ಯದುವೀರ್‌ ಬ್ರಿಗೇಡ್‌ ವತಿಯಿಂದ ನಾಲ್ವಡಿ ಜಯಂತಿ

KannadaprabhaNewsNetwork |  
Published : Jun 08, 2025, 01:43 AM ISTUpdated : Jun 08, 2025, 01:44 AM IST
16 | Kannada Prabha

ಸಾರಾಂಶ

ಯದುವೀರ್ ಒಡೆಯರ್ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳನ್ನು ಮೈಸೂರು ಭಾಗಕ್ಕೆ ತಂದು ಇಲ್ಲಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

ಫೋಟೋ - 6ಎಂವೈಎಸ್‌ 16ಕನ್ನಡಪ್ರಭ ವಾರ್ತೆ ಮೈಸೂರುಯದುವೀರ್ ಬ್ರಿಗೇಡ್ ವತಿಯಿಂದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಅಂಗವಾಗಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ನೂರಾರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.ಮೈಸೂರಿನ ನಿವೇದಿತನಗರದ ಎಸ್.ಆರ್. ಸುಬ್ಬರಾವ್ ಉದ್ಯಾನವನ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅಲ್ಲದೇ ನಾನಾ ಕ್ಷೇತ್ರಗಳ ಸಾಧಕರಾದ ವಕೀಲ ಪಿ.ಜೆ. ರಾಘವೇಂದ್ರ, ಎಪಿಎನ್ ಪ್ರಾಪರ್ಟಿಸ್‌ ನ ಪಾಲುದಾರ ಎ.ಪಿ. ನಾಗೇಶ್, ಕೆ.ಆರ್. ಆಸ್ಪತ್ರೆ ವೈದ್ಯ ಆರ್. ಯೋಗೀಶ್, ಸಹಾಯಕ ಪ್ರಾಧ್ಯಾಪಕ ಡಾ.ಎಚ್.ಬಿ. ಬೆಟ್ಟಸ್ವಾಮಿ, ಸಾಮಾಜಿಕ ಕಾರ್ಯಕರ್ತ ಎಚ್.ವಿ. ಶಿವಕುಮಾರ್, ಪ್ರಗತಿಪರ ರೈತ ರವಿಕುಮಾರ್ ದಾರಿಪುರ, ಆಶಾ ಕಾರ್ಯಕರ್ತೆಯರಾದ ನಂದಿನಿ, ರೇಖಾ, ಶುಶ್ರೂಷಕಿ ಎಂ.ಎನ್. ಪದ್ಮಾ, ಸಮಾಜ ಸೇವಕ ಕೆ. ರಘುರಾಮ್ ವಾಜಪೇಯಿ, ನಗರ ಪಾಲಿಕೆ ವಲಯ ಕಚೇರಿ 3ರ ಸಹಾಯಕ ಆಯುಕ್ತ ಟಿ.ಎಸ್. ಸತ್ಯಮೂರ್ತಿ, ಕೆಆರ್‌ಐಡಿಎಲ್ ಇಇ ಎಸ್.ಟಿ. ತಿಪ್ಪಾರೆಡ್ಡಿ, ಜ್ಯೋತಿ ಕಾಲೇಜು ಪ್ರಾಂಶುಪಾಲ ಡಾ. ಭರತ್ ರಾಜ್, ಕುಸ್ತಿಪಟು ಪೈ. ಹೊಸಳ್ಳಿ ಶಿವು ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.ಇದಕ್ಕೂ ಮುನ್ನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಮೈಸೂರು- ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಗಣ್ಯರು ಸಮಾರಂಭ ಉದ್ಘಾಟಿಸಿದರು.ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ ಮಾತನಾಡಿ, ಶ್ರೇಷ್ಠ ಆಡಳಿತಗಾರರು, ಪ್ರಜಾಪಾಲಕರು, ಪ್ರಜೆಗಳಿಗೆ ಪ್ರಿಯರೂ ಆಗಿ ಅಭಿವೃದ್ಧಿಯ ನಂದನವನವನ್ನು ಸಂಸ್ಥಾನದ ತುಂಬೆಲ್ಲಾ ಹರಡಿದವರು ನಮ್ಮ ನಾಲ್ವಡಿ ಎಂದು ಅಭಿಮಾನ ವ್ಯಕ್ತಪಡಿಸಿದರು.ಯದುವೀರ್ ಒಡೆಯರ್ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳನ್ನು ಮೈಸೂರು ಭಾಗಕ್ಕೆ ತಂದು ಇಲ್ಲಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಆ ಮೂಲಕ ಕೃಷಿ, ಕೈಗಾರಿಕೆ, ರೈಲ್ವೆ, ಔದ್ಯೋಗಿಕ ಕ್ಷೇತ್ರಗಳಲ್ಲಿ ಹಲವು ಅವಕಾಶಗಳನ್ನು ಸೃಷ್ಟಿಸುತ್ತಿದ್ದಾರೆ’ ಎಂದರು.ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಶ್ರೀ ಮುಕ್ತಿದಾನಂದಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ನರರೋಗ ತಜ್ಞ ಡಾ. ಶುಶ್ರುಷ್ ಗೌಡ, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು, ಬಿಜೆಪಿ ಮುಖಂಡರಾದ ಅಪ್ಪಣ್ಣ, ಗೋಪಾಲ್‌ ರಾವ್, ರಾಕೇಶ್ ಭಟ್, ಜೆಡಿಎಸ್ ಮುಖಂಡ ಸಿ. ಶೇಖರ್ ಇದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ