ಹೊಸಕೋಟೆ: ಯಾದವ ಭವನ ಸಂಪೂರ್ಣ ನಿರ್ಮಾಣಗೊಂಡಿದ್ದು ಉದ್ಘಾಟನೆಗೆ ಮುಖ್ಯಮಂತ್ರಿಗಳು, ಸಚಿವರು ಹಾಗೂ ರಾಜ್ಯಾಧ್ಯಕ್ಷರನ್ನು ಆಹ್ವಾನಿಸಿ ಶೀಘ್ರದಲ್ಲೇ ಅದ್ಧೂರಿ ಕಾರ್ಯಕ್ರಮ ಮಾಡಲಾಗುವುದು ಎಂದು ತಾಲೂಕು ಯಾದವ ಸಂಘದ ಅಧ್ಯಕ್ಷ ವಿ.ಪ್ರಸಾದ್ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮುದಾಯ ಭವನ ಉದ್ಘಾಟನೆಗೆ ಮುಖ್ಯಮಂತ್ರಿಗಳ ಸಮಯ ನಿಗದಿಪಡಿಸಿದ ಮೇಲೆ ಕಾರ್ಯಕ್ರಮ ದಿನಾಂಕ ತಿಳಿಸಲಾಗುವುದು. ಅದಕ್ಕೂ ಮುನ್ನ ನೆರೆಯ ಜಿಲ್ಲೆಗಳ ಯಾದವ ಸಂಘದ ಪದಾಧಿಕಾರಿಗಳ ಸಭೆ ಕರೆದು ಹೊಸಕೋಟೆ ತಾಲೂಕಿನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದರು.
ಬಾಕ್ಸ್ .............
ಗೊಂದಲ ಮೂಡಿಸಬೇಡಿ: ಪ್ರಸಾದ್ ಮನವಿ1990ರಲ್ಲಿ ಕಾನೂನು ಬದ್ದವಾಗಿ ತಾಲೂಕು ಯಾದವ ಸಂಘ ಅಸ್ತಿತ್ವಕ್ಕೆ ಬಂದಿದೆ. ಸಹಕಾರ ಸಂಘಗಳ ಅಧಿನಿಯಮಾನುಸಾರ ನೋಂದಣಿಯೂ ಆಗಿದೆ. ಭವನ ನಿರ್ಮಾಣಕ್ಕೆ ಸಂಪೂರ್ಣ ಜವಾಬ್ದಾರಿ ಸಂಘವೇ ನಿರ್ವಹಿಸಿದೆ. ಇತ್ತೀಚೆಗೆ ರಾಜಕೀಯ ಲಾಭಕ್ಕಾಗಿ ಸಮುದಾಯದವರು ಬೇರೆ ಬೇರೆ ಸಂಘಗಳನ್ನು ಸ್ಥಾಪಿಸಿಕೊಂಡು ಭವನ ನಿರ್ಮಾಣಕ್ಕೆ ನಮ್ಮ ಕೊಡುಗೆ ಇದೆ ಎನ್ನುತಿದ್ದಾರೆ. ಆದರೆ ತಾಲೂಕು ಯಾದವ ಸಂಘ ಬಿಟ್ಟು ಬೇರಾವ ಸಂಘವೂ ಭವನ ನಿರ್ಮಾಣಕ್ಕೆ ಸಹಕರಿಸಿಲ್ಲ. 2017ರಲ್ಲಿ ಸರ್ವೆ ನಂ.300ರಲ್ಲಿ ಸರ್ಕಾರದಿಂದ ಜಾಗ ಮಂಜೂರು ಮಾಡಿಸಿ ಸಿದ್ದರಾಮಯ್ಯ ಸರ್ಕಾರದಿಂದ 30 ಲಕ್ಷ, ವೀರಪ್ಪ ಮೊಯ್ಲಿ ಅವರ ಅನುದಾನದಲ್ಲಿ 20 ಲಕ್ಷ, ಮಾಜಿ ಸಚಿವ ಎಂಟಿಬಿ ನಾಗರಾಜ್ 15 ಲಕ್ಷ, ಶಾಸಕ ಶರತ್ ಬಚ್ಚೇಗೌಡರು 25 ಲಕ್ಷ ದೇಣಿಗೆ ಹಾಗೂ ಸಮುದಾಯದ ಮುಖಂಡರಿಂದ ದೇಣಿಗೆ ಪಡೆದು ಭವನ ನಿರ್ಮಿಸಿದ್ದೇವೆ. ಕೆಲವರು ರಾಜಕೀಯ ಉದ್ದೇಶಕ್ಕಾಗಿ ಭವನ ನಿರ್ಮಾಣದಲ್ಲಿ ಗೊಂದಲ ಮೂಡಿಸುತ್ತಿದ್ದು, ಸಮುದಾಯ ಒಡೆಯುವ ಕೆಲಸ ಮಾಡಬಾರದು ಎಂದು ತಾಲೂಕು ಯಾದವ ಸಂಘದ ಅಧ್ಯಕ್ಷ ವಿ ಪ್ರಸಾದ್ ತಿಳಿಸಿದರು.
ಹೊಸಕೋಟೆ ಯಾದವ ಭವನದಲ್ಲಿ ತಾಲೂಕು ಯಾದವ ಸಂಘದ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ವಿ ಪ್ರಸಾದ್ ಸಮುದಾಯ ಭವನದ ಉದ್ಘಾಟನೆ ಬಗ್ಗೆ ಮಾತನಾಡಿದರು.