ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕಲ್ಲಳ್ಳಿಯಲ್ಲಿ ಶ್ರೀ ಶಿವಗಂಗಾ ಯೋಗ ಕೇಂದ್ರದ ‘ಸಂಪೂರ್ಣ ಯೋಗ ಆರೋಗ್ಯ ಧಾಮ’ ಆವರಣದಲ್ಲಿ ಇರುವ ಧ್ಯಾನಾಸಕ್ತ ಆದಿ ಯೋಗಿ ಶಿವನ ಮೂರ್ತಿಗೆ ಅರ್ಚನೆ, ಕ್ಷೀರಾಭಿಷೇಕ, ಬಿಲ್ವಾರ್ಚನೆ ಹಾಗೂ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶಾದ್ಯಂತ ಸಡಗರ ಸಂಭ್ರಮದಿಂದ ಮಹಾಶಿವರಾತ್ರಿಯನ್ನು ಭಕ್ತಿಯಿಂದ ಆಚರಣೆ ಮಾಡಲಾಗುತ್ತಿದೆ. ಯೋಗ, ಪ್ರಾಣಾಯಾಮ, ಧ್ಯಾನದ ಜೊತೆಗೆ ಶಿವನ ಪೂಜೆಯು ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ನೀಡುತ್ತದೆ. ಇಂತಹ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳು ನಮ್ಮಲ್ಲಿ ಜೀವನೋತ್ಸಾಹ ಹೆಚ್ಚಿಸುತ್ತವೆ ಎಂದು ತಿಳಿಸಿದರು.ಟ್ರಸ್ಟಿ, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ ಅವರು ಯೋಗ ಕೇಂದ್ರದ ಎಲ್ಲಾ ಶಿಬಿರಾರ್ಥಿಗಳಿಗೆ ಹಾಗೂ ಯೋಗಪಟುಗಳಿಗೆ ಶಿವರಾತ್ರಿ ಹಬ್ಬದ ಶುಭಾಶಯಗಳು ತಿಳಿಸಿ ಶಿವಪೂಜೆಯಲ್ಲಿ ದಂಪತಿ ಸಮೇತ ಪಾಲ್ಗೊಂಡಿದ್ದರು. ಪ್ರೊ. ಎ.ಎಸ್.ಚಂದ್ರಶೇಖರ್, ಭಾರತಿ ಚಂದ್ರಶೇಖರ್ ಶಿವಪೂಜೆಯಲ್ಲಿ ಪಾಲ್ಗೊಂಡಿದ್ದರು.
ಯೋಗ ಶಿಕ್ಷಣಾರ್ಥಿಗಳೇ ತಯಾರಿಸಿದ ಸುಂದರವಾದ ಎಕ್ಕದ ಹೂವಿನ ಮಾಲೆ ಬಹುಆಕರ್ಷಿತವಾಗಿತ್ತು. ಅಭಿಷೇಕಗೊಂಡು ಭಸ್ಮ, ಗಂಧ, ಅರಿಶಿಣ, ಕುಂಕುಮ, ಬಿಲ್ವಪತ್ರೆ ಪುಷ್ಪಗಳಿಂದ ಅಲಂಕೃತವಾಗಿದ್ದ ಧ್ಯಾನಸ್ಥ ಶಿವನ ಮೂರ್ತಿ ದರ್ಶನ ಆಕರ್ಷಕವಾಗಿತ್ತು. ಬ್ರಾಹ್ಮಿ ಕಾಲದಲ್ಲೇ ಯೋಗ ಶಿಕ್ಷಣಾರ್ಥಿಗಳಿಂದ ಸಾಮೂಹಿಕ ಭಜನೆ ಭಕ್ತಿಗೀತೆಗಳಿಂದ ಮಹಾಶಿವರಾತ್ರಿಯಂದು ಭಕ್ತಿ ಸಮರ್ಪಣೆ ಆರಂಭವಾಗಿತ್ತು.
ಯೋಗಾಚಾರ್ಯ ಡಾ.ಸಿ.ವಿ.ರುದ್ರರಾಧ್ಯ, ಯೋಗ ಕೇಂದ್ರದ ಕಾರ್ಯದರ್ಶಿ ಎಚ್.ಎಮ್. ಚಂದ್ರಶೇಖರಯ್ಯ, ಯೋಗ ಶಿಕ್ಷಕರಾದ ಕಾಟನ್ ಜಗದೀಶ್, ನೀಲಕಂಠ ರಾವ್, ಜಿಎಸ್ ಓಂಕಾರ್ ಮೂರ್ತಿ, ಪರಿಸರ ನಾಗರಾಜ್. ರೋಟರಿ ಜಿ.ವಿಜಯಕುಮಾರ್. ವಿಜಯ ಬಾಯರ್, ನಾಗರತ್ನಮ್ಮ, ಯೋಗಪಟುಗಳು ಇದ್ದರು.