ಬಾಳಿಗ ಆಸ್ಪತ್ರೆಯಲ್ಲಿ ವಿಶ್ವ ಸ್ವಲೀನತೆ ಜಾಗೃತಿ ಕಾರ್ಯಕ್ರಮ

KannadaprabhaNewsNetwork |  
Published : Apr 28, 2024, 01:20 AM IST
ಬಾಳಿಗಾ27 | Kannada Prabha

ಸಾರಾಂಶ

ರೇಡಿಯೋ ಮಣಿಪಾಲ್ ಜಂಟಿಯಾಗಿ ಆಯೋಜಿಸಿದ ಮನದ ಮಾತು -ವಿವಿಧ ಮಾನಸಿಕ ಆರೋಗ್ಯ ವಿಷಯಗಳ ಮಾಹಿತಿ ಸರಣಿ ಎಂಬ ವಿನೂತನ ಕಾರ್ಯಕ್ರಮದ ಉದ್ಘಾಟನೆಯು ಆಸ್ಪತ್ರೆಯಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಮುಂಬೈಯ ಕಮಲ್ ಬಾಳಿಗ ಚಾರಿಟೇಬಲ್ ಟ್ರಸ್ಟ್, ಉಡುಪಿ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ಹಾಗೂ ಆಟಿಸಂ ಸೊಸೈಟಿಗಳ ಆಶ್ರಯದಲ್ಲಿ ವಿಶ್ವ ಸ್ವಲೀನತೆ ಜಾಗೃತಿ ಮಾಸದ ಪ್ರಯುಕ್ತ ಮಕ್ಕಳಿಗಾಗಿ ಚಿತ್ರೋತ್ಸವ ಚಟುವಟಿಕೆ, ಪೋಷಕರಿಗಾಗಿ ಸ್ವಲೀನತೆ, ಮಾತಿನ ತೊಂದರೆ, ಅತಿಚಟುವಟಿಕೆ, ಕಲಿಕಾ ತೊಂದರೆಗಳ ಕುರಿತು ಮಾಹಿತಿ ಕಾರ್ಯಕ್ರಮ ಹಾಗೂ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯು 20 ವರ್ಷಗಳನ್ನು ಪೂರೈಸಿದ ಅಂಗವಾಗಿ ರೇಡಿಯೋ ಮಣಿಪಾಲ್ ಜಂಟಿಯಾಗಿ ಆಯೋಜಿಸಿದ ಮನದ ಮಾತು -ವಿವಿಧ ಮಾನಸಿಕ ಆರೋಗ್ಯ ವಿಷಯಗಳ ಮಾಹಿತಿ ಸರಣಿ ಎಂಬ ವಿನೂತನ ಕಾರ್ಯಕ್ರಮದ ಉದ್ಘಾಟನೆಯು ಆಸ್ಪತ್ರೆಯಲ್ಲಿ ನಡೆಯಿತು.

ರೇಡಿಯೋ ಮಣಿಪಾಲ್ ಇದರ ಸಂಯೋಜಕಿ ಡಾ. ರಶ್ಮಿ ಅಮ್ಮೆಂಬಳ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಸ್ಪತ್ರೆಯ ಮನೋವೈದ್ಯರಾದ ಡಾ.ವಿರೂಪಾಕ್ಷ ದೇವರಮನೆ, ಡಾ. ದೀಪಕ್ ಮಲ್ಯ, ಡಾ.ಮಾನಸ್ ಇ. ಆರ್. ಹಾಗೂ ಆಡಳಿತ ಅಧಿಕಾರಿ ಸೌಜನ್ಯ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎ.ವಿ. ಬಾಳಿಗ ಸಮೂಹ ಸಂಸ್ಥೆಗಳ ವೈದ್ಯಕೀಯ ನಿರ್ದೇಶಕ, ಖ್ಯಾತ ಮನೋವೈದ್ಯ ಡಾ.ಪಿ.ವಿ.ಭಂಡಾರಿ ವಹಿಸಿದ್ದರು.

ಡಾ.ವಿರೂಪಾಕ್ಷ ದೇವರಮನೆ ಪ್ರಾಸ್ತಾವಿಕ ಮಾತುಗಳನ್ನಾಡಿ, ಸರ್ವರನ್ನು ಸ್ವಾಗತಿಸಿದರು. ಆಪ್ತ ಸಮಾಲೋಚಕರಾದ ವಿಶ್ವೇಶ್ವರ ಹೆಗಡೆ ಪ್ರಾರ್ಥಿಸಿದರು. ರೂತ್ ಶೈನಿ ವಂದಿಸಿದರು. ಪೂರ್ಣಿಮಾ ಎಸ್. ಕಾರ್ಯಕ್ರಮವನ್ನು ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ಮಕ್ಕಳಿಗೆ ಚಿತ್ರೋತ್ಸವ ಮತ್ತು ಪೋಷಕರಿಗಾಗಿ ಸ್ವಲೀನತೆ, ಕಲಿಕಾ ತೊಂದರೆ, ಅತಿಚಟುವಟಿಕೆ ಹಾಗೂ ಮಾತಿನ ತೊಂದರೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾದ ಡಾ. ಪ್ರಿಯದರ್ಶಿನಿ, ದೀಪಶ್ರೀ, ಪೂರ್ಣಿಮಾ ಎಸ್., ರೂತ್ ಶೈನಿ ಹಾಗೂ ಶ್ವೇತಾ ನಾಯಕ್ ಅವರಿಂದ ಮಾಹಿತಿ ಕಾರ್ಯಾಗಾರ ನಡೆಯಿತು. ಮಕ್ಕಳಿಗಾಗಿ ವಿವಿಧ ಮನರಂಜನಾ ಹಾಗೂ ಆಟೋಟ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಪ್ರಯೋಜನವನ್ನು 85ಕ್ಕಿಂತಲೂ ಹೆಚ್ಚು ಮಂದಿ ಪಡೆದುಕೊಂಡರು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ