ಕೊಂಡದಕುಳಿ ರಾಮಚಂದ್ರ ಹೆಗಡೆಗೆ ಯಕ್ಷಧ್ರುವ ಪಟ್ಲ ಪ್ರಶಸ್ತಿ

KannadaprabhaNewsNetwork |  
Published : May 27, 2024, 01:01 AM IST
ರಾಮಚಂದ್ರ ಹೆಗಡೆ ಕೊಂಡದಕುಳಿ ಅವರಿಗೆ ಯಕ್ಷಧ್ರುವ ಪಟ್ಲ ಪ್ರಶಸ್ತಿ ಪ್ರದಾನ ಮಾಡಲಾಯಿತು. | Kannada Prabha

ಸಾರಾಂಶ

ಯಕ್ಷಧ್ರುವ ಪಟ್ಲ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ರಾಮಚಂದ್ರ ಹೆಗಡೆ ಕೊಂಡದಕುಳಿ ಅವರಿಗೆ 2024ರ ಯಕ್ಷಧ್ರುವ ಪಟ್ಲ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ನಗರದ ಅಡ್ಯಾರ್‌ ಗಾರ್ಡನ್‌ನಲ್ಲಿ ಭಾನುವಾರ ನಡೆದ ಯಕ್ಷಧ್ರುವ ಪಟ್ಲ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ರಾಮಚಂದ್ರ ಹೆಗಡೆ ಕೊಂಡದಕುಳಿ ಅವರಿಗೆ 2024ರ ಯಕ್ಷಧ್ರುವ ಪಟ್ಲ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತಾಡಿದ ಕೊಂಡದಕುಳಿ, ಕಲಾವಿದನಾದವ ಪ್ರಶಸ್ತಿಗಾಗಿ ಫೈಲ್ ಹಿಡಿದುಕೊಂಡು ರಾಜಕಾರಣಿಗಳ ಬಳಿ ಹೋಗುವುದು, ಪ್ರಭಾವ ಬೀರುವುದು ಮಾಡಬಾರದು. ಪ್ರಶಸ್ತಿಗೆ ಯೋಗ್ಯರಾಗಿದ್ದರೆ ಅದು ಹುಡುಕಿಕೊಂಡು ಬರುತ್ತದೆ. ಆಗ ಮಾತ್ರ ಆ ಪ್ರಶಸ್ತಿಗೆ ಮರ್ಯಾದೆ ಜಾಸ್ತಿ. ಯಕ್ಷಗಾನ ಕಲೆಗೆ ನೀರು, ಗೊಬ್ಬರ ಹಾಕಿ ಬೆಳೆಸಿದವರು ಹಳೆಯ ತಲೆಮಾರಿನವರು. ಈಗ ಆ ಕೆಲಸವನ್ನು ಪಟ್ಲ ಫೌಂಡೇಶನ್ ಮಾಡುತ್ತಾ ಬಂದಿದೆ ಎಂದು ಹೇಳಿದರು.ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ, ಪಟ್ಲ ಸತೀಶ್ ಶೆಟ್ಟಿ ನಿಜವಾದ ಬಿಗ್ ಬಾಸ್. ಎಲ್ಲ ಭೇದ ಭಾವ ಮರೆತು ಸಮಾಜಮುಖಿ ಚಿಂತನೆ ಇಲ್ಲಿ ಸಾಕಾರವಾಗಿದೆ ಎಂದರು.

ಪಟ್ಲ ಫೌಂಡೇಶನ್ ಗೌರವಾಧ್ಯಕ್ಷ, ಹೇರಂಭ ಕೆಮಿಕಲ್ ಇಂಡಸ್ಟ್ರಿಸ್ ಮುಂಬೈ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉದ್ಯಮಿ ಕೆ.ಕೆ. ಶೆಟ್ಟಿ, ಫಾರ್ಚುನ್ ಗ್ರೂಫ್ ಮಾಲಕ ವಕ್ವಾಡಿ ಪ್ರವೀಣ್ ಶೆಟ್ಟಿ, ಗೋಪಾಲ ಶೆಟ್ಟಿ, ರಘು ಎಲ್. ಶೆಟ್ಟಿ, ತಲ್ಲೂರು ಶಿವರಾಮ್ ಶೆಟ್ಟಿ, ಸಂತೋಷ್ ಕುಮಾರ್ ರೈ, ಕನ್ಯಾನ ರಘುರಾಮ ಶೆಟ್ಟಿ, ಹರೀಶ್ ಶೇರಿಗಾರ್, ಆನಂದ್ ಸಿ. ಕುಂದರ್, ಕೃಷ್ಣಮೂರ್ತಿ ಮಂಜ, ಎನ್.ಟಿ. ಪೂಜಾರಿ, ಅಮರಾನಾಥ ಎಸ್.ಎಸ್. ಭಂಡಾರಿ, ಸುಧಾಕರ್ ಶೆಟ್ಟಿ ಸುಗ್ಗಿ, ಅಶೋಕ್ ಶೆಟ್ಟಿ ಬೆಳ್ಳಾಡಿ, ಉಳಿ ಯೋಗೀಂದ್ರ ಭಟ್ ಯುಎಸ್ಎ, ಆಶಾ ಆನಂದ ಶೆಟ್ಟಿ, ಮೋಹನ್ ದಾಸ್ ಶೆಟ್ಟಿ ಉಳ್ತೂರು, ಅಜಿತ್ ಶೆಟ್ಟಿ ಅಂಕಲೇಶ್ವರ, ಗಿರೀಶ್ ಶೆಟ್ಟಿ ಕಟೀಲು, ಪಟ್ಲ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಭಂಡಾರಿ, ಸಿಎ ಸುದೇಶ್ ಕುಮಾರ್ ರೈ, ಅಶೋಕ್ ಶೆಟ್ಟಿ, ಉದಯ ಕುಮಾರ್ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ, ರವಿಚಂದ್ರ ಶೆಟ್ಟಿ, ಡಾ. ಮನು ರಾವ್, ದುರ್ಗಾ ಪ್ರಕಾಶ್ ಪಡುಬಿದ್ರಿ, ಜಗನ್ನಾಥ ಶೆಟ್ಟಿ ಬಾಳ, ರಾಜೀವ ಪೂಜಾರಿ ಕೈಕಂಬ ಮತ್ತಿತರರು ಇದ್ದರು.

ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕ ಪಟ್ಲ ಸತೀಶ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. 2024ರ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿ ಪುರಸ್ಕೃತ ಸಿಎ ದಿವಾಕರ್ ರಾವ್ ಹಾಗೂ ಶೈಲಾ ದಿವಾಕರ್ ದಂಪತಿಯನ್ನು ಸನ್ಮಾನಿಸಲಾಯಿತು.........................

ಪಟ್ಲ ಫೌಂಡೇಶನ್‌ ಕಾರ್ಯ ಅದ್ಭುತ: ಕಿಚ್ಚ ಸುದೀಪ್‌ ಕನ್ನಡ ಚಿತ್ರರಂಗದ ಹೆಸರಾಂತ ನಟ ಸುದೀಪ್‌ ಸಮಾರಂಭದಲ್ಲಿ ಪಾಲ್ಗೊಂಡರು. ಈ ವೇಳೆ ಮಾತನಾಡಿದ ಅವರು, ಪಟ್ಲ ಫೌಂಡೇಶನ್ ಆಲದ ಮರ ಇದ್ದಂತೆ, ಕಲಾವಿದರ ಕಷ್ಟವನ್ನು ಅರಿತು ಸಂಘಟನೆ ಅವರನ್ನು ಸಲಹುತ್ತಿದೆ. ಪಟ್ಲ ಸತೀಶ್ ಶೆಟ್ಟಿ ಅವರ ಸಾಮಾಜಿಕ ಕಾರ್ಯ ಅದ್ಭುತವಾದದ್ದು. ನನ್ನ ಅಮ್ಮ ಇಲ್ಲಿಯವರೇ ಆಗಿರುವ ಕಾರಣ ನಾನು ಕೂಡಾ ತುಳುವನೇ. ಆದರೆ ನನಗೆ ತುಳು ಮಾತಾಡಲು ಕಲಿಸಿಲ್ಲ. ನನಗೆ ತಿಳಿದಂತೆ ಮಂಗಳೂರಿನ ಜನರು ಸ್ವಾಭಿಮಾನಿಗಳು. ಇಲ್ಲಿನ ಜನರ ಮನಸ್ಸಲ್ಲಿ ಇಷ್ಟು ಪ್ರೀತಿ ಸಿಕ್ಕಿರುವುದೇ ನನ್ನ ಭಾಗ್ಯ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!