ಕನ್ನಡಪ್ರಭ ವಾರ್ತೆ ಚಾಮರಾಜನಗರ
ರಾಜ್ಯ ಸರ್ಕಾರದಿಂದ ನಡೆಸುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಗೌಡ ಲಿಂಗಾಯತ ಎಂದು ಜಿಲ್ಲೆಯ ಲಿಂಗಾಯತ ಸಮುದಾಯದವರು ಬರೆಸಬೇಕು ಎಂದು ಮುಖಂಡ ಅಮ್ಮನಪುರ ಮಲ್ಲೇಶ್ ಅವರು ಮನವಿ ಮಾಡಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಲಿಂಗಾಯತ ಜಾತಿಯಲ್ಲಿ ಉಪಜಾತಿ ಕಾಲಂನಲ್ಲಿ ಗೌಡ ಲಿಂಗಾಯತ ಎಂದೇ ಬರೆಸಬೇಕು. ಇಲ್ಲದಿದ್ದರೆ, ಉತ್ತರ ಕರ್ನಾಟಕದಲ್ಲಿರುವ ಗೌಡ ಲಿಂಗಾಯತರು ಓಬಿಸಿ ಸೌಲಭ್ಯವನ್ನು ಹೆಚ್ಚಾಗಿ ಪಡೆದುಕೊಳ್ಳಲಿದ್ದು, ಉಳಿದ ಲಿಂಗಾಯತರು ಕಡಿಮೆ ಸೌಲಭ್ಯ ಪಡೆಯಬೇಕಾಗುತ್ತದೆ ಎಂದರು.
ಇತ್ತೀಚೆಗೆ ಪರಿಶಿಷ್ಠ ಜಾತಿಯ ಒಳಮೀಸಲಾತಿ ಸಮೀಕ್ಷೆ ನಡೆದ ರೀತಿಯಲ್ಲೇ ಹಿಂದೂಳಿದ ವರ್ಗಗಳ ಜಾತಿ ಸಮೀಕ್ಷೆ ನಡೆಸಲಾಗುತ್ತಿದೆ. ಹಿಂದುಳಿದ ವರ್ಗಗಳ ಜಾತಿಯಲ್ಲಿರುವ ಲಿಂಗಾಯತ ಜಾತಿಯವರು ಉಪಜಾತಿಯ ಕಾಲಂನಲ್ಲಿ ಗೌಡ ಲಿಂಗಾಯತ ಎಂದು ಬರೆಸಿ ಒಳ ಮೀಸಲಾತಿಯನ್ನು ಹೆಚ್ಚಾಗಿ ಪಡೆದುಕೊಳ್ಳಲು ಮುಂದಾಗಬೇಕು ಎಂದರು.ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಸಮೀಕ್ಷೆ ನಡೆಸಲಾಗುತ್ತಿದೆ. ಇದು ಜಾತಿ ಗಣತಿ ಅಲ್ಲ. ಜಾತಿ ಗಣತಿ ನಡೆಯುವುದು ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರ ನಡೆಸುವುದಿಲ್ಲ ಎಂದರು.
ಜೂಜಾಟಕ್ಕೆ ದಂಧೆಗೆ ಕಡಿವಾಣ ಇಲ್ಲ:ಜಿಲ್ಲೆಯಲ್ಲಿ ಅನಾಧಿಕೃತವಾಗಿ ಕ್ಲಬ್‌ಗಳು ನಡೆಯುತ್ತಿದ್ದು, ಜೂಡಾಟಕ್ಕೆ ಕಡಿವಾಣ ಹಾಕುವಲ್ಲಿ ಪೊಲೀಸ್ ಇಲಾಖೆ ಹಾಗೂ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಇಸ್ಪೀಟ್ ಕ್ಲಬ್‌ಗಳು ಹೆಚ್ಚಾಗಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಸಹಕಾರವಿದೆ. ಇಸ್ಪೀಟ್ ಕ್ಲಬ್‌ಗಳು ಕಡಿವಾಣಕ್ಕೆ ಮುಂದಾಗದೇ ಶಾಮೀಲ್ ಆಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ ಎಂದು ಹೇಳಿದರು.ಶಾಸಕರು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಮುಂದಾಗಲ್ಲ, ಇಸ್ಪೀಟ್ ದಂಧೆಯನ್ನಾದರೂ ನಿಲ್ಲಿಸಿಲ್ಲ, ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆ ಹಾಗೂ ಜನಪ್ರತಿನಿಧಿಗಳು ಇಸ್ಪೀಟ್ ದಂಧೆಯನ್ನು ನಿಲ್ಲಿಸದಿದ್ದರೆ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮುದ್ದಪ್ಪ, ಗಜೇಂದ್ರ, ಸತೀಶ್, ಚನ್ನಂಜಪ್ಪ, ಮಹೇಶ್, ಸ್ವಾಮಿ ಇದ್ದರು.1ಸಿಎಚ್‌ಎನ್51
ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಮುಖಂಡ ಅಮ್ಮನಪುರ ಮಲ್ಲೇಶ್ ಅವರು ಸುದ್ದಿಗೋಷ್ಠಿ ನಡೆಸಿದರು.