ವರ್ಧಮಾನ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ

KannadaprabhaNewsNetwork |  
Published : Jul 20, 2026, 12:30 AM IST
19ಕೆಎಂಎನ್ ಡಿ16 | Kannada Prabha

ಸಾರಾಂಶ

ಆರೋಗ್ಯ ಸಂಖ್ಯೆಗಳ ಬಗ್ಗೆ ಲಿಂಗಾನುಪಾತ ಫಲವತ್ತೆಯ ದರ NPHS -6 ರ ವರದಿಯಂತೆ 1.8 ಜನರ ದರ ಜಿಲ್ಲೆಯಲ್ಲಿ 11.17 ಮರಣ ಪ್ರಮಾಣದ 11.35 ಸಿ.ಸಿ.ಆರ್ ಎಸ್. ಲಿಂಗಾನುಪಾತ ಜಿಲ್ಲೆಯಲ್ಲಿ ಎಚ್.ಎಂ.ಐ.ಎಸ್. ವರದಿ ಪ್ರಕಾರ 1000 ಗಂಡು ಮಕ್ಕಳಿಗೆ 915 ಹೆಣ್ಣು ಮಕ್ಕಳು ಇದೆ.

ಮದ್ದೂರು:

ತಾಲೂಕಿನ ವರ್ಧಮಾನ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ತಾಲೂಕು ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ ನಡೆಯಿತು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮರಿಸ್ವಾಮಿ ಮಾತನಾಡಿ, ಜನಸಂಖ್ಯೆಯಿಂದ ಬೆಳವಣಿಗೆ ಹಾಗೂ ಆಗುವಂತಹ ದುಷ್ಪರಿಣಾಮಗಳನ್ನು ಶಿಕ್ಷಣ ವಸತಿ ಆರೋಗ್ಯ ಮೂಲ ಸೌಕರ್ಯಗಳ ಮೇಲೆ ಪರಿಣಾಮಗಳು ಬೀರುತ್ತಿದೆ. ಜನಸಂಖ್ಯಾ ನಿಯಂತ್ರಣ ಕುರಿತಂತೆ ಮದುವೆ, ವಯಸ್ಸು ಅಂತರದ ಹೆರಿಗೆ, ಬಾಲ್ಯ ವಿವಾಹ,ಬಾಲ್ಯ ಗರ್ಭಿಣಿ ಗರ್ಭಪಾತ ಬಗ್ಗೆ ಮಾಹಿತಿ ನೀಡಿದರು.

ಆರೋಗ್ಯ ಸಂಖ್ಯೆಗಳ ಬಗ್ಗೆ ಲಿಂಗಾನುಪಾತ ಫಲವತ್ತೆಯ ದರ NPHS -6 ರ ವರದಿಯಂತೆ 1.8 ಜನರ ದರ ಜಿಲ್ಲೆಯಲ್ಲಿ 11.17 ಮರಣ ಪ್ರಮಾಣದ 11.35 ಸಿ.ಸಿ.ಆರ್ ಎಸ್. ಲಿಂಗಾನುಪಾತ ಜಿಲ್ಲೆಯಲ್ಲಿ ಎಚ್.ಎಂ.ಐ.ಎಸ್. ವರದಿ ಪ್ರಕಾರ 1000 ಗಂಡು ಮಕ್ಕಳಿಗೆ 915 ಹೆಣ್ಣು ಮಕ್ಕಳು ಇರುವುದಾಗಿ ಉಪನ್ಯಾಸ ನೀಡಿದರು. ಪ್ರಾಂಶುಪಾಲೆ ನವ್ಯಶ್ರೀ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ನಿವೃತ್ತ ಆರೋಗ್ಯ ಶಿಕ್ಷಣಾಧಿಕಾರಿ ಪಿ.ಶಿವಾನಂದ, ಹಿರಿಯ ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿ ಮಣಿ, ಎಚ್‌ಐಒ ಜಯಕುಮಾರಿ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.ಟೋರಾ ಕ್ಲಬ್ ಗೆ ಡಿ.ಕೆ.ದೇವೇಗೌಡ ಅಧ್ಯಕ್ಷ

ಪಾಂಡವಪುರ: ಪಟ್ಟಣದ ದಿ ಅಫಿಷಿಯಲ್ ರಿಕ್ರಿಯೇಷನ್ ಅಸೋಸಿಯೇಷನ್ (ಟೋರಾ ಕ್ಲಬ್) ನೂತನ ಅಧ್ಯಕ್ಷರಾಗಿ ಡಿ.ಕೆ.ದೇವೇಗೌಡ ಚುನಾಯಿತರಾಗಿದ್ದಾರೆ.2026 ರಿಂದ 2029 ಅಡಳಿತ ನಿರ್ವಹಿಸುವ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆದು ಉಳಿದೆಲ್ಲ ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ದೇವೇಗೌಡ ಮತ್ತು ಎಂ.ಕೆ.ಸತ್ಯೇಂದ್ರಕುಮಾರ್ ಸ್ಪರ್ಧಿಸಿದ್ದರು. ಅಂತಿಮವಾಗಿ ದೇವೇಗೌಡ ಆಯ್ಕೆಯಾದರು. ಉಳಿದಂತೆ ಉಪಾಧ್ಯಕ್ಷರಾಗಿ ಪಿ.ಮಂಜುನಾಥ್ ಹಾಗೂ ಎಸ್.ಎನ್.ಕೆಂಪೇಗೌಡ, ಕಾರ್ಯದರ್ಶಿಯಾಗಿ ಎಚ್.ಕೆ.ವೆಂಕಟೇಶ್, ಸಹ ಕಾರ್ಯದರ್ಶಿಯಾಗಿ ಎಚ್.ವಿ.ನಂಜರಾಜಯ್ಯ, ಖಜಾಂಚಿಯಾಗಿ ಮಾಣಿಕ್ಯನಹಳ್ಳಿ ಇ.ಸುರೇಶ್‌, ನಿರ್ದೇಶಕರಾಗಿ ಜಿ.ಎಸ್.ರಾಘವೇಂದ್ರ, ಎನ್.ನರಸೇಗೌಡ, ಕೆ.ಜವರೇಗೌಡ, ಬಿ.ಜಿ.ತ್ಯಾಗರಾಜ್‌, ಯೋಗೇಶ್‌, ನಂಜುಂಡಸ್ವಾಮಿ, ಎಂ.ಜೆ.ರಾಜೇಶ್‌, ಎಸ್.ಡಿ.ರವಿಕುಮಾರ ಹಾಗೂ ಪರಮೇಶ್ವರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಶಿವಕುಮಾರ್ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಕ್ಷರ ದಾಸೋಹ ಸಿಬ್ಬಂದಿಯ ಆರೋಗ್ಯಕ್ಕೂ ಆದ್ಯತೆ
ನರರೋಗ ಸಮಸ್ಯೆ ಪರಿಹಾರಕ್ಕೆ ಸಲಕರಣೆಗಳ ನೆರವು: ಡಾ.ರಾಜೇಶ್