ಜಾತಿಗಣತಿಯಲ್ಲಿ ಕ್ರಮ ಸಂಖ್ಯೆ 61ರಲ್ಲಿ ಮಾದಿಗ ಎಂದು ಬರೆಸಿ: ಸೋಮು ಚೂರಿ

KannadaprabhaNewsNetwork |  
Published : May 04, 2025, 01:38 AM IST
ಸೋಮು ಚೂರಿ | Kannada Prabha

ಸಾರಾಂಶ

ಒಳಮೀಸಲಾತಿ ಜಾರಿಗಾಗಿ ಸುದೀರ್ಘವಾಗಿ ನಡೆದ ಹೋರಾಟದ ಫಲವಾಗಿ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ನೀಡಲು ಜಾತಿಗಣತಿ ಸಮೀಕ್ಷೆ ನಡೆಸಿದ್ದು. ಸಮಾಜದವರು ಜಾತಿ ಕಾಲಂ 61ರಲ್ಲಿ ಮಾದಿಗ ಎಂದು ನೊಂದಾಯಿಸಬೇಕೆಂದು ಮಾದಿಗ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸೋಮು ಚೂರಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಒಳಮೀಸಲಾತಿ ಜಾರಿಗಾಗಿ ಸುದೀರ್ಘವಾಗಿ ನಡೆದ ಹೋರಾಟದ ಫಲವಾಗಿ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ನೀಡಲು ಜಾತಿಗಣತಿ ಸಮೀಕ್ಷೆ ನಡೆಸಿದ್ದು. ಸಮಾಜದವರು ಜಾತಿ ಕಾಲಂ 61ರಲ್ಲಿ ಮಾದಿಗ ಎಂದು ನೊಂದಾಯಿಸಬೇಕೆಂದು ಮಾದಿಗ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸೋಮು ಚೂರಿ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಾದಿಗ ಸಂಘಟನೆಗಳು ಒಕ್ಕೂಟದ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿನ ಎಲ್ಲ ಗ್ರಾಮೀಣ ಭಾಗದಲ್ಲಿ ಜಾತಿಗಣತಿ ಜಾಗೃತಿ ಮೂಡಿಸಲಾಗಿದೆ ಎಂದ ಅವರು, ಜಾತಿ ಕಾಲಂನಲ್ಲಿ ಮಾದಿಗ ಎಂದು ಬರೆಸಬೇಕು. ಬೇರೆ ಯಾವುದೇ ಜಾತಿ ಉಪಜಾತಿ ಹೆಸರು ಬರಿಸಿದರೆ ನಮ್ಮ ಮುಂದಿನ ಪೀಳಿಗೆಯು ಸೌಲಭ್ಯ ಹಾಗೂ ಮೀಸಲಾತಿಯಿಂದ ವಂಚಿತರಾಗುತ್ತಾರೆ.

ಮೇ 5ರಿಂದ ಒಳ ಮೀಸಲಾತಿ ಸಮೀಕ್ಷೆ ಆರಂಭವಾಗಲಿದ್ದು, ಸಮೀಕ್ಷೆದಾರರು ಮನೆ ಮನೆಗೆ ತೆರಳಿ ಮಾಹಿತಿ ಪಡೆಯಲಿದ್ದಾರೆ. ಸಮಾಜಕ್ಕೆ ಗಣತಿ ಬಗ್ಗೆ ಮಾಹಿತಿ ಕೊಡುವುದು ನಮ್ಮ ಜವಾಬ್ದಾರಿಯಾಗಿದೆ. ಸಮಾಜದ ಜನರು ಗೊಂದಲಕ್ಕೆ ಒಳಗಾಗದೆ ಕ್ರಮ ಸಂಖ್ಯೆ 61ರಲ್ಲಿ ಮಾದಿಗ ಎಂದು ಬರೆಸಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿ ಸುಮಾರು 30 ವರ್ಷಗಳಿಂದ ಸುದೀರ್ಘ ಹೋರಾಟ ನಡೆದಿದೆ. ಮೀಸಲಾತಿ ಜಾರಿಯಾಗಬೇಕೆಂಬ ಉದ್ದೇಶ ಹಾಗೂ ಕನಸು ಹೊಂದಲಾಗಿತ್ತು. ಸೌಲಭ್ಯ ವಂಚಿತವಾದ ಮಾದಿಗ ಸಮಾಜದಿಂದ ಒಳಮೀಸಲಾತಿ ಜಾರಿಗೆ ಹೋರಾಟ ನಡೆಯಿತು. ಆಂಧ್ರ, ತೆಲಂಗಾಣ ರಾಜ್ಯಗಳಲ್ಲಿಯೂ ಈ ಬಗ್ಗೆ ಹೋರಾಟ ನಡೆದಿದ್ದು. ಹೋರಾಟಕ್ಕೆ ಹೆಚ್ಚು ಶಕ್ತಿ ಬಂದಿದೆ. ಜಿಲ್ಲೆಯ ಹೋರಾಟಗಾರರು, ಸಮಾಜದ ಮುಖಂಡರು, ನಿರಂತರವಾಗಿ ಹೋರಾಟ ನಡೆಸಿದ್ದರಿಂದ ಸರ್ಕಾರ ಒಳ ಮೀಸಲಾತಿ ಜಾರಿಗೆ ಮುಂದಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ಮುಖಂಡ ಮಾದಿಗ ಸಂಘಟನೆಗಳ ಒಕ್ಕೂಟದ ಕಾರ್ಯಾಧ್ಯಕ್ಷ ಶಿವಾನಂದ ಬಿಸನಾಳ. ಉಪಾಧ್ಯಕ್ಷ ಸಿದ್ದು ಮಾದರ. ಕಾರ್ಯದರ್ಶಿ ನಾಗೇಶ ಸಿಡ್ಲನ್ನವರ. ಹಿರಿಯ ಮುಖಂಡ ಆನಂದ ಬಾಬು ಪುಜಾರಿ, ಆನಂದ ಪುಜಾರಿ (ಗಲಗಲಿ), ಗಂಗಪ್ಪ ಹದರಿಹಾಳ, ಯಲ್ಲಪ್ಪ ಸಿರಗುಪ್ಪಿ, ಮಹೇಶ ಮಾದರ, ರಮೇಶ ಅನಗವಾಡಿ, ಪರಶುರಾಮ ತಳಗೇರಿ, ಈರಪ್ಪ ಬಾಡಗಿ, ಹುಸೇನ್ ಹಾದಿಮಾನಿ, ಶ್ಯಾಮ್ ಮಾದರ, ಪ್ರಕಾಶ ಕಾತರಕಿ, ರಂಗಪ್ಪ ಹೆರಕಲ್, ರಾಜು ಚಿಕ್ಕಾಲಗುಂಡಿ, ಗೋಪಾಲ ಕೋಲೂರ, ಪ್ರವೀಣ ಮುಂಡಗನೂರ, ಸಂತೋಷ ಗುಡದಿನ್ನಿ, ದುರಗೇಶ ಸೊನ್ನ, ಶಂಕರ ನಾಗರಾಳ, ಸದಾಶಿವ ಬೂದಿಹಾಳ, ಮಹಾಂತೇಶ ಮಾದರ, ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ