ಮರಕುಟಿಕ ಜಾತಿಯ ವಕ್ರಕಂಠ ಹಕ್ಕಿ ಕೂಡ್ಲಿಗಿಗೆ ತಾತ್ಕಾಲಿಕ ವಲಸೆ

KannadaprabhaNewsNetwork |  
Published : Oct 22, 2026, 02:15 AM IST
ಯುರೋಪ್, ಏಷಿಯಾದಿಂದ ಕೂಡ್ಲಿಗಿಗೆ ಬಂದ ರೈನೆಕ್ ಪಕ್ಷಿಗಳನ್ನು ಉಪವಲಯ ಅರಣ್ಯಾಧಿಕಾರಿ ಪಿ.ಮಹೇಶ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.  | Kannada Prabha

ಸಾರಾಂಶ

ಕೊಳೆಯುತ್ತಿರುವ ಮರ ಅಥವಾ ನೆಲದ ಮೇಲೆ ಕಂಡು ಬರುವ ಈ ಹಕ್ಕಿಗಳು ಇರುವೆ, ಕೀಟ ತಿಂದು ಜೀವನ ಸಾಗಿಸುತ್ತದೆ

ಭೀಮಣ್ಣ ಗಜಾಪುರ ಕೂಡ್ಲಿಗಿ

ಯರೋಪಿಯನ್‌ ರೋಲರ್‌ ಹಕ್ಕಿ ಕೂಡ್ಲಿಗಿ ತಾಲೂಕಿನಲ್ಲಿ ಕಂಡು ಬಂದ ಬೆನ್ನೆಲೆ ಮತ್ತೊಂದು ಹಕ್ಕಿ ಕಂಡು ಬಂದಿರುವುದು ಪಕ್ಷಿ ಪ್ರಿಯರಲ್ಲಿ ಸಂತಸ ಇಮ್ಮಡಿಗೊಳಿಸಿದೆ.

ಮರಕುಟಿಕ ಜಾತಿಯ ಪಕ್ಷಿ ಭಾರತಕ್ಕೆ ಪ್ರತಿ ವರ್ಷ ತಾತ್ಕಾಲಿಕ ಅತಿಥಿಯಾಗಿ ಬಂದು ಪುನಃ ಮೂಲ ವಾಸಸ್ಥಾನಕ್ಕೆ ಹೋಗುತ್ತದೆ. ಗೂಬೆ ತರಹ ಕತ್ತನ್ನು ತಿರುಗಿಸುವುದರಿಂದ ಇದನ್ನು ವಕ್ರಕಂಠ ಎಂದು ಕರೆಯಲಾಗುತ್ತದೆ. ಯರೋಪ್‌ ಮತ್ತು ಏಷಿಯಾದ ಕೆಲವು ಪ್ರದೇಶಗಳಿಂದ ಸೆಪ್ಟಂಬರ್‌ ನಂತರ ಭಾರತದ ಕೆಲ ಭಾಗಗಳಿಗೆ ಬರುತ್ತವೆ. ಯರೋಪ್‌, ಏಷಿಯಾದಿಂದ ಈ ಹಕ್ಕಿಗಳು ಬರುವುದರಿಂದ ಯುರೇಶಿಯನ್‌ ಹಕ್ಕಿ ಎಂದು ಪಕ್ಷಿ ತಜ್ಞರು ಕರೆಯುತ್ತಾರೆ. ಈ ಹಕ್ಕಿ ತಾಲೂಕಿನ ಗುಡೇಕೋಟೆ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ಕಂಡು ಬಂದಿದೆ.

ಯುರೇಷಿಯನ್‌ ಮರಕುಟಿಕ ಹಕ್ಕಿಗಳನ್ನು ಇಂಗ್ಲಿಷ್‌ನಲ್ಲಿ ರೈನೆಕ್ ಎಂದು ಕರೆಯಲಾಗುತ್ತದೆ. ಸುಮಾರು 16-18 ಸೆಮೀ (6.3-7.1ಇಂಚು) ಉದ್ದವಿರುತ್ತದೆ ಮತ್ತು ಇತರ ಮರಕುಟಿಕಗಳಿಗಿಂತ ಚಿಕ್ಕದಾಗಿರುತ್ತವೆ ಮತ್ತು ಕಡಿಮೆ ಕಠಾರಿಯಂತಹ ಕೊಕ್ಕು ಹೊಂದಿರುತ್ತದೆ. ಅವುಗಳ ಮೇಲ್ಭಾಗ ಅಡ್ಡಪಟ್ಟಿ ಮತ್ತು ಮಚ್ಚೆಯುಳ್ಳದ್ದಾಗಿದ್ದು, ಮಚ್ಚೆಯುಳ್ಳ ಕಂದು ಬಣ್ಣದ ಛಾಯೆಗಳಲ್ಲಿ ಕೆಂಪು ಮತ್ತು ಕಪ್ಪು ಬಣ್ಣದ ಪಟ್ಟಿ ಮತ್ತು ಅಗಲವಾದ ಕಪ್ಪು ಗೆರೆ ಹೊಂದಿರುತ್ತದೆ. ಅವುಗಳ ಕೆಳಭಾಗ ಕೆನೆ ಚುಕ್ಕೆ ಹಾಗೂ ಕಂದು ಬಣ್ಣದಿಂದ ಕೂಡಿರುತ್ತದೆ.

ಕೊಳೆಯುತ್ತಿರುವ ಮರ ಅಥವಾ ನೆಲದ ಮೇಲೆ ಕಂಡು ಬರುವ ಈ ಹಕ್ಕಿಗಳು ಇರುವೆ, ಕೀಟ ತಿಂದು ಜೀವನ ಸಾಗಿಸುತ್ತದೆ. ಇವುಗಳ ಮೊಟ್ಟೆ ಬಿಳಿಯಾಗಿರುತ್ತವೆ, ಅನೇಕ ಪಕ್ಷಿಗಳು ರಂಧ್ರಗಳಲ್ಲಿ ಗೂಡು ಕಟ್ಟುವಂತೆಯೇ ಇವು ಗೂಡುಕಟ್ಟಿ ಮೇ ಮತ್ತು ಜೂನ್‌ನಲ್ಲಿ ಏಳರಿಂದ ಹತ್ತು ಮೊಟ್ಟೆ ಇಡುತ್ತವೆ. ಈ ಪಕ್ಷಿಗಳು ತಮ್ಮ ತಲೆಯನ್ನು ಸುಮಾರು 180 ಡಿಗ್ರಿಗಳಷ್ಟು ತಿರುಗಿಸುವ ಸಾಮರ್ಥ್ಯ ಹೊಂದಿವೆ. ಗೂಡಿನಲ್ಲಿ ತೊಂದರೆಗೊಳಗಾದಾಗ ಹಾವನ್ನು ಬೆದರಿಸಲು ತಲೆ ತಿರುಗಿಸುತ್ತದೆ. ಸಿಳ್ಳೆ ಹೊಡೆಯುವುದರ ಮೂಲಕ ಶತ್ರುಗಳನ್ನು ಬೆದರಿಸುತ್ತದೆ. ಆ ಕಾರಣಕ್ಕಾಗಿ ಇದನ್ನು ಕೆಲವೊಮ್ಮೆ ಹಾವು ಪಕ್ಷಿ ಎಂದು ಕರೆಯಲಾಗುತ್ತದೆ.

ನಿಜವಾದ ಮರಕುಟಿಕಗಳಂತೆ ರೈನೆಕ್ ಗಳು ದೊಡ್ಡ ತಲೆ, ಉದ್ದ ನಾಲಿಗೆ ಹೊಂದಿರುತ್ತವೆ, ಎರಡು ಕಾಲ್ಬೆರಳು ಮುಂದಕ್ಕೆ ಮತ್ತು ಎರಡು ಹಿಂದಕ್ಕೆ ತೋರಿಸುವ ಜೈಗೋಡಾಕ್ಟೈಲ್ ಪಾದ ಹೊಂದಿರುತ್ತವೆ, ಆದರೆ ನಿಜವಾದ ಮರಕುಟಿಕ ಮರಗಳನ್ನು ಹತ್ತುವಾಗ ಬಳಸುವ ಗಟ್ಟಿಯಾದ ಬಾಲಗರಿ ಇವು ಹೊಂದಿರುವುದಿಲ್ಲ, ಆದ್ದರಿಂದ ನೆಟ್ಟಗೆ ಇರುವ ಕಾಂಡಕ್ಕಿಂತ ಹೆಚ್ಚಾಗಿ ಕೊಂಬೆಯ ಮೇಲೆ ಕೂರುತ್ತವೆ. ಅವುಗಳ ಕೊಕ್ಕು ನಿಜವಾದ ಮರಕುಟಿಕಗಳಿಗಿಂತ ಚಿಕ್ಕದಾಗಿರುತ್ತವೆ, ರೈನೆಕ್ ರಂಧ್ರಗಳನ್ನು ಮಾಡುವ ಬದಲು ಗೂಡುಕಟ್ಟಲು ಮರಕುಟಿಕ ಮಾಡಿರುವ ರಂಧ್ರಗಳನ್ನೇ ಉಪಯೋಗಿಸುತ್ತವೆ. ವಯಸ್ಕ ಹಕ್ಕಿಗಳು ಜುಲೈ ಮತ್ತು ಸೆಪ್ಟೆಂಬರ್ ನಡುವೆ ವೇಗವಾಗಿ ಗರಿಗಳು ಉದುರುತ್ತವೆ, ಆದರೂ ಕೆಲವು ಹಕ್ಕಿಗಳು ಚಳಿಗಾಲದಲ್ಲಿಯೂ ಉದುರುತ್ತವೆ. ವ್ರೈನೆಕ್ ಉಪಕುಟುಂಬ ಜಿಂಜಿನೇ ಜಿಂಕ್ಸ್ ಎಂಬ ಒಂದು ಕುಲ ಹೊಂದಿದೆ, ಇದನ್ನು 1758ರಲ್ಲಿ ಸ್ವೀಡಿಷ್ ಪ್ರಕೃತಿಶಾಸ್ತ್ರಜ್ಞ ಕಾರ್ಲ್ ಲಿನ್ನಿಯಸ್ ತನ್ನ ಸಿಸ್ಟಮಾ ನೇಚುರೇನ 10ನೇ ಆವೃತ್ತಿಯಲ್ಲಿ ಈ ಹಕ್ಕಿಗಳ ಬಗ್ಗೆ ಪರಿಚಯಿಸಿದ್ದಾನೆ. ವ್ರೈನೆಕ್ ಈ ಕುಲದ ಪಕ್ಷಿಗಳು ಉದ್ರೇಕಗೊಂಡಾಗ ತಮ್ಮ ಕುತ್ತಿಗೆಯನ್ನು ತಿರುಚುವ ಮತ್ತು ಒರಗುವ ಅಭ್ಯಾಸ ಸೂಚಿಸುತ್ತದೆ. ಇದನ್ನು1585ರಲ್ಲಿ ದಾಖಲಿಸಲಾಗಿದೆ. ಕೆಂಪು ಗಂಟಲಿನ ವ್ರೈನೆಕ್ ಅನ್ನು ಮೊದಲು ಜರ್ಮನ್ ಪಕ್ಷಿಶಾಸ್ತ್ರಜ್ಞ ಜೋಹಾನ್ ಜಾರ್ಜ್ ವ್ಯಾಗ್ಲರ್ 1830ರಲ್ಲಿ ವಿವರಿಸಿದ್ದಾರೆ. ಮರಕುಟಿಕ ಹಕ್ಕಿ ಕುಟುಂಬ ಸುಮಾರು ಐವತ್ತು ಮಿಲಿಯನ್ ವರ್ಷಗಳ ಹಿಂದೆ ಇತರ ಪಿಸಿಫಾರ್ಮ್‌ಗಳಿಂದ ಭಿನ್ನವಾಗಿದೆ ಎಂದು ಸಂಶೋಧನೆ ಮಾಡಲಾಗಿದೆ. ಪ್ಲಿಯೊಸೀನ್ (ಐದು ಮಿಲಿಯನ್ ವರ್ಷಗಳ ಹಿಂದೆ) ಮರಕುಟಿಕಗಳು ಈಗ ಇರುವಂತೆಯೇ ಇದ್ದವು. ರೈನೆಕ್ ಪಕ್ಷಿಗಳು ಸಮಶೀತೋಷ್ಣ ಯುರೋಪ್ ಮತ್ತು ಏಷ್ಯಾದ್ಯಂತ ಸಂತಾನೋತ್ಪತ್ತಿ ಮಾಡುತ್ತವೆ ಎಂದು ಬಳ್ಳಾರಿಉಪವಲಯ ಅರಣ್ಯಾಧಿಕಾರಿಗಳು ಅರಣ್ಯ ಸಂಚಾರ ದಳ ಪಿ.ಮಹೇಶ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಷ್ಟಗಿ ರೈಲ್ವೆ ಮೇಲ್ಸೇತುವೆ ಶೀಘ್ರ ಲೋಕಾರ್ಪಣೆ
ಕುಷ್ಟಗಿ ತಾಲೂಕಿನಾದ್ಯಂತ ವಿಜಯದಶಮಿ ಸಂಭ್ರಮ