ಗದಗ: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕೈಗೊಳ್ಳಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ (ಜಾತಿ) ಸಮೀಕ್ಷೆಗೆ ಮನೆಮನೆಗೆ ಸಮೀಕ್ಷೆದಾರರು ಬಂದಾಗ ಕುಡು ಒಕ್ಕಲಿಗ ಸಮಾಜ ಬಾಂಧವರು ಧರ್ಮದ ಕಾಲಂನಲ್ಲಿ ಲಿಂಗಾಯತವೆಂದು ಉಪಜಾತಿ ಕಾಲಂದಲ್ಲಿ ಲಿಂಗಾಯತ ಕುಡು ಒಕ್ಕಲಿಗ ಎಂದು ಬರೆಸಬೇಕೆಂದು ಅಖಿಲ ಕರ್ನಾಟಕ ಲಿಂಗಾಯತ ಕುಡು ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಶಿವಕುಮಾರ ಪಾಟೀಲ ಹೇಳಿದರು.
ನಗರದ ಕುಡು ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಅಖಿಲ ಕರ್ನಾಟಕ ಲಿಂಗಾಯತ ಕುಡು ಒಕ್ಕಲಿಗರ ಸಂಘದ ರಾಜ್ಯ ಕಾರ್ಯಕಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಾತಿ ಸಮೀಕ್ಷೆಯ ವಿಷಯದಲ್ಲಿ ಸಮಾಜ ಬಾಂಧವರು ಯಾವುದೇ ರೀತಿಯ ಗೊಂದಲ ಮಾಡಿಕೊಳ್ಳಬಾರದು. ಧರ್ಮದ ಕಾಲಂನಲ್ಲಿ ಲಿಂಗಾಯತವೆಂದು ಉಪಜಾತಿ ಕಾಲಂನಲ್ಲಿ ಲಿಂಗಾಯತ ಕುಡು ಒಕ್ಕಲಿಗ ಎಂಬುದನ್ನು ಸ್ಪಷ್ಟವಾಗಿ ಬರೆಯಿಸಬೇಕು, ಬರೆದದ್ದನ್ನು ಓದಿ-ಕೇಳಿ ಖಾತ್ರಿ ಮಾಡಿಕೊಳ್ಳಬೇಕು ಎಂದರು.
ಅಖಿಲ ಭಾರತ ಲಿಂಗಾಯತ ಕುಡು ಒಕ್ಕಲಿಗರ ಮಹಾಸಭೆಯ ಅಧ್ಯಕ್ಷ ಬಿ.ಬಿ. ಪಾಟೀಲ, ಕಾರ್ಯದರ್ಶಿ ಎ.ಎಸ್. ಪಾಟೀಲ ಮಾತನಾಡಿ, ಈ ಸಮೀಕ್ಷೆಯಲ್ಲಿ ಸಮಾಜ ಬಾಂಧವರು ಸಮೀಕ್ಷೆ ಮಾಡಲು ಬಂದವರಿಗೆ ಸರಿಯಾದ ಮಾಹಿತಿ ನೀಡಬೇಕೆಂದರು.ಈ ವೇಳೆ ನಿಂಗಣ್ಣ ಹಳ್ಳದ, ರವಿ ಕುಡುಒಕ್ಕಲಿಗಾರ, ಅನಿಲ ಪಾಟೀಲ, ಯೋಗಪ್ಪ ದೇವೂರ, ದೊಡ್ಡದಾಸಪ್ಪ, ಮಲ್ಲಿಕಾರ್ಜುನ, ಸುರೇಶಗೌಡ ಪಾಟೀಲ, ಎಸ್.ಎ. ಬಿರಾದಾರ, ಬಸವರಾಜಪ್ಪ ಪ್ರಕಾಶಗೌಡ, ಚರಣ ಗೋಡಿ, ಹಾಲೇಶ ಉಪನಾಳ, ಎಲ್. ಶಿವಕುಮಾರ ವಾಮದೇವ, ಸುಭಾಷ ಹೊಂಬಳ, ಈರಪ್ಪಣ್ಣ ಬಿಸನಹಳ್ಳಿ, ಯಲ್ಲಪ್ಪ ನ್ಯಾಮಗೌಡರ, ಅಪ್ಪಣ್ಣ ಚಿಕ್ಕನಗೌಡರ, ಎಂ.ಜಿ. ಗಚ್ಚಣ್ಣವರ, ಸಿದ್ದರಾಮಪ್ಪ ಗೊಜನೂರ, ಪರಮೇಶ್ವರಪ್ಪ ಜಂತ್ಲಿ, ಎನ್.ಐ. ಗೌರಿಪುರ, ಬಸವರಾಜ ಹರಿವಾಳ, ನಾಗಪ್ಪ ಸಂಗಟಿ, ವಿ.ಜಿ. ಕನಾಜ, ಬಿ.ಎ. ತಿಮ್ಮಗೊಂಡನವರ, ಶಿವನಗೌಡ ಪಾಟೀಲ, ಬಾಳಪ್ಪ ಸೋಮಗೊಂಡ ಇದ್ದರು. ಎಸ್.ಎಸ್. ಸೋಮಗೊಂಡ ಪ್ರಾರ್ಥಿಸಿದರು. ಕಾರ್ಯದರ್ಶಿ ಶರಣಪ್ಪ ದಿಡ್ಡಿಮನಿ ಸ್ವಾಗತಿಸಿ, ವಂದಿಸಿದರು.