ಕಾಂಗ್ರೆಸ್ ಕೊಡುಗೆಗಳ ಜಾಗೃತಿಗೆ ಕಾರ್ಯಾಗಾರ

KannadaprabhaNewsNetwork |  
Published : Feb 26, 2026, 02:00 AM IST
ಕಾಂಗ್ರೆಸ್ | Kannada Prabha

ಸಾರಾಂಶ

ಚಿಕ್ಕಮಗಳೂರುದೇಶಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವೈಫಲ್ಯ ಹಾಗೂ ಹಿಂದೂ-ಮುಸ್ಲಿಂ ಹತ್ತಿಕ್ಕುವ ಸಂಘಟನೆಗಳ ವಿರುದ್ಧ ಜಾಗೃತಿ ಸಲುವಾಗಿ‌ ಮಾರ್ಚ್ ನಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸೈಯದ್ ಹನೀಫ್ ಹೇಳಿದರು.

ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸೈಯದ್ ಹನೀಫ್

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ದೇಶಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವೈಫಲ್ಯ ಹಾಗೂ ಹಿಂದೂ-ಮುಸ್ಲಿಂ ಹತ್ತಿಕ್ಕುವ ಸಂಘಟನೆಗಳ ವಿರುದ್ಧ ಜಾಗೃತಿ ಸಲುವಾಗಿ‌ ಮಾರ್ಚ್ ನಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸೈಯದ್ ಹನೀಫ್ ಹೇಳಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ನಡೆದ ಕಾಂಗ್ರೆಸ್ ಕಾರ್ಯ ಕರ್ತರ ಕಾರ್ಯಾಗಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ದಿನಾಂಕ ನಿಗದಿ ಪಡಿಸಲಾಗುವುದು ಎಂದು ತಿಳಿಸಿದರು.

ಗಾಂಧೀಜಿ ಜನಿಸಿದ ಮಣ್ಣಿನಲ್ಲಿ ಇತ್ತೀಚೆಗೆ ಕೋಮುವಾದ, ಗಾಂಧೀಜಿ ಕೊಂದ ಗೂಡ್ಸೆ ಸಿದ್ದಾಂತ ಹೆಚ್ಚುತ್ತಿವೆ. ಇದು ಜನ ಸಾಮಾನ್ಯರಿಗೆ ತಪ್ಪು ಮಾಹಿತಿ ರವಾನೆಗೆ ಕಾರಣ ಗಾಂಧೀಜಿ ನೈಜ ತತ್ವ, ಆದರ್ಶ ಹಾಗೂ ಸಿದ್ದಾಂತ ಪರಿಚಯಿಸುವುದೇ ಮುಖ್ಯ ಕೆಲಸ ಎಂದರು.

ಸಮಾಜದ ಏಕತೆಗೆ ಕಾಂಗ್ರೆಸ್ ನ ಅನೇಕ ನಾಯಕರು ಪ್ರಾಣ ತ್ಯಾಗ ಮಾಡಿದ್ದಾರೆ. ಮಾಜಿ ಪ್ರಧಾನಿ ಇಂದಿರಾ, ರಾಜೀವ್‌ ಗಾಂಧಿ ದೇಶವನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ. ತಂತ್ರಜ್ಞಾನ ಉನ್ನತಕ್ಕೇರಲು ಮೂಲ ಕತೃ ರಾಜೀವ್‌ ಗಾಂಧಿ ಎಂದು ತಿಳಿಸಿದರು.

ಇತ್ತೀಚೆಗೆ ದೇಶದಲ್ಲಿ ಬಿಜೆಪಿ ಮತ್ತು ಆಪ್ತ ಸಂಘಟನೆ ಅಧಿಕಾರಕ್ಕಾಗಿ ಹಿಂದೂ-ಮುಸ್ಲಿಂ, ಭಾರತ-ಪಾಕಿಸ್ತಾನ ಎಂಬ ಕಿತ್ತಾಟ ಶುರುವಾಗಿದೆ. ಕೇಂದ್ರ ಸರ್ಕಾರ ಹನ್ನೊಂದು ವರ್ಷ ಪೂರೈಸಿದರೆ ನಿರುದ್ಯೋಗ ಸಮಸ್ಯೆ, ವಿಪರೀತ ತೆರಿಗೆ ಬರೆ ಎಳೆದಿದೆ ಎಂದು ದೂರಿದರು.

ಕಡೂರಲ್ಲಿ ಕಾರ್ಯಕರ್ತರು, ಸಿಎಲ್‌ಓಗಳಿಗೆ ಬೃಹತ್ ಮಟ್ಟದ ಕಾರ್ಯಾಗಾರ ಹಮ್ಮಿಕೊಳ್ಳಲಿದ್ದೇವೆ.ಕ್ಷೇತ್ರ ಶಾಸಕರು ಬಹಳಷ್ಟು ಉತ್ಸುಕರಾದ ಕಾರಣ ಅಲ್ಲಿ ಕಾರ್ಯಾಗಾರ ನಡೆಸಲಾಗುವುದು ಎಂದರು.

ಕೆಪಿಸಿಸಿ ಸಂಯೋಜಕ ಎಂ.ಎಸ್.ಅನಂತು ಮಾತನಾಡಿ, ಪ್ರಚಾರ ಸಮಿತಿ ರಾಜ್ಯಾಧ್ಯಕ್ಷರ ಆದೇಶದನ್ವಯ ಪ್ರತಿ ಜಿಲ್ಲೆಯಲ್ಲಿ ಕಾರ್ಯಾಗಾರ ನಡೆಸಿ ಕಾಂಗ್ರೆಸ್ ಇತಿಹಾಸ ಮರುಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ. ಈಗಾಗಲೇ ಮೈಸೂರು, ಬಾಗಲ ಕೋಟೆ, ಹುಬ್ಬಳ್ಳಿಯಲ್ಲಿ ಕಾರ್ಯಾಗಾರ ಯಶಸ್ವಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಚಾರ ಸಮಿತಿ ಉಪಾಧ್ಯಕ್ಷ ಆರ್.ಚಂದ್ರಣ್ಣ, ಹೇಮಲತಾ, ಸಂಯೋ ಜಕರಾದ ಎ.ಎಸ್.ಮಹೇಶ್ವರಪ್ಪ, ಎಚ್.ಸಿ.ಗಂಗಾಧರ್, ಲೋಲಾಕ್ಷಿ ಬಾಯಿ, ಮಂಜೇಗೌಡ, ಬ್ಲಾಕ್ ಕಾಂಗ್ರೆ ಸ್ ಪ್ರಚಾರ ಸಮಿತಿ ಅಧ್ಯಕ್ಷ ಹುಣಸೇಮಕ್ಕಿ ಲಕ್ಷ್ಮಣ್, ಸಿಡಿಎ ಸದಸ್ಯ ಸಿ.ಸಿ.ಮಂಜುನಾಥ್, ಮುಖಂಡರಾದ ಅನ್ಸರ್‌ಆಲಿ, ದಿವಾಕರ್, ಸಚಿನ್‌ಸಿಂಗ್, ನಿಂಗೇಗೌಡ, ಸುಧೀರ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿಯೊಬ್ಬರ ಆರೋಗ್ಯ ಕಾಪಾಡುವುದು ಅಗತ್ಯ: ನಾಗರಾಜ್
ಈಗ ಎಂಎಲ್‌ಸಿಗಳಿಂದ ಸಚಿವ ಸ್ಥಾನಕ್ಕೆ ಬೇಡಿಕೆ