ಭಗವಂತನನ್ನು ಗುಡಿಗಳಿಗೆ ಸೀಮಿತಗೊಳಿಸದೆ ಪೂಜಿಸಿ: ಮಲ್ಲಿಕಾರ್ಜುನ್

KannadaprabhaNewsNetwork |  
Published : Apr 29, 2026, 01:45 AM IST
28ಕೆಎಂಎನ್ ಡಿ19 | Kannada Prabha

ಸಾರಾಂಶ

ಸತ್ಯ, ಧರ್ಮ, ದಯೆ ಮತ್ತು ಪ್ರೀತಿ ಎಂಬ ಮೌಲ್ಯದೊಂದಿಗೆ ಬದುಕಿದಾಗ ಜೀವನವೇ ದೇಗುಲವಾಗಲಿದೆ. ನೂತನ ದೇಗುಲ ನಿರ್ಮಾಣಗಳು ಗ್ರಾಮದಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸಲಿದೆ. ದೇಗುಲದಲ್ಲಿ ಪರಮಾತ್ಮನ ನೋಡಿದರೆ ಸಾಲದು, ಮನೆಯಲ್ಲಿಯೂ ತಂದೆ-ತಾಯಿಗಳನ್ನು ದೇವರಂತೆ ಕಂಡು ಗೌರವಿಸಿ ಸತ್ಕರಿಸಿ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಭಗವಂತನನ್ನು ಕೇವಲ ಗುಡಿಗಳಿಗೆ ಸೀಮಿತಗೊಳಿಸದೆ ಪರಮಾತ್ಮನಾಗಿ ಆತ್ಮದಲ್ಲಿ ಪ್ರತಿಷ್ಠಾಪಿಸಿ ಪೂಜಿಸಿದಾಗ ಮಾತ್ರ ದೇವಾಲಯಕ್ಕೆ ಅರ್ಥ ಸಿಗಲಿದೆ ಎಂದು ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.

ಗೌಡೇನಹಳ್ಳಿಯಲ್ಲಿ ಶ್ರೀಸಂತ್ಯಮ್ಮದೇವಿ ನೂತನ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ದೇಗುಲ ಅಭಿವೃದ್ಧಿಗೆ ಧನ ಸಹಾಯ ನೀಡಿ ಮಾತನಾಡಿ, ದೇವರು ಪ್ರತಿಯೋರ್ವರ ಹೃದಯದಲ್ಲಿದ್ದು, ಇಂತಹ ಸತ್ಕಾರ್ಯಗಳಿಗೆ ಯುವಕರು ಭಾಗಿಯಾಗುವುದರಿಂದ ಸಧೃಡ ಸಮಾಜ ನಿರ್ಮಾಣವಾಗಲಿದೆ. ಭಗವಂತನ ನಾಮಸ್ಮರಣೆಯಿಂದ ಪಾಪಕರ್ಮಗಳಿಂದ ವಿಮುಕ್ತರಾಗಬಹುದು ಎಂದರು.

ಸತ್ಯ, ಧರ್ಮ, ದಯೆ ಮತ್ತು ಪ್ರೀತಿ ಎಂಬ ಮೌಲ್ಯದೊಂದಿಗೆ ಬದುಕಿದಾಗ ಜೀವನವೇ ದೇಗುಲವಾಗಲಿದೆ. ನೂತನ ದೇಗುಲ ನಿರ್ಮಾಣಗಳು ಗ್ರಾಮದಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸಲಿದೆ. ದೇಗುಲದಲ್ಲಿ ಪರಮಾತ್ಮನ ನೋಡಿದರೆ ಸಾಲದು, ಮನೆಯಲ್ಲಿಯೂ ತಂದೆ-ತಾಯಿಗಳನ್ನು ದೇವರಂತೆ ಕಂಡು ಗೌರವಿಸಿ ಸತ್ಕರಿಸಿ, ಆರೈಕೆ ಮಾಡಿದಾಗ ಭಗವಂತ ಮೆಚ್ಚಿ ಆಶೀರ್ವದಿಸಲಿದ್ದಾನೆ ಎಂದರು.

ನಮ್ಮ ಹಿರಿಯರು ಹಾಕಿಕೊಟ್ಟ ಸನಾತನ ಸಂಸ್ಕೃತಿ, ದೇಗುಲ ಪೂಜೆ, ಹಬ್ಬ ಹರಿದಿನಗಳು ಒಗ್ಗಟ್ಟಿನ ಸಂಕೇತವಾಗಿದೆ. ದ್ವೇಷಾಸೂಯೆ ಮರೆತು ಪ್ರೀತಿ ವಿಶ್ವಾಸ, ಶಾಂತಿ ಕಾಪಾಡುವ ಇಂತಹ ಸಂಸ್ಕೃತಿಯನ್ನು ಯುವ ಪೀಳಿಗೆ, ಮಕ್ಕಳಿಗೆ ಕಲಿಸುವ ಪರಿಪಾಠ ಮುಂದುವರೆಯಬೇಕು ಎಂದರು.

ಬ್ರಾಹ್ಮಿ ಮುಹೂರ್ತದಲ್ಲಿ ಗ್ರಾಮದ ಮಹಿಳೆಯರು ಮುಖಂಡರೊಂದಿಗೆ ವೇದಘೋಷ, ಮಂಗಳವಾದ್ಯದೊಂದಿಗೆ ಪವಿತ್ರಗಂಗೆಯನ್ನು ಪೂರ್ಣಕುಂಭದೊಂದಿಗೆ ಮೆರವಣಿಗೆ ಮೂಲಕ ತರಲಾಯಿತು.

ಪೂಜಾ ಕೈಂಕರ್ಯದಲ್ಲಿ ಗಣಪತಿ ಪೂಜೆ, ಪೂರ್ಣಾ ನಾಂದಿ, ಪಂಚಕಲಶ, ನವಗ್ರಹ ಅಷ್ಟದಿಕ್ಪಾಲಕ, ಅಷ್ಟಲಕ್ಷ್ಮೀ ಹೋಮ ಹವನಾದಿ, ವಿಗ್ರಹ ಪ್ರತಿಷ್ಠಾಪನೆ ಅಭಿಷೇಕ, ನೇತ್ರೋಪಾಲನ, ಪೂರ್ಣಾಹುತಿ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ, ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು. ವಿಮಾನಗೋಪುರ ಕಳಸ ಪ್ರತಿಷ್ಠಾಪನೆ, ಕಲಾಕರ್ಷಣೆ, ಕಲಶಾಭಿಷೇಕ, ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ಶ್ರದ್ಧಾಭಕ್ತಿಯಿಂದ ನೆರವೇರಿತು.

ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್. ಪ್ರಭಾಕರ್, ತಾಪಂ ಮಾಜಿ ಉಪಾಧ್ಯಕ್ಷ ರವಿ, ಮಾಜಿ ಸದಸ್ಯ ಧನಂಜಯ, ಸ್ವಾಮಿ, ವೆಂಕಟೇಶ್, ಕೃಷ್ಣೇಗೌಡ, ರಾಜು, ಸತೀಶ್, ರಮೇಶ್, ಯೋಗೇಶ್, ನಾರಾಯಣ್, ನಾಗೇಂದ್ರ, ಆಶ್ವಥೇಗೌಡ, ಚಂದ್ರೇಗೌಡ, ಮಹೇಶ್, ಚೇತನ್‌. ಗ್ರಾಮ ಮುಖಂಡರು, ಅಂಚೆಬೀರನಹಳ್ಳಿ, ಬೋಳಮಾರನಹಳ್ಳಿ, ಮಂಡಲೀಕನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮದ ಸದ್ಭಕ್ತರು, ವಿವಿಧ ಪಕ್ಷದ ಜನಪ್ರತಿನಿಧಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒತ್ತಡ ನಿರ್ವಹಣೆಗೆ ವ್ಯಕ್ತಿತ್ವ ವಿಕಸನ ಪೂರಕ
ಕನ್ನಡ ಪಠ್ಯಪುಸ್ತಕ ಸರಳೀಕರಣಕ್ಕೆ ಇಲಾಖೆ ಚಿಂತನೆ