ಕನ್ನಡಪ್ರಭ ವಾರ್ತೆ ನಾಪೋಕ್ಲು
ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಬಿಜೆಪಿ ಶಕ್ತಿ ಕೇಂದ್ರ ಪೆರಾಜೆ ವತಿಯಿಂದ ಮಂಗಳವಾರ ದೇವಸ್ಥಾನದ ಉಳ್ಳಾಕುಲ ಸ್ಥಾನದ ಪರಿಸರದಲ್ಲಿ ಸಾಗುವನಿ , ಮಹಾಗನಿ , ಬಿಲ್ವ ಪತ್ರೆ ಗಿಡ ನಾಟಿಮಾಡಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರರು ಜಿತೇಂದ್ರ ನಿಡ್ಯಮಲೆ, ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ, ಪೆರಾಜೆ ಪಂಚಾಯಿತಿ ಉಪಾಧ್ಯಕ್ಷರಾದ ನಂಜಪ್ಪ ನಿಡ್ಯಮಲೆ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಹಾಜರಿದ್ದರು.