ವಿಶ್ವವಿಖ್ಯಾತ ಬೇಲೂರಿನ ಚನ್ನಕೇಶವನಿಗಿಲ್ಲ ಸೂಕ್ತ ಭದ್ರತೆ, ಶಿಲೆಗಳ ಸಂರಕ್ಷಣೆಗೆ ಸಾರ್ವಜನಿಕರ ಆಗ್ರಹ

KannadaprabhaNewsNetwork |  
Published : Nov 12, 2025, 01:45 AM IST
11ಎಚ್ಎಸ್ಎನ್5 : ವಿಶ್ವವಿಖ್ಯಾತ ಶ್ರೀ ಚನ್ನಕೇಶವ ಸ್ವಾಮಿ   ದೇಗುಲದಲ್ಲಿ  ಭದ್ರತಾ ನಿರ್ಲಕ್ಷ್ಯ   ಎದ್ದು ಕಾಣುತ್ತಿದ್ದು  ಪ್ರವಾಸಿಗರು      ಒಳ ಹೋಗುವ  ಮೆಟಲ್ ಡಿಟೆಕ್ಟರ್  ಬಳಸದೆ    ಹೊರ ಬರುವ ಮಾರ್ಗ ಬಳಸುತ್ತಿರುವುದು.  | Kannada Prabha

ಸಾರಾಂಶ

ಈ ನಡುವೆ ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿರುವ ಐತಿಹಾಸಿಕ ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಭದ್ರತೆ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರು

ವಿಶ್ವವಿಖ್ಯಾತ ಶ್ರೀ ಚನ್ನಕೇಶವ ಸ್ವಾಮಿ ದೇಗುಲದಲ್ಲಿ ಭದ್ರತಾ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ಒಳ ಹೋಗುವ ಮಾರ್ಗದ

ಮೆಟಲ್ ಡಿಟೆಕ್ಟರ್ ಹಾಗೂ ಸೂಕ್ಷ್ಮ ಸ್ಥಳದಲ್ಲಿನ ಸಿ.ಸಿ ಕ್ಯಾಮೆರಾ ಕೆಲಸ ಮಾಡುತ್ತಿಲ್ಲ. ಐತಿಹಾಸಿಕ ತಾಣದ ಸಂರಕ್ಷಣೆಗೆ ಸಂಬಂಧಪಟ್ಟ ಇಲಾಖೆ ಮುಂದಾಗುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿಯ ಕೆಂಪುಕೋಟೆ ಬಳಿ ಸೋಮವಾರ ಸ್ಫೋಟ ಪ್ರಕರಣ ನಡೆದು ಸುಮಾರು ೧೧ಕ್ಕೂ ಹೆಚ್ಚು ಜನ ಸಾವನ್ನಪ್ಪಿರುವ ಘಟನೆ ನಡೆದಿರುವ ಹಿನ್ನೆಲೆಯಲ್ಲಿ ದೇಶದ ಪುರಾತನ ಸ್ಮಾರಕಗಳಲ್ಲಿ ಭದ್ರತೆಯನ್ನು ಹೆಚ್ಚಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೂಚಿಸಿವೆ. ಆದರೆ, ಪ್ರವಾಸಿ ಕೇಂದ್ರ ಬೇಲೂರು ಶ್ರೀ ಚನ್ನಕೇಶವ ಸ್ವಾಮಿ ದೇಗುಲದಲ್ಲಿ ಭದ್ರತಾ ನಿರ್ಲಕ್ಷ್ಯ ಲೋಪ ಎದ್ದು ಕಾಣುತ್ತಿದ್ದು, ಸೂಕ್ತವಾದ ಸ್ಥಳದಲ್ಲಿದ್ದ ಸಿ.ಸಿ ಕ್ಯಾಮೆರಾ ಕೆಟ್ಟಿರುವ ಜೊತೆಗೆ ಪ್ರವಾಸಿಗರು ಪ್ರವೇಶ ಮಾಡುವ ಮುಖ್ಯ ದ್ವಾರದ ಬಳಿ ಕಳಪೆ ಮೆಟಲ್ ಡಿಟೆಕ್ಟರ್ ಅಳವಡಿಸಿದ್ದು, ಒಳಗೆ ಪ್ರವೇಶ ಮಾಡುವ ಆಗಂತುಕರ ಬಗ್ಗೆ ಸುಳಿವು ನೀಡದೇ ಚಿರ ನಿದ್ರೆಗೆ ಜಾರಿದ್ದು ಹೊಯ್ಸಳರ ಕಾಲದ ಪಳೆಯುಳಿಕೆ ಶಿಲಾಶಾಸನ ರಕ್ಷಿಸುವರು ಯಾರು ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಈ ನಡುವೆ ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿರುವ ಐತಿಹಾಸಿಕ ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಭದ್ರತೆ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಆಗಂತುಕರು ದೇಗುಲ ಪ್ರವೇಶ ಮಾಡಿ ಆತಂಕದ ವಾತಾವರಣ ಉಂಟುಮಾಡುವ ಅವಕಾಶವಿದ್ದು, ಈಗಲಾದರೂ ಸಂಬಂಧಪಟ್ಟ ಇಲಾಖೆಯವರು ಎಚ್ಚೆತ್ತು ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡು ಮುಂದಾಗುವ ಅನಾಹುತವನ್ನು ತಪ್ಪಿಸಬೇಕು ಎಂದು ಭಕ್ತಾದಿಗಳು ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆ ಕೋರಿಕೆ : ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ