ಅಂಬಿಕಾ ಯಕ್ಷಕಲಾ ವೃಂದದ ವಾರ್ಷಿಕೋತ್ಸವ

KannadaprabhaNewsNetwork |  
Published : Feb 02, 2026, 02:45 AM IST
ಫೋಟೋ: 30ಪಿಟಿಆರ್‌-ಯಕ್ಷಗಾನಅಂಬಿಕಾ ಯಕ್ಷಕಲಾ ವೃಂದದಿಂದ ಯಕ್ಷಗಾನ ನಡೆಯಿತು.  | Kannada Prabha

ಸಾರಾಂಶ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರಾಯೋಜಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಯಕ್ಷಗಾನ ತಂಡ ಅಂಬಿಕಾ ಯಕ್ಷಕಲಾ ವೃಂದದಿಂದ ಯಕ್ಷಗಾನ ವಾರ್ಷಿಕೋತ್ಸವ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರಾಯೋಜಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಯಕ್ಷಗಾನ ತಂಡ ಅಂಬಿಕಾ ಯಕ್ಷಕಲಾ ವೃಂದದಿಂದ ಯಕ್ಷಗಾನ ವಾರ್ಷಿಕೋತ್ಸವ ಕಾರ್ಯಕ್ರಮ ಸಂಸ್ಥೆಯ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ನಡೆಯಿತು. ಯಕ್ಷಗುರು ಬಾಲಕೃಷ್ಣ ಪೂಜಾರಿ ಉಡ್ಡಂಗಳ ಅವರ ನಿರ್ದೇಶನದಲ್ಲಿ ಅಂಬಿಕಾ ಸಂಸ್ಥೆಯ ಉಪನ್ಯಾಸಕ ಸತೀಶ್ ಇರ್ದೆ ಅವರ ಸಂಯೋಜನೆಯಲ್ಲಿ ಮೂಡಿಬಂದ ಈ ಯಕ್ಷಕಲಾ ಪ್ರದರ್ಶನ ನೋಡುಗರ ಗಮನ ಸೆಳೆಯಿತು. ಒಟ್ಟು ೩೨ ಮಂದಿ ವಿದ್ಯಾರ್ಥಿಗಳಿಂದ ಗುರುದಕ್ಷಿಣೆ - ಏಕಲವ್ಯ - ಶಾಂಭವಿ ವಿಲಾಸ ಪ್ರಸಂಗಗಳು ಪ್ರಸ್ತುತಗೊಂಡವು.ಹಿಮ್ಮೇಳದಲ್ಲಿ ಭಾಗವತರಾಗಿ ಸತೀಶ್ ಇರ್ದೆ, ಯೋಗೀಶ್ ಕಡಂಬಳಿತ್ತಾಯ, ಚೆಂಡೆ ಹಾಗೂ ಮದ್ದಳೆ ವಾದನದಲ್ಲಿ ರಾಜೇಂದ್ರ ಪ್ರಸಾದ್ ಪುಂಡಿಕಾಯಿ, ಪ್ರಮೋದ್ ಪಾಣಾಜೆ, ಅದ್ವೈತ ಕೃಷ್ಣ ಹಾಗೂ ಶಿಶಿರ್ ಕುಮಾರ್ ಸಹಕರಿಸಿದರೆ ಚಕ್ರತಾಳವನ್ನು ನಾಗೇಶ್ ಆಚಾರ್ಯ ನಡೆಸಿಕೊಟ್ಟರು.

ಮುಮ್ಮೇಳದಲ್ಲಿ ವಿದ್ಯಾರ್ಥಿಗಳಾದ ಧನ್ವಿ, ಸಂಹಿತ್ ಲೋಬೋ, ಅಭಿನವ, ಆದಿತ್ಯ, ಮೋಕ್ಷ್, ಚಾರ್ವಿ, ವಿಷ್ಮಾ, ಸಾತ್ವಿಕ್, ಪರೀಕ್ಷಿತ್, ಅಮೋಘ, ಶ್ರೀಹಾನ್, ಶ್ರೀಯಾನ್, ಆರಾಧ್ಯ ವೈ.ಡಿ., ಪ್ರಚೇತ್, ಅಹನ್ ಕೆ.ಆರ್., ಶಾರ್ವಿ, ದೃಷಾನ ಸುರುಳಿ, ಭಾರ್ಗವ್, ಹೇಮಂತ್, ದೈವಿಕ್, ಐಶಿನಿ, ವಾತ್ಸಲ್ಯ, ಸಮರ್ಥ್, ಶ್ರೀಯಂ, ಮನೀಷಾ, ಪ್ರಾಪ್ತಿ, ಶಶಾಂಕ್, ಆರಾಧ್ಯ, ಪ್ರಖ್ಯಾತ್, ರಿಷಾನ್, ಶ್ರೀವತ್ಸ ಹಾಗೂ ಯಶಸ್ ಭಾಗವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ