20ರಂದು ಚಿಕ್ಕೋಡಿಯಲ್ಲಿ ಯಾದವ ಸಂಘದ ಶತಮಾನೋತ್ಸವ

KannadaprabhaNewsNetwork |  
Published : Apr 10, 2025, 01:00 AM IST
ಹಾವೇರಿಯ ಪ್ರವಾಸಿ ಮಂದಿರದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ರಾಜ್ಯ ವಿಧಾನಪರಿಷತ್ ಸದಸ್ಯ, ಯಾದವ ಸಂಘದ ಅಧ್ಯಕ್ಷ ಡಿ.ಟಿ. ಶ್ರೀನಿವಾಸ್ ಮಾತನಾಡಿದರು. | Kannada Prabha

ಸಾರಾಂಶ

ಸರ್ಕಾರದ ಗಮನ ಸೆಳೆಯಲು ಇದೊಂದು ಸುವರ್ಣ ಅವಕಾಶ. ಪಕ್ಷಭೇದ ಮರೆತು ಸಮಾಜದ ಶ್ರೇಯೋಭಿವೃದ್ಧಿಗೆ ಎಲ್ಲರೂ ಕೈಜೋಡಿಸೋಣ ಎಂದು ಮುಖಂಡರು ತಿಳಿಸಿದರು.

ಹಾವೇರಿ: ಕರ್ನಾಟಕ ರಾಜ್ಯ ಯಾದವ ಸಂಘದ ಶತಮಾನೋತ್ಸವ ಹಾಗೂ ಯಾದವಾನಂದ ಸ್ವಾಮೀಜಿಯವರ 16ನೇ ಪಟ್ಟಾಭಿಷೇಕ ಸಮಾರಂಭ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಜಿಲ್ಲಾ ಕ್ರೀಡಾಂಗಣದ ಅಮಟೂರು ಬಾಳಪ್ಪ ಮಂಟಪದಲ್ಲಿ ಏ. 20ರಂದು ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ರಾಜ್ಯ ವಿಧಾನಪರಿಷತ್ ಸದಸ್ಯ, ಯಾದವ ಸಂಘದ ಅಧ್ಯಕ್ಷ ಡಿ.ಟಿ. ಶ್ರೀನಿವಾಸ್ ತಿಳಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಯಾದವ ಸಂಘದ ಆಶ್ರಯದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್, ಶಾಸಕರಾದ ಧೀರಜ್ ಮುನಿರಾಜು, ಎಂ. ನಾಗರಾಜ್ ಯಾದವ್ ಹಾಗೂ ಬೆಳಗಾವಿ ಜಿಲ್ಲೆಯ ಎಲ್ಲ ಶಾಸಕರು, ಸಂಸದರು, ಮಾಜಿ ಶಾಸಕರು, ಮಾಜಿ ಸಂಸದರು, ಅಖಿಲ ಭಾರತ ಯಾದವ ಮಹಾಸಭಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು. ಸಂಘದ ಮಾಜಿ ಜಿಲ್ಲಾಧ್ಯಕ್ಷ ಬಿ.ಡಿ. ಸಿದ್ದಪ್ಪಳವರ, ಮಾಜಿ ಪ್ರಧಾನ ಕಾರ್ಯದರ್ಶಿ ಪಂಚಪ್ಪ ತೋಲಕೊಪ್ಪ ಮಾತನಾಡಿ, ಯಾದವ ಅಭಿವೃದ್ಧಿ ನಿಗಮ ಹಾಗೂ ಎಸ್‌ಟಿ ಸೇರ್ಪಡೆಯಾಗಬೇಕು ಎಂದರು.ಜಿಲ್ಲಾ ಸಂಘದ ಅಧ್ಯಕ್ಷ ಹೊನ್ನಪ್ಪ ಹಾಲಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘಟನೆಯಲ್ಲಿ ಬಲವಿದೆ. ಈ ಸಮಾರಂಭ ಐತಿಹಾಸಿಕ ದಾಖಲೆಯಾಗಲು ಜಿಲ್ಲೆಯ ಸಮಾಜದವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಸರ್ಕಾರದ ಗಮನ ಸೆಳೆಯಲು ಇದೊಂದು ಸುವರ್ಣ ಅವಕಾಶ. ಪಕ್ಷಭೇದ ಮರೆತು ಸಮಾಜದ ಶ್ರೇಯೋಭಿವೃದ್ಧಿಗೆ ಎಲ್ಲರೂ ಕೈಜೋಡಿಸೋಣ ಎಂದರು.ಈ ವೇಳೆ ರಾಜ್ಯ ಸಂಘದ ಲಕ್ಷ್ಮಿನಾರಾಯಣ್, ನಾರಾಯಣಗೌಡ್ರ, ಶಶಿಕುಮಾರ್, ಬಿ.ಎಂ. ಕೃಷ್ಣಪ್ಪ ಹಾಗೂ ಜಿಲ್ಲೆಯ ಸಿ.ಎಂ. ತಂಗೋಡರ, ಶಿವಪ್ಪ ಗೊಲ್ಲರ, ರಾಮನಗೌಡ ತಂಗೊಡರ, ಫಕ್ಕಿರೇಶ ಹಾವನೂರ, ಬಿ.ಡಿ. ಸಿದ್ದಪ್ಪನವರ, ಗದಿಗೆಪ್ಪ ಮೇಗಳಮನಿ, ಭೀಮನಗೌಡ ಪಾಟೀಲ್, ಪಿ.ಆರ್. ಗೌಡರ್, ರಮೇಶ ಗುಂಗರಕೊಪ್ಪ, ಬಸವನಗೌಡ ಸಣ್ಣಗೌಡರ, ರಾಜು ಮಲ್ಲಿಕೇರಿ, ಸೋಮಲಿಂಗಪ್ಪ ಅಂಬ್ಲೆಪ್ಪನವರ, ಹನುಮಂತಗೌಡ ಗೊಲ್ಲರ, ಎಚ್.ಕೆ. ಕೊರಡೂರ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು ಇದ್ದರು. ಪ್ರಧಾನ ಕಾರ್ಯದರ್ಶಿ ಕುಮಾರ್ ಬೇಗೂರ ಸ್ವಾಗತಿಸಿದರು. ಬಸವಣ್ಣೆಪ್ಪ ಮಲ್ಲಿಕೇರಿ ವಂದಿಸಿದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ