ಧರ್ಮ ಉಳಿಯಲು ಪೂಜಾರಾಧನೆ ಅವಶ್ಯ: ಸಿದ್ದಲಿಂಗ ಸ್ವಾಮೀಜಿ

KannadaprabhaNewsNetwork |  
Published : Mar 20, 2024, 01:21 AM IST
19ಕೆಎಂಎನ್ ಡಿ33 | Kannada Prabha

ಸಾರಾಂಶ

ಗುರು ಹಿರಿಯರಲ್ಲಿ ಗೌರವ ತೋರಲು ಯುವ ಸಮೂಹ ಮುಂದಾಗಬೇಕು. ಧರ್ಮ ಎತ್ತಿ ಹಿಡಿಯುವ ಕೆಲಸದಲ್ಲಿ ಸಂಘರ್ಷ ಬೇಡ. ಮಠದ ಸದ್ಭಕ್ತರು, ಮಠದ ವಿದ್ಯಾರ್ಥಿಗಳು ಗ್ರಾಮದಲ್ಲಿ ಅತೀ ಹೆಚ್ಚಿದ್ದು, ಸಿದ್ಧಗಂಗಾಶ್ರೀ ಅವರ ಪುತ್ಥಳಿ ನಿರ್ಮಿಸಿರುವುದು ಮಠದ ಭಕ್ತಿಯನ್ನು ತೋರುತ್ತಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿಪೂಜಾರಾಧನೆ ಮೂಲಕ ಧರ್ಮ, ಸಕಾರತ್ಮಾಕ ಸದ್ಗುಣ, ವಾತಾವರಣ ಗ್ರಾಮಗಳಲ್ಲಿ ಉಳಿಯಲಿದೆ ಎಂದು ತುಮಕೂರು ಸಿದ್ದಗಂಗಾ ಮಠ ಪೀಠಾಧ್ಯಕ್ಷ ಸಿದ್ಧಲಿಂಗ ಮಹಾಸ್ವಾಮೀಜಿ ಹೇಳಿದರು.

ಜಯಪುರ ಗ್ರಾಮದಲ್ಲಿ ಜರುಗಿದ ಬಸವೇಶ್ವರ ದೇಗುಲ, ವಿಗ್ರಹ ಪ್ರತಿಷ್ಠಾಪನೆ ಮಹೋತ್ಸವದಲ್ಲಿ ಆಶೀರ್ವಚನ ನೀಡಿ, ಗುರು ಹಿರಿಯರಲ್ಲಿ ಗೌರವ ತೋರಲು ಯುವ ಸಮೂಹ ಮುಂದಾಗಬೇಕು. ಧರ್ಮ ಎತ್ತಿ ಹಿಡಿಯುವ ಕೆಲಸದಲ್ಲಿ ಸಂಘರ್ಷ ಬೇಡ. ಮಠದ ಸದ್ಭಕ್ತರು, ಮಠದ ವಿದ್ಯಾರ್ಥಿಗಳು ಗ್ರಾಮದಲ್ಲಿ ಅತೀ ಹೆಚ್ಚಿದ್ದು, ಸಿದ್ಧಗಂಗಾಶ್ರೀ ಅವರ ಪುತ್ಥಳಿ ನಿರ್ಮಿಸಿರುವುದು ಮಠದ ಭಕ್ತಿಯನ್ನುತೋರುತ್ತಿದೆ ಎಂದರು.

ಬಾಳೆಹೊನ್ನೂರು ರಂಭಾಪುರಿ ಶಾಖಾಮಠದ ತೆಂಡೇಕೆರೆಗಂಗಾಧರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಲೈಸೆನ್ಸ್‌ ಇಲ್ಲದ ಬಂದೂಕಿನಂತೆ ಲಿಂಗಾಯತ ಧರ್ಮವಾಗುತ್ತಿದೆ. ಸಮುದಾಯದಲ್ಲಿ ಸಂಘರ್ಷ, ವಿಕಲ್ಪ, ವಿಕೃತ್ತ ಭಾವನೆ ದೂರವಾಗಬೇಕಿದೆ ಎಂದು ತಿಳಿಸಿದರು.

ಲಿಂಗಧಾರಣೆ, ಪೂಜೆಯಲ್ಲಿ ಧರ್ಮ ಅಗ್ರಸ್ಥಾನದಲ್ಲಿದೆ. ಇದನ್ನು ಉಳಿಸಬೇಕು. ಶಿವಾರಾಧನೆಯ ಧರ್ಮದಲ್ಲಿ ಭಕ್ತಿ, ಆರಾಧನೆಯಷ್ಟೆ ಸಾಮರಸ್ಯ, ಸೋದರತ್ವ ಭಾವನೆ ಬೇಕಿದೆ. ಹಿರಿಯರು ಧರ್ಮ ಸಂಸ್ಕೃತಿ ಉಳಿಸುವ ವಾತಾವರಣವನ್ನು ಯುವಕರಿಗೆ ತಿಳೀ ಹೇಳುವ ಕೆಲಸ ಮೊದಲು ಆಗಬೇಕಿದೆಎಂದು ತಿಳಿ ಹೇಳಿದರು.

ಬಸವೇಶ್ವರ ದೇವಸ್ಥಾನ ಟ್ರಸ್ಟ್ ಹಾಗೂ ಸದ್ಭಕ್ತರ ಭಕ್ತಿ ಸಮರ್ಪಣೆಯೊಂದಿಗೆ ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ಬಸವೇಶ್ವರ ದೇಗುಲ, ವಿಮಾನ ಗೋಪುರ, ವೇದಘೋಷ, ವಿವಿಧ ಪೂಜಾಕೈಂಕರ್ಯ ಸುಸಂಪನ್ನವಾಯಿತು. ಭಜನೆ, ವೀರಗಾಸೆ, ಮತ್ತಿತರ ಜಾನಪದ ಪ್ರಾಕಾರ ಕಲಾ ಪ್ರದರ್ಶನ ಸಂಭ್ರಮದಿಂದ ನೆರವೇರಿತು.

ಗ್ರಾಮದ ಮಹಿಳೆಯರು ಮುಖಂಡರೊಂದಿಗೆ ವೇದಘೋಷ, ಮಂಗಳವಾದ್ಯದೊಂದಿಗೆ ಪವಿತ್ರಗಂಗೆಯನ್ನು ಪೂರ್ಣಕುಂಭದೊಂದಿಗೆ ಮೆರವಣಿಗೆ ಮೂಲಕ ತಂದರು.

ಸಮಾರಂಭದಲ್ಲಿ ತೇಜೂರು ಶಿವಯೋಗಿ ಸಿದ್ದರಾಮೇಶ್ವರ ಮಠದಕಲ್ಯಾಣ ಸ್ವಾಮೀಜಿ, ದಿಂಡಗಾಡು ಬಸವಜ್ಯೋತಿ ಮಠದ ಅಪ್ಪಾಜಿ ಸ್ವಾಮೀಜಿ, ಮಾಯಿಗೋಡನಹಳ್ಳಿ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಹಾಸನ ತಣ್ಣೀರುಹಳ್ಳ ಮಠದ ವಿಜಯಕುಮಾರ ಸ್ವಾಮೀಜಿ, ಕಾಪನಹಳ್ಳಿ ಗವಿಮಠದ ಸ್ವತಂತ್ರಚನ್ನವೀರ ಸ್ವಾಮೀಜಿ, ಬೇಬಿಬೆಟ್ಟರಾಮಯೋಗಿಶ್ವರ ಮಠದ ಶಿವಬಸವ ಸ್ವಾಮೀಜಿ, ಗ್ರಾಮ ಹಾಗೂ ಸುತ್ತಮುತ್ತಲ ಗ್ರಾಮಗಳ ಸದ್ಭಕ್ತರು ಉಪಸ್ಥಿತರಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ