ಲಕ್ಷ್ಮೇಶ್ವರ: ಪಟ್ಟಣದ ರಾಘವೇಂದ್ರ ಸ್ವಾಮಿಗಳ ಬೃಂದಾವನ ಪುರಾತನ ಇತಿಹಾಸ ಹೊಂದಿರುವ ಜಾಗೃತ ಸ್ಥಳವಾಗಿದ್ದು, ಕಲಿಯುಗದ ಕಲ್ಪವೃಕ್ಷವಾಗಿರುವ ರಾಘವೇಂದ್ರ ಸ್ವಾಮಿಗಳ ರಾಯರ ಆರಾಧನೆಯನ್ನು ಪ್ರತಿವರ್ಷ ಆಚರಿಸುತ್ತಿದ್ದು, ಈ ವರ್ಷ ಆ.೧೦, ೧೧ ಮತ್ತು ೧೨ರಂದು ೩೦೫ನೇ ವರ್ಷದ ಆರಾಧನಾ ಮಹೋತ್ಸವವು ಶ್ರೀಮಠದಲ್ಲಿ ವಿಜೃಂಭಣೆಯಿಂದ ಆಚರಿಸುವ ನಿಟ್ಟಿನಲ್ಲಿ ಎಲ್ಲ ಸಮಾಜ ಬಾಂಧವರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಶ್ರೀಮಠದ ಧರ್ಮದರ್ಶಿ ಹನುಮಂತಾಚಾರ್ಯ ಹೊಂಬಳ ಹೇಳಿದರು. ಸೋಮವಾರ ಪಟ್ಟಣದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆರಾಧನೆಯ ಕುರಿತು ವಿಪ್ರಬಾಂಧವರ ಮತ್ತು ಭಕ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ದಿ.೧೨ರಂದು ಬೆಳಗ್ಗೆ ೧೦ ಗಂಟೆಗೆ ರಾಘವೇಂದ್ರ ಸ್ವಾಮಿಗಳ ರಥೋತ್ಸವವು ಸಕಲ ವಾಧ್ಯ ವೈಭವ, ಭಜನೆಗಳಿಂದ ನೆರವೇರಲಿದ್ದು, ಸಕಲರು ಪ್ರತಿವರ್ಷದಂತೆ ಯಶಸ್ವಿಗೊಳಿಸುತ್ತಿರುವ ಆರಾಧನೆ ಕಾರ್ಯಕ್ರಮವು ಈ ವರ್ಷವು ಸಾಂಗವಾಗಿ ನೆರವೇರಿಸುವ ಸಂಕಲ್ಪ ಮಾಡಿ ಯಶಸ್ವಿಗೊಳಿಸುವವಲ್ಲಿ ಸಹಕಾರ ನೀಡುವಂತೆ ಮನವಿ ಮಾಡಿದರು.ಸಮಾಜದ ಹಿರಿಯ ಮುಖಂಡ ವಿ.ಎಲ್. ಪೂಜಾರ ಮತ್ತು ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನೀಸ್, ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಕೃಷ್ಣ ಕುಲಕರ್ಣಿ ಮಾತನಾಡಿ, ಬ್ರಾಹ್ಮಣ ಸಮಾಜದೊಂದಿಗೆ ಎಲ್ಲ ಸಮಾಜ ಬಾಂಧವರು ಸಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದು, ಸೇವೆ ಮಾಡಿದವರಿಗೆ ಇಷ್ಟಾರ್ಥ ಈಡೇರಿಸುವ ರಾಯರ ಕಾರ್ಯಕ್ರಮಕ್ಕೆ ಸಮಾಜ ಬಾಂಧವರು ಪಾಲ್ಗೊಂಡು ಯಶಸ್ವಿಗೊಳಿಸುವ ಭರವಸೆ ನೀಡಿದರು.ಸಭೆಯಲ್ಲಿ ವೆಂಕಟೇಶ ಗುಡಿ, ಡಿ.ಪಿ.ಹೇಮಾದ್ರಿ, ನಾರಾಯಣಭಟ್ ಪುರಾಣಿಕ, ಎಸ್.ಜಿ.ಹೊಂಬಳ, ಅರವಿಂದ ದೇಶಪಾಂಡೆ, ಎ.ಪಿ.ಕುಲಕರ್ಣಿ, ವರದೇಂದ್ರ ಪುರೋಹಿತ್, ಕೆ.ಎಸ್.ಕುಲಕರ್ಣಿ, ಬಿ.ಕೆ.ಕುಲಕರ್ಣಿ, ಅನಿಲ ಕುಲಕರ್ಣಿ, ಕೃಷ್ಣಕುಮಾರ ಕುಲಕರ್ಣಿ, ದಿಗಂಬರ ಪೂಜಾರ, ಗುರಣ್ಣ ಪಾಟೀಲಕುಲಕರ್ಣಿ, ರಾಘವೇಂದ್ರ ಪೂಜಾರ, ಶ್ರೀಕಾಂತ ಪೂಜಾರ, ಆರ್.ಎನ್. ಪಂಚಬಾವಿ, ರಮೇಶ ತೊರಗಲ್, ಬಾಬು ಅಳವಂಡಿ, ಮಂಜುನಾಥ ವಂಟಿ, ಮುಂತಾದವರು ಭಾಗವಹಿಸಿ ಸಲಹೆ ಸೂಚನೆ ನೀಡಿದರು.