ಕನ್ನಡಪ್ರಭ ವಾರ್ತೆ ಬ್ರಹ್ಮಾವರ
ಪ್ರಾಂಶುಪಾಲರಾದ ಪ್ರಣವ್ ಶೆಟ್ಟಿ ಅವರು ಪರಿಸರ ಸಂರಕ್ಷಣೆಯ ಬಗ್ಗೆ ಸ್ಫೂರ್ತಿದಾಯಕ ಮಾತುಗಳನ್ನಾಡಿದರು. ನಮ್ಮ ಇಂದಿನ ಉತ್ತಮ ನಡೆಯೇ ನಮ್ಮನ್ನು ಕೊನೆಯವರೆಗೆ ಕಾಯುವುದು ಎಂದ ಅವರು ಪರಿಸರವನ್ನು ಉಳಿಸುವಿಕೆ ಹಾಗೂ ಸಂಪನ್ಮೂಲಗಳ ಸದ್ಬಳಕೆ ನಮ್ಮೆಲ್ಲರ ಜವಾಬ್ದಾರಿ ಎಂಬುದಾಗಿ ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಥೋಮಸ್ ಸಾರಸ್ ಅವರು, ಪರಿಸರ ಸಂರಕ್ಷಣೆ ಬಗೆಗಿನ ವಿಶ್ವಸಂಸ್ಥೆಯ ಕೊಡುಗೆ ಮತ್ತು ಅವಿರತ ಪ್ರಯತ್ನವನ್ನು ನೆನಪಿಸುತ್ತಾ, ಸಭೆಯಲ್ಲಿ ನೆರೆದ ಸಮಸ್ತರಿಗೂ ನಿಸರ್ಗದೊಂದಿಗೆ ಸೂಕ್ಷ್ಮವಾಗಿ ವ್ಯವಹರಿಸುತ್ತಾ ಪರಿಸರವನ್ನು ಹಾನಿಮಾಡದೆ ಉಳಿಸಿ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ತುರ್ತಾಗಿ ಕಾರ್ಯೋನ್ಮುಖವಾಗಬೇಕಾಗಿದೆ ಎಂದು ಒತ್ತಾಯಿಸಿದರು.ಶಾಲಾ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಅವರು, ಉತ್ತಮ ಹವ್ಯಾಸ, ಜವಾಬ್ದಾರಿಯುತ ನಡೆ ಇವುಗಳೊಂದಿಗೆ ವಿದ್ಯಾರ್ಥಿಗಳು ಸಮಾಜದಲ್ಲಿ ನೇತ್ಯಾತ್ಮಕವಾಗಿ ಪ್ರಭಾವ ಬೀರುವುದರ ಜೊತೆಗೆ ಪರಿಸರ ಕಾಳಜಿಯ ಚಿಂತನೆಯನ್ನೂ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.