ಆಡಳಿತಾತ್ಮಕ ಸಮಸ್ಯೆ ನಿವಾರಣೆಗೆ ಕಾರ್ಯಾಗಾರ ಪೂರಕ

KannadaprabhaNewsNetwork |  
Published : Mar 22, 2025, 02:05 AM IST
ಹೊನ್ನಾಳಿ ಫೋಟೋ 20ಎಚ್.ಎಲ್.ಐ1.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರಿಕ ಗುಣಮಟ್ಟ ಭರವಸ ಕೋಶ ಅಡಿಯಲ್ಲಿ   ಭೋಧಕ ಮತ್ತು ಭೋಧಕೇತರ ಸಿಬ್ಬಂದಿಗಳಿಗೆ  ಹಮ್ಮಿಕೊಂಡಿದ್ದ  ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿದ ದಾವಣಗೆರೆ ವಿಶ್ವವಿದ್ಯಾಲದ ಕುಲಸಚಿವ ಪ್ರೋ. ಶಶಿಧರ ರುದ್ರಪ್ಪ ಅವರು ಮಾತನಾಡಿದರು. | Kannada Prabha

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಸಂಶೋಧನೆಗೆ ಅಗತ್ಯವಾದ ಕೃತಕ ಬುದ್ಧಿಮತ್ತೆಯು ಸಮಸ್ಯೆ ಆಯ್ಕೆ ಮತ್ತು ಸಾಹಿತ್ಯ ಅವಲೋಕನದಲ್ಲಿ ಅತಿ ಹೆಚ್ಚು ನೆರವಾಗುತ್ತಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಶಶಿಧರ ರುದ್ರಪ್ಪ ಹೇಳಿದ್ದಾರೆ.

- ಹೊನ್ನಾಳಿ ಸರ್ಕಾರಿ ಕಾಲೇಜಿನ ಕಾರ್ಯಕ್ರಮದಲ್ಲಿ ಪ್ರೊ. ಶಶಿಧರ ರುದ್ರಪ್ಪ ಅಭಿಮತ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಇತ್ತೀಚಿನ ದಿನಗಳಲ್ಲಿ ಸಂಶೋಧನೆಗೆ ಅಗತ್ಯವಾದ ಕೃತಕ ಬುದ್ಧಿಮತ್ತೆಯು ಸಮಸ್ಯೆ ಆಯ್ಕೆ ಮತ್ತು ಸಾಹಿತ್ಯ ಅವಲೋಕನದಲ್ಲಿ ಅತಿ ಹೆಚ್ಚು ನೆರವಾಗುತ್ತಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಶಶಿಧರ ರುದ್ರಪ್ಪ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಅಡಿಯಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಾಲಕಾಲಕ್ಕೆ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಆಡಳಿತಾತ್ಮಕ ಸಮಸ್ಯೆಗಳ ಸಂಖ್ಯೆಯೂ ಹೆಚ್ಚಾಗಿದೆ. ಇವುಗಳ ನಿವಾರಣೆಗೆ ಇಂತಹ ಕಾರ್ಯಾಗಾರಗಳು ಅತ್ಯವಶ್ಯಕ. ಯಾರು ಪ್ರಾಮಾಣಿಕವಾಗಿ, ಶ್ರಮದಿಂದ ಸಂಶೋಧನೆಯಲ್ಲಿ ತೊಡಗುತ್ತಾರೋ ಅಂತಹ ವ್ಯಕ್ತಿಗಳು ಸಮಾಜಕ್ಕೆ ಆಸ್ತಿಯಾಗಬಲ್ಲರು. ಇನ್ನೊಬ್ಬರ ಸಮಸ್ಯೆಗಳಿಗೆ ಉತ್ತರವಾಗಬಲ್ಲರು. ಈ ಕಾರಣದಿಂದ ಎಲ್ಲ ವಿಷಯಗಳಲ್ಲೂ ಆಳವಾಗಿ ಸಂಶೋಧನೆಗೆ ತೊಡಗಿಸಿಕೊಳ್ಳಬೇಕು. ಆಗ ನಿಮ್ಮ ಶ್ರಮ ಸಾರ್ಥಕ ಎಂದು ಹೇಳಿದರು.

ಕರ್ನಾಟಕ ವಿವಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಎ.ಸಿ. ಸೋಮಶೇಖರಪ್ಪ ಮಾನತಾಡಿ, 1990 ಕ್ಕಿಂತ ಪೂರ್ವದಲ್ಲಿ ಶಿಕ್ಷಣ ಕ್ಷೇತ್ರದಲ್ಲಿದ್ದ ವಾತಾವರಣಕ್ಕೂ ನಂತರದಲ್ಲಿ ಆಗಿರುವ ಕ್ರಾಂತಿಕಾರಕ ಬದಲಾವಣೆ, ಅದರಲ್ಲೂ 1986ರಲ್ಲಿ ಪ್ರಧಾನಿ ರಾಜೀವ್ ಗಾಂಧಿ ಕಾರ್ಯಗತಗೊಳಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯು ಸಂಶೋಧನಾ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳನ್ನು ಒದಗಿಸಿಕೊಟ್ಟಿದೆ ಎಂದರು.

ಕಾಲೇಜಿನ ಪ್ರಾಚಾರ್ಯ ಡಾ.ಧನಂಜಯ ಮಾತನಾಡಿ, ನಿಮ್ಮ ಸಂಶೋಧನೆ ಸಮಾಜಕ್ಕೆ ಅನುಗುಣವಾಗಿ ಇರಬೇಕೇ ಹೊರತು, ವೈಯಕ್ತಿಕ ಲಾಭಕ್ಕಲ್ಲ ಎಂಬುದನ್ನು ಸಂಶೋಧನಾಕಾರರು ಮೊದಲು ಮನದಟ್ಟು ಮಾಡಿಕೊಳ್ಳಬೇಕು. ಪ್ರತಿ ಸಂಶೋಧನೆಯಲ್ಲಿ ನಿರ್ದಿಷ್ಟ ಗುರಿ, ವಿಷಯ ಸ್ಪಷ್ಟತೆ ಹಾಗೂ ಸೈದ್ಧಾಂತಿಕ ನಿಲುವು ಹೊಂದಿರಬೇಕು. ಸಂಶೋಧನಕಾರರು ತಮ್ಮ ಕಲ್ಪನೆಗಳಲ್ಲಿ ನಿಖರತೆ, ನಿರ್ದಿಷ್ಟತೆ ಹಾಗೂ ಸ್ಪಷ್ಟತೆ ಹೊಂದಿರಬೇಕು. ಇಲ್ಲವಾದಲ್ಲಿ ತಾವು ನಡೆಸುವ ಯಾವುದೇ ಸಂಶೋಧನೆಗಳಿರಲಿ, ಅವರು ಹೆಚ್ಚಿನ ರೀತಿಯಲ್ಲಿ ವಿಫಲವಾಗುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು.

ಭದ್ರಾವತಿ ಕಾಲೇಜಿನ ಪ್ರೊ. ಶೋಯಿಬ್ ಅಹಮದ್, ಐಕ್ಯೂಎಸಿ ಸಂಚಾಲಕಿ ಎಚ್.ವಿ. ಗೀತಾ ಮಾತನಾಡಿದರು. ಕಾಲೇಜಿನ ಗ್ರಂಥಪಾಲಕ ಡಾ.ನಾಗರಾಜ್ ನಾಯ್ಕ, ಉಪನ್ಯಾಸಕರಾದ ಹರಾಳು ಮಹಾಬಲೇಶ್ವರ, ಡಾ.ಬೀನಾ, ಕಿರಣ್ ಎಂ. ಹಾಗೂ ವಿವಿಧ ಜಿಲ್ಲೆಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

- - - -20ಎಚ್.ಎಲ್.ಐ1.ಜೆಪಿಜಿ:

ಕಾರ್ಯಾಗಾರವನ್ನು ದಾವಣಗೆರೆ ವಿವಿ ಕುಲಸಚಿವ ಪ್ರೊ. ಶಶಿಧರ ರುದ್ರಪ್ಪ ಉದ್ಘಾಟಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ