ಕಳಪೆ ಗುಣಮಟ್ಟದ ಆಹಾರ ಸಾಮಗ್ರಿ ವಿತರಣೆ: ಪಾಲಕರಿಂದ ಆಕ್ರೋಶಕನ್ನಡಪ್ರಭ ವಾರ್ತೆ ಹಳಿಯಾಳ
ಶನಿವಾರ ಮಧ್ಯಾಹ್ನ ಶಾಲೆಗೆ ಎಸ್.ಡಿ.ಎಂ.ಸಿ ಸಮಿತಿಯು ಭೇಟಿ ನೀಡಿದ ಸಂದರ್ಭದಲ್ಲಿ ಮಕ್ಕಳಿಗೆ ತೀರಾ ಕಳಪೆಯಾಗಿರುವ ನುಸಿ-ಹುಳಮಿಶ್ರಿತವಾಗಿರುವ ಮುಗ್ಗಾಗಿರುವ ಬಿಳಿಪೌಡರ್‌ನಿಂದ ತುಂಬಿರುವ ತೊಗರಿಬೆಳೆಯ ಸಾರನ್ನು ಮಕ್ಕಳಿಗೆ ಬಡಿಸುವುದನ್ನು ಕಂಡು ಸಮಿತಿಯವರು ಆಕ್ಷೇಪಿಸಿದ್ದಾರೆ.
ಸಮಿತಿಯ ಸದಸ್ಯರ ಹಾಗೂ ಶಾಲೆಯ ಸಿಬ್ಬಂದಿಗಳ ಮಧ್ಯೆ ನಡೆದ ಮಾತಿನ ಸಪ್ಪಳ ಕೇಳಿ ಮಕ್ಕಳ ಪಾಲಕರು ಶಾಲೆಗೆ ಕುತೂಹಲದಿಂದ ಶಾಲೆಗೆ ಧಾವಿಸಿ ಬೆಳೆಯನ್ನು ಪರಿಶೀಲಿಸಿದರಲ್ಲದೇ, ಕಳೆದ ಮೂರು ತಿಂಗಳಿಂದ ಮಕ್ಕಳಿಗೆ ಇಂತಹ ಕಳಪೆ, ಮೂರನೇ ಗುಣಮಟ್ಟದ ತೊಗರಿಬೆಳೆ ವಿತರಿಸಲಾಗುತ್ತಿದೆ. ಇಂತಹ ಕಳಪೆ ಸಾಮಗ್ರಿಗಳಿಂದ ತಯಾರಿಸಿದ ಆಹಾರ ಸೇವಿಸಿ ಮಕ್ಕಳ ಆರೋಗ್ಯ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.ಎಸ್.ಡಿ.ಎಂ.ಸಿ ಸಮಿತಿ ಆಹಾರ ಸಾಮಗ್ರಿ ಶೇಖರಿಸಿಡುವ ಗೋದಾಮಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ಸರ್ಕಾರ ಪೂರೈಸಿದ ತೊಗರಿ ಬೆಳೆಯಲ್ಲಿ ನುಸಿ ಹುಳು ಕಂಡುಬಂದವು. ಕಳೆದ ಮೂರು ತಿಂಗಳಿಂದ ಮಕ್ಕಳಿಗೆ ಇಂತಹ ಕಳಪೆ ಆಹಾರ ಸಿದ್ದಪಡಿಸಿ ನೀಡುತ್ತಿದ್ದಾರೆ. ಈ ವಿಷಯವನ್ನು ಶಾಲಾಭಿವೃದ್ಧಿ ಸಮಿತಿಯವರು ಗಂಭೀರವಾಗಿ ಪರಿಗಣಿಸಿ ಗುಣಮಟ್ಟದ ಆಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕೆಂದು ಪಾಲಕರು ಆಗ್ರಹಿಸಿದರು.