್ತು ಎಂದು ತಿಳಿದು ಬಲು ದುಬಾರಿಯಾಗಿರುವ ಆಸ್ಪತ್ರೆಗಳ ಚಿಕಿತ್ಸಾಗೆ ಕಷ್ಟಪಟ್ಟು ದುಡಿದ ಹಣದ ಜೊತೆಗೆ ಸಾಲ ಮಾಡಿ ಹೋಗುವ ಪರಿಸ್ಥಿತಿ ನಿರ್ಮಿಸಿಕೊಳ್ಳದಂತೆ ನೋಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಶ್ರಮಿಕ ವರ್ಗಕ್ಕೆ ದುಡಿಮೆ ಜತೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಬೇಕು ಎಂದು ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ್‌ ತಿಳಿಸಿದರು.

ಹಿರಿಕಳಲೆ ಗ್ರಾಮದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ನೋಂದಾಯಿತ ಕಟ್ಟಡ ಹಾಗೂ ಅವಲಂಬಿತರಿಗೆ ಗ್ರಾಮ ವಿಕಾಸ ಕೇಂದ್ರ ಸಹಯೋಗದೊಂದಿಗೆ ಜರುಗಿದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಶ್ರಮಿಕ ವರ್ಗ ದೇಶದ ಸಂಪತ್ತು. ಇಂತಹ ಕೂಲಿ ಕಾರ್ಮಿಕರ ಆರೋಗ್ಯದ ಬಗ್ಗೆ ತೀವ್ರ ನಿಗಾವಹಿಸಬೇಕಿದೆ. ಆರೋಗ್ಯವೇ ತಮ್ಮ ಬದುಕಿಗೆ ಸಂಪತ್ತು ಎಂದು ತಿಳಿದು ಬಲು ದುಬಾರಿಯಾಗಿರುವ ಆಸ್ಪತ್ರೆಗಳ ಚಿಕಿತ್ಸಾಗೆ ಕಷ್ಟಪಟ್ಟು ದುಡಿದ ಹಣದ ಜೊತೆಗೆ ಸಾಲ ಮಾಡಿ ಹೋಗುವ ಪರಿಸ್ಥಿತಿ ನಿರ್ಮಿಸಿಕೊಳ್ಳದಂತೆ ನೋಡಿಕೊಳ್ಳಬೇಕು ಎಂದರು.

ಉಚಿತ ಆರೋಗ್ಯ ತಪಾಸಣೆ ಶಿಬಿರ ಜನ ಸಾಮಾನ್ಯರು, ಕೂಲಿ ಕಾರ್ಮಿಕರಿಗೆ ವರದಾನವಾಗಿದೆ. ಸರ್ಕಾರ ಆಯೋಜಿಸುವ ಆರೋಗ್ಯ ತಪಾಸಣೆ ಹಾಗೂ ತರಬೇತಿ ಶಿಬಿರವನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ಶಿಬಿರದಲ್ಲಿ ದೈಹಿಕ ಪರೀಕ್ಷೆ, ಲಿವರ್, ನೇತ್ರ ತಪಾಸಣೆ, ಬಿಪಿ, ಮಧುಮೇಹ, ಮೂತ್ರ, ಥೈರಾಯಿಡ್ ಮತ್ತಿತರ ಪರೀಕ್ಷೆ ಮಾಡಲಾಯಿತು. ಅರ್ಹರಿಗೆ ಉಚಿತ ಟೂಲ್‌ಕಿಟ್ ನೀಡಲಾಯಿತು.

ಮುಖಂಡರಾದ ರಾಮಕೃಷ್ಣ, ಜವರೇಗೌಡ, ಮಂಜುನಾಥ್, ರಾಜೇಶ್, ಕೃಷ್ಣೇಗೌಡ, ಬಸವರಾಜು, ಯೋಗೇಶ್, ಮಂಜೇಗೌಡ, ಶಿವಲಿಂಗೇಗೌಡ, ಭರತ್, ಯೋಗೇಶ್, ಚಿರಂಜೀವಿ, ಕೌಶಿಕ್, ಗ್ರಾಮ ವಿಕಾಸ್ ಸಂಸ್ಥಾಪಕ ಮಹೇಶ್‌ ಇದ್ದರು.

17ರಂದು ನೇರ ಸಂದರ್ಶನ

ಮಂಡ್ಯ: ಜಿಲ್ಲಾ ಉದ್ಯೋಗ ವಿನಿಮಯ ಕತೇರಿ ಹಾಗೂ ಮೆ.ಎಲ್ ಆ್ಯಂಡ್ ಟಿ ಫೈನಾನ್ಸ್ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಕೆಲಸ ಮಾಡಲು 21 ರಿಂದ 32 ವರ್ಷ ವಯೋಮಾನವುಳ್ಳ ಆಸಕ್ತ ಅಭ್ಯರ್ಥಿಗಳು ಏ.17ರಂದು ಬೆಳಗ್ಗೆ 10 ಗಂಟೆಗೆ ನಗರದ ಗಾಂಧಿನಗರದಲ್ಲಿನ 2ನೇ ಕ್ರಾಸ್‌ನ ಮೆ. ಎಲ್ ಆ್ಯಂಡ್ ಟಿ ಫೈನಾನ್ಸ್ ನ ತಮ್ಮ ರೆಸ್ಯೂಮೆ ಹಾಗೂ ಬಯೋಡೇಟಾಗಳೊಂದಿಗೆ ನೇರಸಂದರ್ಶನದಲ್ಲಿ ಭಾಗವಹಿಸಿ ಉದ್ಯೋಗ ಪಡೆಯಬಹುದು. ಎಫ್.ಎಲ್.ಒ (ಫ್ರಂಟ್ ಲೈನ್ ಆಫೀರ್ಸ್‌ ಫೀಲ್ಡ್ ವರ್ಕ್) ಖಾಲಿಯಿರುವ ಹುದ್ದೆಯಾಗಿದ್ದು, ಹೆಚ್ಚಿನ ಮಾಹಿತಿಗಾಗಿ ದೂ-08232-295124 ಮತ್ತು ಮೊ-9164642684 ಸಂಖ್ಯೆಗಳಿಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ಕಚೇರಿ ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.

Share this article