ಪ್ರತಿ ಕಚೇರಿಯಲ್ಲೂ ಡಾ. ಅಂಬೇಡ್ಕರ್, ಜಗಜೀವನರಾಮ ಭಾವಚಿತ್ರ ಪೂಜೆ ಕಡ್ಡಾಯ

KannadaprabhaNewsNetwork | Published : Apr 2, 2025 1:05 AM

ಸಾರಾಂಶ

ಏ. 5ರಂದು ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನರಾಮ, ಏ. 14ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಪೂಜೆಯನ್ನು ಪ್ರತಿಯೊಂದು ಕಚೇರಿ, ಶಾಲಾ, ಕಾಲೇಜಗಳಲ್ಲಿ ಕಡ್ಡಾಯವಾಗಿ ಮಾಡಬೇಕು ಎಂದು ತಹಸೀಲ್ದಾರ್‌ ನಾಗರಾಜ.ಕೆ. ಸೂಚನೆ ನೀಡಿದರು.

ರೋಣ: ಏ. 5ರಂದು ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನರಾಮ, ಏ. 14ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಪೂಜೆಯನ್ನು ಪ್ರತಿಯೊಂದು ಕಚೇರಿ, ಶಾಲಾ, ಕಾಲೇಜಗಳಲ್ಲಿ ಕಡ್ಡಾಯವಾಗಿ ಮಾಡಬೇಕು ಎಂದು ತಹಸೀಲ್ದಾರ್‌ ನಾಗರಾಜ.ಕೆ. ಸೂಚನೆ ನೀಡಿದರು.

ಪಟ್ಟಣದಲ್ಲಿ ತಹಸೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಜರುಗಿದ ಮಹನೀಯರ ಜಯಂತಿ ಆಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಏ.14ರಂದು ಅರ್ಥಪೂರ್ಣವಾಗಿ ಆಚರಿಸಲು ಪ್ರತಿಯೊಂದು ಇಲಾಖೆ ಅಧಿಕಾರಿಗಳ ಶ್ರಮಿಸಬೇಕು. ಏ. 14ರಂದು ಬೆಳಗ್ಗೆ 9.30 ಕ್ಕೆ ಪಟ್ಟಣದ ಸಿದ್ಧಾರೂಢಮಠದ ಮಹನೀಯರ ಭಾವಚಿತ್ರ ಮೆರವಣಿಗೆ ಪ್ರಾರಂಭವಾಗಿ ಸೂಡಿ ವೃತ್ತ, ಮುಲ್ಲನಬಾವಿ ವೃತ್ತ ಮೂಲಕ ತೆರಳಿ ಕಾರ್ಯಕ್ರಮ ಜರುಗಿದ ಪುರಸಭೆ ಆವರಣ ತಲುಪುವುದು. ಮಹನೀಯರ ಸಾಧನೆ, ಕೊಡುಗೆ, ಸಂದೇಶ ಕುರಿತು ವಿಶೇಷ ಉಪನ್ಯಾಸ, ಸಾಧಕರಿಗೆ ಸನ್ಮಾನ ಜರುಗಲಿದೆ. ಮಹನೀಯರ ಭಾವಚಿತ್ರ ಮೆರವಣಿಗೆಯಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಅನಗತ್ಯ ಗೈರಾದಲ್ಲಿ ಅಂತವರ ಮೇಲೆ ಕ್ರಮ ಜರುಗಿಸಲಾಗುವುದು ಎಂದರು.

ಜಯಂತಿ ಆಚರಣೆಯಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಂ ಅವರ ಭಾವಚಿತ್ರ ಪೂಜೆ ಮಾಡುವಂತೆ ತಾಲೂಕಿನ ಎಲ್ಲಾ ಸಂಘ ಸಂಸ್ಥೆ, ಶಾಲೆ ಕಾಲೇಜುಗಳಿಗೆ ಸುತ್ತೋಲೆ ನೀಡುವಂತೆ ಸಭೆಯಲ್ಲಿದ್ದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಗೀತಾ ಆಲೂರ ಅವರಿಗೆ ಸೂಚನೆ ನೀಡಿದರು.

ಅಧಿಕಾರಿಗಳ ಗೈರು, ಆಕ್ರೋಶ: ಪಟ್ಟಣದ ತಹಸೀಲ್ದಾರ್‌ ಸಭಾಂಗಣದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ತಾಲೂಕು ಮಟ್ಟದ ಕೆಲ ಮುಖ್ಯ ಅಧಿಕಾರಿಗಳು ಗೈರಾಗಿದ್ದು, ಇದನ್ನು ಕಂಡ ದಲಿತ ಸಮಾಜದ ಮುಖಂಡರು, ಮಹನೀಯರ ಜಯಂತಿ ಆಚರಣೆ ಪೂರ್ವಭಾವಿ ಸಭೆಗೆ ಕಲ ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ಗೈರಾಗುತ್ತಾರೆ. ಹೀಗಾದರೆ ಜಯಂತಿಗಳ ಆಚರಣೆ ಅರ್ಥಪೂರ್ಣವಾಗಲು ಶ್ರಮಿಸುವರಾದರು ಯಾರು ಎಂದು ಆಕ್ರೋಶ ವ್ಯಕ್ತಪಡಿಸಿ, ಅಂತಹ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಒತ್ತಾಯಿಸಿದರು. ಪೂರ್ವಭಾವಿ ಗೈರಾದ ಅಧಿಕಾರಿಗಳ ಮಾಹಿತಿ ಪಡೆದು ಅವರಿಗೆ ನೋಟಿಸ್ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಾಲೂಕು ದಂಡಾಧಿಕಾರಿ ಸೂಚಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಪ್ರಕಾಶ ಹೊಸಳ್ಳಿ, ಸೋಮು ನಾಗರಾಜ, ಶರಣಪ್ಪ ದೊಡ್ಡಮನಿ, ಸಂಜಯ ದೊಡಮನಿ, ಬಸವರಾಜ ತಳವಾರ, ದೇವಿಂದ್ರಪ್ಪ ಕೊಳಪ್ಪನ್ನವರ, ಭೀಮಪ್ಪ ಮಾದರ, ಮಜುರಪ್ಪ ಮಾದ,

ಪಿಎಸ್‌ಐ ಪ್ರಕಾಶ ಬಣಕಾರ, ತಾಲೂಕು ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕಿ ಗೀತಾ ಆಲೂರ. ತಾಪಂ ಇಓ ಚಂದ್ರಶೇಖರ್ ಕಂದಕೂರ, ಪುರಸಭೆ ಅಧ್ಯಕ್ಷೆ ಗೀತಾ ಮಾಡಲಗೇರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Share this article