ಕನ್ನಡಪ್ರಭ ವಾರ್ತೆ ಜಮಖಂಡಿ
ಗುರು ಪೀಠದಲ್ಲಿ ಆಚರಿಸುವ ನವರಾತ್ರಿ ನಾಡಹಬ್ಬಭಕ್ತರ ಕಲ್ಯಾಣಕ್ಕಾಗಿ ಜನಮನದ ಶಾಂತಿ ಸಾಮರಸ್ಯಕ್ಕಾಗಿ ನಾಡಿನ ನಾನಾ ಭಾಗಗಳಲ್ಲಿ ವಿಧಿವತ್ತಾಗಿ ಆಚರಿಸುತ್ತ ಬಂದಿರುವ ಇತಿಹಾಸವಿದೆ. ಜಮಖಂಡಿ ನಗರದಲ್ಲಿ ಅದ್ಧೂರಿಯಾಗಿ ದಸರಾ ಧರ್ಮ ಸಮ್ಮೇಳನ ಜರುಗುತ್ತಿರುವುದು ತಮಗೆ ಅಪಾರ ಹರುಷ ತಂದಿದೆ ಎಂದರು.
ಜಮಖಂಡಿಯ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಮರೆಗುದ್ದಿ ಅಡವಿಸಿದ್ದೇಶ್ವರ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಉಪನ್ಯಾಸ ಹಿಪ್ಪರಗಿಯ ಪ್ರೊ.ಸಿ.ಜಿ. ಮಠಪತಿ ಮಾತನಾಡಿ, ಶಕ್ತಿ ಎಂದರೆ ಅಧಿಕಾರದ ಪ್ರದರ್ಶನವಲ್ಲ. ಅದು ರಕ್ಷಣೆಗೆ ಬಳಕೆಯಾಗುವ ಸಾಮರ್ಥ್ಯ. ಶಕ್ತಿ ಎಂದರೆ ದ್ವೇಷ ಹರಡುವುದಲ್ಲ. ಪ್ರೀತಿ ಮತ್ತು ಸಾಮರಸ್ಯ ಬೆಳೆಸುವ ಮನೋಬಲ ಕುಗ್ಗಿದವರನ್ನು ಮೇಲೆತ್ತುವ ಉದಾತ್ತ ಗುಣ. ಇಂತಹ ಸಾತ್ವಿಕ ಶಕ್ತಿಯೇ ವ್ಯಕ್ತಿ ಮತ್ತು ಸಮಾಜವನ್ನು ಉನ್ನತ ಮಟ್ಟಕ್ಕೆ ಕೊಂಡೊಯುತ್ತವೆ. ನವರಾತ್ರಿಯಲ್ಲಿ ನವಶಕ್ತಿಯರ ಆರಾಧನೆ ನಡೆಯುತ್ತದೆ. ಶೈಲ ಪುತ್ರಿ ಬ್ರಹ್ಮಚಾರಿಣಿ ಚಂದ್ರಘಟಾ ಕುಷ್ಮಾಂಡ ಸ್ಕಂದಮಾತೆ ಕಾತ್ಯಾಯಿನಿ ಕಾಳರಾತ್ರಿ ಮಹಾಗೌರಿ ಮತ್ತು ಸಿದ್ಧಿದಾತ್ರಿ ಎಂಬ ಹೆಸರಿನಿಂದ ದೇವಿಯನ್ನು ಪೂಜಿಸಿ ಪವಿತ್ರರಾಗುವ ನಾಡಹಬ್ಬವಿದು. ನಮ್ಮೆಲ್ಲರ ಬಾಳಿಗೆ ಜ್ಞಾನದ ಜ್ಯೋತಿ ಸನ್ಮಾರ್ಗವನ್ನು ತೋರಲಿ ಎಂದು ಹೇಳಿದರು.ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಶಾಸಕ ನಾಡೋಜ ಜಗದೀಶ ಗುಡಗುಂಟಿ ಮಾತನಾಡಿ, ದಸರಾ ಧರ್ಮ ಸಮ್ಮೇಳನ ಸಕಲರ ಬಾಳಿನಲ್ಲಿ ಉದಾತ್ತ ಮೌಲ್ಯಗಳನ್ನು ಬೋಧಿಸುವುದರ ಮೂಲಕ ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕೆ ಈ ಸಮಾರಂಭ ಸಾಕ್ಷಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಗುರುರಕ್ಷೆ: ಶರಣಬಸವ ಶಿವಾಚಾರ್ಯ ಸ್ವಾಮಿಗಳು ಹಿರೇಮಠ ಬನಹಟ್ಟಿ, ಜಮಖಂಡಿಯ ರುದ್ರಾವಧೂತ ಮಠದ ವೇದಾಂತಾಚಾರ್ಯ ಸಹಜಾನಂದ ಅವಧೂತರು, ಜಿ.ಕೆ. ಮಠದ ಹಿರಿಯ ವಕೀಲ ನಾಗಪ್ಪ ಗದಿಗೆಪ್ಪ ಸನದಿ, ದೇವಲ ಅಪ್ಪಾಸಾಹೇಬ ದೇಸಾಯಿ, ಗುಡೂರ-ಇಳಕಲ್ಲದ ಸುಶೀಲ ಅನ್ನದಾನ ಸ್ವಾಮೀಮಿ, ಸುನಂದಮ್ಮತಾಯಿ ಸಾರಂಗಮಠ ಶೂರ್ಪಾಲಿ ಸೇರಿದಂತೆ ಹಲವಾರು ಗಣ್ಯರಿಗೆ ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.
ಸಮಾರಂಭದ ನಂತರ ಜಗದ್ಗುರುಗಳಿಗೆ ಗೌರವ ಸಮರ್ಪಣೆ ಜರುಗಿ ಬಂದ ಭಕ್ತರಿಗೆ ಅನ್ನ ದಾಸೋಹ ಜರುಗಿತು. ಬೆಳಗ್ಗೆ ಮೈಗೂರ ರಸ್ತೆಯಲ್ಲಿರುವ ಕಲೂತಿ ಕಲ್ಯಾಣ ಮಂಟಪದಲ್ಲಿ ಲೋಕ ಕಲ್ಯಾಣ ಮತ್ತು ವಿಶ್ವಶಾಂತಿ ಗಾಗಿ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಭಕ್ತರಿಗೆ ಶುಭ ಹಾರೈಸಿದರು. ಮಧ್ಯಾಹ್ನ ಜಗದ್ಗುರುಗಳು ವೀರಸಿಂಹಾಸನಕ್ಕೆ ಪೂಜೆ ಸಲ್ಲಿಸಿದರು.