ಕನ್ನಡಪ್ರಭ ವಾರ್ತೆ ನಂಜನಗೂಡು
ಪಟ್ಟಣದ ಚಾಮುಂಡೇಶ್ವರಿ ದೇವಸ್ಥಾನದ ಎದುರು, ಗೌರಿಘಟ್ಟದ ಬೀದಿ, ತೋಪಿನ ಬೀದಿಗಳಲ್ಲಿ 76 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ದೇಗುಲಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಅತಿ ಹೆಚ್ಚು ಪ್ರವಾಸಿಗರು ಆಗಮಿಸುತ್ತಾರೆ, ಅವರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ನಗರಸಭೆಯ ರಾಜ್ಯ ವಿಪತ್ತು ಉಪಶಮನ (ಎಸ್.ಡಿ.ಎಮ್.ಎಫ್) ದೇವಾಲಯದ ಆಸು -ಪಾಸಿನಲ್ಲಿರುವ ಪಟ್ಟಣದ ಚಾಮುಂಡೇಶ್ವರಿ ದೇವಸ್ಥಾನದ ಎದುರು 20 ಲಕ್ಷ ವೆಚ್ಚದಲ್ಲಿ ಚರಂಡಿ ಮತ್ತು ರಸ್ತೆ ಎತ್ತರಿಸುವ ಕಾಮಗಾರಿಯನ್ನು ನಡೆಸಲಾಗುವುದು, ಅಲ್ಲದೆ ಗೌರಿಘಟ್ಟದ ಬೀದಿಯಲ್ಲಿ 16 ಲಕ್ಷ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಎತ್ತರಿಸುವ ಕಾಮಗಾರಿ, ತೋಪಿನ ಬೀದಿಯಲ್ಲಿ 20 ಲಕ್ಷ ವೆಚ್ಚದಲ್ಲಿ ಚರಂಡಿ ಮತ್ತು ರಸ್ತೆ ಎತ್ತರಿಸುವ ಕಾಮಗಾರಿಯನ್ನು ನಿರ್ವಹಿಸಲಾಗುವುದು ಅಲ್ಲದೆ ಹಳ್ಳದಕೇರಿ ಬಡಾವಣೆಯಲ್ಲಿ 20 ಲಕ್ಷ ವೆಚ್ಚದಲ್ಲಿ ರಿಟೇನಿಂಗ್ ವಾಲ್, ಮತ್ತು ಚರಂಡಿ ರಸ್ತೆ ಎತ್ತರಿಸುವ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.ಈ ಭಾಗದಲ್ಲಿ ಕಪಿಲಾ ನದಿಯ ಪ್ರವಾಹಕ್ಕೆ ತುತ್ತಾಗಿ ದೇವಾಲಯಗಳು ಮತ್ತು ದೇವಾಲಯದ ಬಡಾವಣೆಗಳು ಮುಳುಗಡೆಯಾಗುವುದನ್ನು ತಪ್ಪಿಸಲು ಈ ಕಾಮಗಾರಿಗಳು ಅನುಕೂಲವಾಗಲಿದೆ ಎಂದರು.